For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ- ಅಫ್ರಿದಿ ಒಂದೇ ತಂಡದಲ್ಲಿ ಆಡ್ತಾರಂತೆ!

By Mahesh

ಲಂಡನ್, ಸೆ. 02: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ, ವಿರೇಂದರ್ ಸೆಹ್ವಾಗ್ ಹಾಗೂ ಪಾಕಿಸ್ತಾನ ಟಿ 20 ನಾಯಕ ಶಹೀದ್ ಅಫ್ರಿದಿ ಅವರು ಒಂದೇ ತಂಡದಲ್ಲಿ ಒಟ್ಟಿಗೆ ಆಡುವ ಸಂದರ್ಭ ಒದಗಿ ಬಂದಿದೆ. ಕ್ರಿಕೆಟ್ ಲೋಕದ ತಾರೆಗಳ ತಂಡದ ವಿರುದ್ಧ ವಿಶ್ವದ ಇತರೆ ಆಟಗಾರರು ಸೆಣಸಲಿದ್ದಾರೆ.

ಈ ತಿಂಗಳಿನಲ್ಲಿ ನಡೆಯುವ ಸಹಾಯಾರ್ಥ ಟಿ20 ಪಂದ್ಯದಲ್ಲಿ ಎಲ್ಲಾ ತಾರೆಗಳ ಆಟವನ್ನು ನೋಡಿ ಆನಂದಿಸಬಹುದು. ಈ ಟಿ20 ಪಂದ್ಯದಲ್ಲಿ ಮಾಜಿ ಹಾಗೂ ಹಾಲಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಲಂಡನ್ನಿನಲ್ಲಿ ಸೆಪ್ಟೆಂಬರ್ 17(ಗುರುವಾರ) ದಿ ಕಿಯಾ ಓವಲ್ ನಲ್ಲಿ ನಡೆಯಲಿದೆ.

ಹೀರೋ XI ಹಾಗೂ ಇತರೆ ವಿಶ್ವ XI ತಂಡದ ನಡುವೆ ಈ ಪಂದ್ಯ ನಡೆಯಲಿದ್ದು, ಹೀರೋ XI ತಂಡವನ್ನು ಆಂಡ್ರ್ಯೂ ಸ್ಟ್ರಾಸ್ ಮುನ್ನಡೆಸಲಿದ್ದಾರೆ. ಇತರೆ ವಿಶ್ವ XI ತಂಡಕ್ಕೆ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ನಾಯಕರಾಗಿದ್ದಾರೆ. ರೆಸ್ಟ್ ಆಫ್ ದಿ ವರ್ಲ್ಡ್ ತಂಡಕ್ಕೆ ಸುನಿಲ್ ಗವಾಸ್ಕರ್ ಮ್ಯಾನೇಜರ್ ಆಗಿದ್ದರೆ ಹೀರೋ ‍XI ತಂಡಕ್ಕೆ ಇಂಗ್ಲೆಂಡಿನ ಆಲ್ ರೌಂಡರ್ ಸರ್ ಇಯಾನ್ ಬೋಥಾಮ್ ಮ್ಯಾನೇಜರ್ ಆಗಿದ್ದಾರೆ.

MS Dhoni and Shahid Afridi in same team to face Rest of the World XI

ಕ್ರಿಕೆಟ್ ಕ್ಷೇತ್ರದ ಸೂಪರ್ ಸ್ಟಾರ್ ಗಳು ಗಳು ಒಂದೆಡೆ ಸೇರಿ ಒಟ್ಟಿಗೆ ಕ್ರಿಕೆಟ್ ಆಡುವ ಖುಷಿಯೇ ಬೇರೆ, ಸೆಪ್ಟೆಂಬರ್ 17ರಂದು ಕಿಯಾ ಓವಲ್ ಸಹಾಯಾರ್ಥ ಪಂದ್ಯದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ಎಂಎಸ್ ಧೋನಿ ಹೇಳಿದ್ದಾರೆ.

ಪ್ರೊವಿಷನಲ್ ತಂಡಗಳು:
ಹೆಲ್ಪ್ ಫಾರ್ ಹೀರೋ XI : ಆಂಡ್ರ್ಯೂ ಸ್ಟ್ರಾಸ್ (ನಾಯಕ), ಎಂಎಸ್ ಧೋನಿ, ವಿರೇಂದರ್ ಸೆಹ್ವಾಗ್, ಶಹೀದ್ ಅಫ್ರಿದಿ, ಹರ್ಷಲ್ ಗಿಬ್ಸ್, ಡೇಮಿಯನ್ ಮಾರ್ಟಿನ್, ಗ್ರಹಾಂ ಸ್ವಾನ್, ಸೈಮನ್ ಜೋನ್ಸ್, ಮ್ಯಾಥ್ಯೂ ಹೊಗಾರ್ಡ್, ಡರೇನ್ ಗೌ, ಲೆಫ್ಟಿನೆಂಟ್ ಕಮ್ಯಾಂಡರ್ ಜೊನಾಥನ್ ಪಾರ್ಕರ್, ಕೊರ್ಪಾರಲ್ ಜೇಕ್ ವ್ರೇ. ಕೋಚ್ : ಇನ್ನೂ ಹೆಸರಿಸಿಲ್ಲ, ಮ್ಯಾನೇಜರ್ : ಇಯಾನ್ ಬೋಥಂ

ರೆಸ್ಟ್ ಆಫ್ ದಿ ವರ್ಲ್ಡ್ XI : ಬ್ರೆಂಡನ್ ಮೆಕಲಮ್ (ನಾಯಕ), ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಮಹೇಲ ಜಯವರ್ದನೆ, ಗ್ರಹಾಂ ಸ್ಮಿತ್, ಡೇನಿಯಲ್ ವೆಟ್ಟೋರಿ, ಶಹಪೂರ್ ಜದ್ರಾನ್, ಅಬ್ದುಲ್ ರಜಾಕ್, ಟಿಮ್ ಸೌಥಿ, ಮೇಜರ್ ಸ್ಟೋರ್ಮ್ ಗ್ರೀನ್, ಕೋಚ್ : ಗ್ಯಾರಿ ಕರ್ಸ್ಟನ್, ಮ್ಯಾನೇಜರ್ : ಸುನಿಲ್ ಗವಾಸ್ಕರ್. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+