Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈಯದ್ ಕಿರ್ಮಾನಿ ದಾಖಲೆ ಮುರಿಯಲು ಧೋನಿ ಸಜ್ಜು

ಬ್ರಿಸ್ಬೇನ್, ಡಿ.16: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಕರ್ನಾಟಕದ ಹೆಮ್ಮೆಯ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅವರ ದಾಖಲೆಯನ್ನು ಧೋನಿ ಮುರಿಯಲಿದ್ದಾರೆ.

ಗಬ್ಬಾದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಧೋನಿ ಅವರು 28 ವರ್ಷ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ. ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗಾಯದ ಸಮಸ್ಯೆಯಿಂದ ತಪ್ಪಿಸಿಕೊಂಡಿದ್ದ ಎಂಎಸ್ ಧೋನಿ ಅವರು ಬ್ರಿಸ್ಬೇನ್ ನ ಟೆಸ್ಟ್ ಆಡಲು ಫಿಟ್ ಆಗಿದ್ದಾರೆ.

ಬ್ರಿಸ್ಬೇನ್ ನಲ್ಲಿ ವೃದ್ಧಿಮಾನ್ ಸಹಾ ಬದಲಿಗೆ ವಿಕೆಟ್ ಕೀಪರ್ ಆಗಿ ಧೋನಿ ಕಣಕ್ಕಿಳಿಯುತ್ತಿದ್ದಂತೆ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ವಿಕೆಟ್ ಕೀಪರ್ ಎನಿಸಲಿದ್ದಾರೆ. ಇಲ್ಲಿ ತನಕ ಈ ದಾಖಲೆ ಸೈಯದ್ ಕಿಮಾರ್ನಿ ಹೆಸರಿನಲ್ಲಿತ್ತು.

MS Dhoni set to break Syed Kirmani's record

ಕಿರ್ಮಾನಿ ಅವರು 1976 ರಿಂದ 1986ರ ತನಕ 88 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಧೋನಿ ಈಗ 88 ಪಂದ್ಯಗಳನ್ನಾಡಿದ್ದು ನಾಳೆ ಆಸೀಸ್ ವಿರುದ್ಧ 89ನೇ ಪಂದ್ಯವಾಡಲಿದ್ದಾರೆ.

33 ವರ್ಷ ವಯಸ್ಸಿನ ಧೋನಿ ಅವರು ಶ್ರೀಲಂಕಾ ವಿರುದ್ಧ 2005ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿದ್ದು, 88 ಪಂದ್ಯಗಳ ಪೈಕಿ 58 ಪಂದ್ಯಗಳಿಗೆ ನಾಯಕರಾಗಿದ್ದಾರೆ. ಅತಿ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಕೂಡಾ ಧೋನಿ ಹೆಸರಿನಲ್ಲಿದೆ. 280 ವಿಕೆಟ್ ಧೋನಿ ಕಿತ್ತಿದ್ದಾರೆ(243 ಕ್ಯಾಚ್, 37 ಸ್ಟಂಪಿಂಗ್)

ಕಿರ್ಮಾನಿ ಅವರು 88 ಪಂದ್ಯಗಳಲ್ಲಿ 38 ಸ್ಟಂಪಿಂಗ್ಸ್ ಹಾಗೂ 160 ಕ್ಯಾಚ್ ಪಡೆದುಕೊಂಡಿದ್ದರು. ಧೋನಿ ಮತ್ತು ಕಿರ್ಮಾನಿ ಇಬ್ಬರು ವಿಶ್ವಕಪ್ ವಿಜೇತ ತಂಡದಲ್ಲಿದ್ದರು. ಕಿಮಾರ್ನಿ ಅವರು 1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದರು, ಧೋನಿ 2011 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.

ಟೀಂ ಇಂಡಿಯಾದ ಟಾಪ್ 6 ವಿಕೆಟ್ ಕೀಪರ್ ಗಳು:
* 88-ಸೈಯದ್ ಕಿರ್ಮಾನಿ, ಎಂಎಸ್ ಧೋನಿ
* 49-ಕಿರಣ್ ಮೋರೆ
* 46- ಫರೂಖ್ ಇಂಜಿನಿಯರ್
* 44-ನಯನ್ ಮೋಂಗಿಯಾ
* 21- ಎನ್ ಎಸ್ ತಮ್ಹಾನೆ
* 16- ದಿನೇಶ್ ಕಾರ್ತಿಕ್ (23 ಟೆಸ್ಟ್ ಪಂದ್ಯಗಳನ್ನಾಡಿದ್ದು 7 ಪಂದ್ಯಗಳಲ್ಲಿ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಂಡಿದ್ದರು)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+