ಭಾರತೀಯ ಕ್ರಿಕೆಟ್‌ಗೆ ಧೋನಿ ಇನ್ನೂ ಕೊಡುವವರಿದ್ದಾರೆ: ಬಿಸಿಸಿಐ ಖಜಾಂಚಿ

ನವದೆಹಲಿ, ಮೇ 30: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಖಜಾಂಚಿ ಅನಿರುದ್ಧ್ ಚೌಧರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶ್ರೇಷ್ಠ ಕ್ರಿಕೆಟಿಗ ಧೋನಿ ಭಾರತೀಯ ಕ್ರಿಕೆಟ್‌ಗೆ ಇನ್ನೂ ಸಾಕಷ್ಟು ಕೊಡುಗೆಗಳನ್ನು ನೀಡುವವರಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.
"ಧೊನಿ ಫಿಟ್ ಆಗಿದ್ದಾರೆ. ಭಾರತದಲ್ಲಿ ಆತ ಈಗಲೂ ಬೆಸ್ಟ್ ವಿಕೆಟ್ ಕೀಪರ್. ಕ್ರಿಕೆಟ್ ವಿಚಾರದಲ್ಲಿ ಧೋನಿ ಉತ್ತಮ ಜ್ಞಾನಿ,' ಎಂದು ನೀರಜ್ ಮೋದಿ ಸ್ಕೂಲ್‌ನಲ್ಲಿ ನಡೆದ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ಅನಿರುದ್ಧ್ ಚೌಧರಿ ಹೇಳಿದ್ದಾರೆ.
'ಆಟದ ವೇಳೆ ನೀವು ಗಮನಿಸಿರಬಹುದು. ಮೈದಾನದಲ್ಲಿ ನಿಂತಿದ್ದ ಆಟಗಾರನಿಗೆ ಧೋನಿ ನಿನ್ನ ಎಡಕ್ಕೆ ಚಲಿಸು ಎಂಬಂತೆ ಸನ್ನೆ ಮಾಡುತ್ತಾರೆ. ಮತ್ತೆ ಬಲಕ್ಕೆ ಚಲಿಸು ಅನ್ನುತ್ತಾರೆ. ಕೊನೆಗೆ ಆಟಗಾರ ಮೊದಲಿದ್ದ ಅದೇ ಜಾಗಕ್ಕೆ ಬಂದು ನಿಲ್ಲುತ್ತಾನೆ. ಅಂದರೆ ಇಲ್ಲಿ ಆಟಗಾರನನ್ನು ಅಲರ್ಟ್ ಮಾಡುವ ಐಡಿಯಾ ಧೋನಿಯದ್ದಾಗಿರುತ್ತದೆ,' ಎಂದು ಚೌಧರಿ ವಿವರಿಸಿದ್ದಾರೆ.
'ನಾನೊಂದು ವೇಳೆ ನಿರ್ಧಾರ ತಾಳುವವನಾಗಿದ್ದರೆ ನಾನು ಖಂಡಿತಾ ಧೋನಿಯನ್ನು ತಂಡದಲ್ಲಿ ಹೊಂದಿರುತ್ತಿದ್ದೆ,' ಎಂದು ಅನಿರುದ್ಧ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯಬೇಕು ಏಕೆಂದರೆ ಅದು ಆದಾಯದ ದೃಷ್ಟಿಕೋನ ಮತ್ತು ದೇಸೀ ಕ್ರಿಕೆಟಿಗರಿಗೆ ಅವಕಾಶ ಎರಡೂ ವಿಚಾರದಲ್ಲೂ ತುಂಬಾ ಪ್ರಮುಖವಾದುದು ಎಂದೂ ಚೌಧರಿ ಅಭಿಪ್ರಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications