For Quick Alerts
ALLOW NOTIFICATIONS  
For Daily Alerts
 

MS Dhoni: ಐಪಿಎಲ್‌ನಲ್ಲಿ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ ಮಾಹಿ

ಇಂಡಿಯನ್ ಪ್ರೀಮಿಯರ್ ಲೀಗ್‌ ಆರಂಭವಾಗಿದೆ. ಈ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ತಂಡದ ಪ್ರದರ್ಶನದಿಂದ ಅಭಿಮಾನಿಗಳು ಕಂಗಾಲಾಗಿದ್ದಾರೆ. ಅಲ್ಲದೆ ಆಟಗಾರರ ಆಟದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಸಾಲು ಸಾಲು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಆದರೆ ಧೋನಿ ವಿಕೆಟ್‌ ಹಿಂದೆ ದಾಖಲೆಯ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ.

ಮಾಹಿ ತಮ್ಮ ಬ್ಯಾಟಿಂಗ್‌ನಿಂದ ನಿಜಕ್ಕೂ ತಂಡಕ್ಕೆ ನೆರವಾಗುವಲ್ಲಿ ವಿಫಲರಾಗುತ್ತಿರಬಹುದು. ಆದರೆ ವಿಕೆಟ್‌ ಕೀಪರ್‌ ಆಗಿ ಮಹೇಂದ್ರ ಸಿಂಗ್ ಧೋನಿ ಕಮಾಲ್ ಇನ್ನು ಹಾಗೇ ಇದೆ. ಏಪ್ರಿಲ್ 8 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ, ಧೋನಿ ಬ್ಯಾಟಿಂಗ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ ಆದರೆ ವಿಕೆಟ್ ಕೀಪಿಂಗ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಯಾರೊಬ್ಬ ವಿಕೆಟ್‌ ಕೀಪರ್ ಮಾಡದ ಸಾಧನೆಯನ್ನು ಮಾಹಿ ಮಾಡಿದ್ದಾರೆ.

MS Dhoni Sets IPL Record with 150 Catches as Wicketkeeper Despite CSK s Struggles

ಪಂಜಾಬ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಸೋಲು ಕಂಡಿದೆ. ಈ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ ಮಾಡುವಾಗ ಧೋನಿ ದೊಡ್ಡ ದಾಖಲೆಗೆ ಮತ್ತೊಮ್ಮೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಅಶ್ವಿನ್‌ ಎಸೆದ ಚೆಂಡು ನೆಹಾಲ್ ವಧೇರಾ ಅವರ ಬ್ಯಾಟ್‌ ಅಂಚನ್ನು ದಾಟಿ ಸಾಗಿತು. ವಿಕೆಟ್ ಹಿಂದೆ ಮಹೇಂದ್ರ ಸಿಂಗ್ ಧೋನಿ ಕ್ಯಾಚ್ ಪಡೆದು ಇತಿಹಾಸ ನಿರ್ಮಿಸಿದರು. ಈ ಮೂಲಕ ವಿಕೆಟ್‌ ಕೀಪರ್ ಆಗಿ ಧೋನಿ ಐಪಿಎಲ್‌ನಲ್ಲಿ 150 ಕ್ಯಾಚ್‌ಗಳನ್ನು ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಧೋನಿ ಮಹಾ ದಾಖಲೆ

ಈ ಮೂಲಕ ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ 150 ಕ್ಯಾಚ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದದಲ್ಲಿ ದಿನೇಶ್‌ ಕಾರ್ತಿಕ್‌ ಇದ್ದು ಇವರು 137 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ವೃದ್ಧಿಮನ್ ಸಹಾ ಇದ್ದು ಇವರು 87 ಕ್ಯಾಚ್‌ ಕಬಳಿಸಿದ್ದಾರೆ. ಈ ಇಬ್ಬರೂ ಆಟಗಾರರು ಈಗಾಗಲೇ ಐಪಿಎಲ್‌ನಿಂದ ನಿವೃತ್ತಿ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ವಿಕೆಟ್ ಕೀಪರ್ಸ್‌

  1. ಎಂಎಸ್‌ ಧೋನಿ, 269 ಪಂದ್ಯ, 150 ಕ್ಯಾಚ್‌
  2. ಡಿನೇಶ್ ಕಾರ್ತಿಕ್, 257 ಪಂದ್ಯ, 137 ಕ್ಯಾಚ್‌
  3. ವೃದ್ಧಿಮನ್ ಸಹಾ, 170 ಪಂದ್ಯ, 87 ಕ್ಯಾಚ್‌
  4. ರಿಷಭ್‌ ಪಂತ್‌, 116 ಪಂದ್ಯ, 76 ಕ್ಯಾಚ್‌
  5. ಕ್ವಿಂಟನ್ ಡಿಕಾಕ್‌, 112 ಪಂದ್ಯ, 66 ಕ್ಯಾಚ್‌

ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್‌ನಲ್ಲಿ ಕೊಂಚ ತೊಂದರೆಯನ್ನು ಅನುಭವಿಸುತ್ತಿರುವುದು ನಿಜ. ಆದರೆ ಅವರ ವಿಕೆಟ್ ಕೀಪಿಂಗ್ ಬಗ್ಗೆ ಯಾರಿಗೂ ಸಂದೇಹ ಇಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ಮಾಹಿ, ಸೂರ್ಯಕುಮಾರ್ ಯಾದವ್ ಅವರಿಗೆ ಸ್ಟಂಪ್‌ ಔಟ್ ಮಾಡಲು ಜಸ್ಟ್‌ 0.12 ಸೆಕೆಂಡ್‌ ತೆಗೆದುಕೊಂಡಿದ್ದರು. ಇದಾದ ಬಳಿಕ ಇಂತಹದ್ದೇ ಮತ್ತೊಂದು ಸ್ಟಂಪ್‌ ಔಟ್‌ನ್ನು ಆರ್‌ಸಿಬಿ ವಿರುದ್ಧವೂ ಮಾಡಿ ಗಮನ ಸೆಳೆದರು.

Story first published: Wednesday, April 9, 2025, 17:12 [IST]
Other articles published on Apr 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+