ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ನಿವೃತ್ತಿ ಕಾರಣಗಳಿಂದ ಸುದ್ದಿಯಲ್ಲಿಲ್ಲ. ಬದಲಿಗೆ ತಮಗೆ ಅಭಿಮಾನಿಗಳು ಅಭಿಮಾನದಿದ ಎಂಎಸ್ ಧೋನಿ ಅವರಿಗೆ ಹಲವು ಹೆಸರುಗಳನ್ನು ನೋಡಿದ್ದಾರೆ. ಅದ್ರಲ್ಲಿ ಕ್ಯಾಪ್ಟನ್ ಕೂಲ್ ಎಂಬ ಹೆಸರು ಸಹ ಬಹಳ ಫೇಮಸ್. ಈಗ ಈ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿಸಿಕೊಳ್ಳಲು ಮಾಹಿ ಅರ್ಜಿ ಸಲ್ಲಿಸಿದ್ದಾಗಿ ತಿಳಿದು ಬಂದಿದೆ.
ಎಂಎಸ್ ಧೋನಿ ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್ ಪಡೆದಿದ್ದೇ ಆದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಕ್ಯಾಪ್ಟನ್ ಕೂಲ್ ಎಂಬ ಪದವನ್ನು ಬಳಸಲು ಆಗುವುದಿಲ್ಲ. ಈ ಹೆಸರಿಗ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಪೋರ್ಟಲ್‌ಗಾಗಿ ಮಾಹಿ ಜೂನ್ 5ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಮಹೇಂದ್ರ ಸಿಂಗ್ ಧೋನಿ ತಮಗೆ ಅಭಿಮಾನಿಗಳು ನೀಡಿರುವ ಪ್ರೀತಿಯ ಟ್ಯಾಗ್‌ನ್ನು ಮಾಹಿ ತಮ್ಮ ತರಬೇತಿ ಕೇಂದ್ರಗಳಿಗೆ ಇಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಟ್ರೇಡ್‌ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11 (1) ರ ಅಡಿಯಲ್ಲಿ ಅಡಚಣೆ ಉಂಟಾಯಿತು. ಕ್ಯಾಪ್ಟನ್ ಕೂಲ್ ಎಂಬ ಹೆಸರನ್ನು ಅನೆಕ ವರ್ಷಗಳಿಂದ ಜನರು ಮಾಹಿಗೆ ನೀಡಿದ್ದಾರೆ ಎಂದು ಧೋನಿ ಪರ ವಕೀಲರು ವಾದಿಸಸಿದ್ದಾರೆ ಎಂದು ತಿಳಿದು ಬಂದಿದೆ.
ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿತ್ತು. ಅಲ್ಲದೆ ಧೋನಿ, ಐಸಿಸಿ ಪ್ರಯೋಜಿತ ಮೂರೂ ಟ್ರೋಫಿಗಳನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು 2007ರಲ್ಲಿ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಈ ಸಾಧನೆಗೆ ಐಸಿಸಿ ಇತ್ತೀಚಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ.

ತಂಡಕ್ಕೆ ಎದುರಾದ ಸಂಕಷ್ಟದ ಪರಿಸ್ಥಿತಿಗಳಲ್ಲೂ ಕ್ಯಾಪ್ಟನ್ ಕೂಲ್ ತಮ್ಮ ತಾಳ್ಮೆಯನ್ನು ಎಂದಿಗೂ ಕಳೆದುಕೊಳ್ಳುತ್ತಿರಲಿಲ್ಲ. ಎಂತಹದ್ದೇ ಸನ್ನಿವೇಶ ಇದ್ದರೂ ತಾವು ಹಾಗೂ ಬೇರೆ ಆಟಗಾರ ಒತ್ತಡಕ್ಕೆ ಒಳಗಾಗದಂತೆ ಪ್ಲ್ಯಾನ್ ಮಾಡುತ್ತಿದ್ದರು. ಅಲ್ಲದೆ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿಯೂ ಇವರ ನಿಸ್ಸೀಮರು. ಹೀಗಾಗಿ ಅಭಿಮಾನಿಗಳು ಇವರಿಗೆ ಪ್ರೀತಿಯಿಂದ ಕೂಲ್ ಕ್ಯಾಪ್ಟನ್ ಎಂಬ ಪಟ್ಟ ಕಟ್ಟಿದ್ದಾರೆ.
ಎಂಎಸ್ ಧೋನಿ ಭಾರತದ ಪರ 90 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 6 ಶತಕ, 33 ಅರ್ಧಶತಕಗಳನ್ನು ಒಳಗೊಂಡಂತೆ 4876 ರನ್ ಸಿಡಿಸಿದ್ದಾರೆ. ಇನ್ನು 350 ಏಕದಿನ ಪಂದ್ಯಗಳನ್ನು ಆಡಿರುವ ಮಾಹಿ 50.57ರ ಸರಾಸರಿಯಲ್ಲಿ 10773 ರನ್ ಕಲೆ ಹಾಕಿದ್ದಾರೆ. ಈ ವೇಲೆ 10 ಶತಕ ಹಾಗೂ 73 ಅರ್ಧಶತಕಗಳು ಸೇರಿವೆ. ಇನ್ನು ಚುಟುಕು ಫಾರ್ಮೆಟ್‌ನಲ್ಲೂ ಧೋನಿ ಒಬ್ಬ ಬೆಸ್ಟ್ ಪ್ಲೇಯರ್. ಇವರು 98 ಟಿ20 ಪಂದ್ಯಗಳನ್ನು ಆಡಿದ್ದು, 2 ಅರ್ಧಶತಕ ಸೇರಿದಂತೆ 1617 ರನ್ ಬಾರಿಸಿದ್ದಾರೆ.