ಐಪಿಎಲ್ 2020: ಸುರೇಶ್ ರೈನಾ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮುಡಿಗೆ ಮತ್ತೊಂದು ಹಿರಿಮೆಯ ಗರಿ ಸೇರಿಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರನಾಗಿ ಭಾರತದ ಮಾಜಿ ನಾಯಕ ಧೋನಿ ಗಮನ ಸೆಳೆದಿದ್ದಾರೆ.
ಐಪಿಎಲ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಸುರೇಶ್ ರೈನಾ ಅವರ ಹೆಸರಿನಲ್ಲಿತ್ತು. 193 ಪಂದ್ಯಗಳನ್ನಾಡಿದ್ದ ರೈನಾ ಈ ದಾಖಲೆ ನಿರ್ಮಿಸಿದ್ದರು. ಆದರೆ ಅದೇ ಸಿಎಸ್‌ಕೆ ತಂಡದ ನಾಯಕ ಧೋನಿ ಈಗ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 2) ನಡೆದ ಐಪಿಎಲ್ 14ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದಿದ್ದ ಎಂಎಸ್ ಧೋನಿ 194ನೇ ಪಂದ್ಯ ಆಡಿದಂತಾಗಿದೆ. ಹೀಗಾಗಿ ರೈನಾ ದಾಖಲೆ ಬದಿಗೆ ಸರಿದಿದೆ. ರೈನಾ ಈ ಸೀಸನ್‌ನಲ್ಲಿ ಆಡುತ್ತಿಲ್ಲವಾದ್ದರಿಂದ ದಾಖಲೆ ಧೋನಿ ಹೆಸರಲ್ಲೇ ಉಳಿಯಲಿದೆ.
193 ಪಂದ್ಯಗಳನ್ನಾಡಿರುವ ರೈನಾ 38 ಅರ್ಧ ಶತಕ ಕೂಡ ಸೇರಿ 5368 ರನ್ ಬಾರಿಸಿದ್ದಾರೆ. ಇದು ಭಾರತೀಯ ಆಟಗಾರನೊಬ್ಬ ಐಪಿಎಲ್‌ನಲ್ಲಿ ಬಾರಿಸಿರುವ ಎರಡನೇ ಅತ್ಯಧಿಕ ರನ್. ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 5430 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications