For Quick Alerts
ALLOW NOTIFICATIONS  
For Daily Alerts
 

MS Dhoni: ಸುರೇಶ್‌ ರೈನಾ ದಾಖಲೆ ಅಳಿಸಿದ ಮಹೇಂದ್ರ ಸಿಂಗ್ ಧೋನಿ

ಶುಕ್ರವಾರ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬೆಂಗಳೂರು ತಂಡ 50 ರನ್‌ಗಳ ಗೆಲುವು ದಾಖಲಿಸಿತು. 17 ವರ್ಷಗಳ ಬಳಿಕ ಬೆಂಗಳೂರು ತಂಡ ಚೆನ್ನೈ ವಿರುದ್ಧದ ಅಬ್ಬರಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಸಿಎಸ್‌ಕೆ ಸೋಲು ಕಂಡಿದ್ದರೂ ಮಹೇಂದ್ರ ಸಿಂಗ್ ಧೋನಿ ದೊಡ್ಡ ರೆಕಾರ್ಡ್ ಮಾಡಿದ್ದಾರೆ.

ಬೆಂಗಳೂರು ನೀಡಿದ 197 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ತಂಡದ ಆರಂಭ ಕಳಪೆಯಾಗಿತ್ತು. ಈ ವೇಳೆ ಮಹೇಂದ್ರ ಸಿಂಗ್ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರು 16 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 30 ರನ್‌ ಬಾರಿಸಿ ಮಿಂಚಿದರು. ಧೋನಿ ಈ ಚಿಕ್ಕಇನಿಂಗ್ಸ್‌ ಸಹಾಯದಿಂದ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

MS Dhoni Surpasses Suresh Raina to Become Chennai Super Kings Highest Run-Scorer

ಚೆನ್ನೈ ಬ್ಯಾಟಿಂಗ್ ಮಾಡುವಾಗ ಕಳಪೆ ಪ್ರದರ್ಶನ ನೀಡಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸಿಎಸ್‌ಕೆ 99 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆಗಾಗಲೇ ಚೆನ್ನೈ ತಂಡದ ಸೋಲು ನಿಶ್ಚಿತವಾದಂತೆ ಕಂಡು ಬಂದಿತ್ತು. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಇಳಿದ್ರು. ಆರಂಭದಲ್ಲಿ ಕೊಂಚ ನಿಧಾನವಾಗಿ ಬ್ಯಾಟ್ ಮಾಡಿದ ಮಾಹಿ, ಕೊನೆಯ ಓವರ್‌ನಲ್ಲಿ ಕೃನಾಲ್‌ ಪಾಂಡ್ಯ ವಿರುದ್ಧ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಆದರೆ ಅಷ್ಟೊತ್ತಿಗಾಗಲೇ ಪಂದ್ಯ ಸಿಎಸ್‌ಕೆ ಕೈ ಜಾರಿ ಆಗಿತ್ತು.

ರೈನಾ ದಾಖಲೆ ಉಡೀಸ್‌

ಚೆನ್ನೈ ಪರ ಧೋನಿ 30 ರನ್‌ ಬಾರಿಸಿದರು. ಈ ಮೂಲಕ ಮಾಹಿ ಸುರೇಶ್‌ ರೈನಾ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಚೆನ್ನೈ ತಂಡದ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆ ಧೋನಿ ಅವರ ಪಾಲಾಯಿತು. ಮಹೇಂದ್ರ ಸಿಂಗ್ ಧೋನಿ 4699 ರನ್‌ ಸಿಡಿಸಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಮೊದಲು ಈ ಸ್ಥಾನದಲ್ಲಿ ಸುರೇಶ್‌ ರೈನಾ ಅವರು ಇದ್ದರು. ರೈನಾ 4687 ರನ್‌ ಸಿಡಿಸಿ ಅಗ್ರ ಸ್ಥಾನದಲ್ಲಿದ್ದರು. ಆರ್‌ಸಿಬಿ ವಿರುದ್ಧ ಧೋನಿ ಈ ದಾಖಲೆಯನ್ನು ಅಳಿಸಿ ಹಾಕಿದರು.

MS Dhoni Surpasses Suresh Raina to Become Chennai Super Kings Highest Run-Scorer

ಸೋಲಿಗೆ ಕಾರಣ ಏನು?

ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಸಾಲು ಸಾಲು ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡಿದೆ. ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್‌ ಇನಿಂಗ್ಸ್ ಆರಂಭಿಸುವುದನ್ನು ಬಿಟ್ಟು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಅಲ್ಲದೆ ಫೀಲ್ಡಿಂಗ್ ಮಾಡುವಾಗ ರಜತ್ ಪಟಿದಾರ್ ಅವರು ಬ್ಯಾಟಿಂಗ್ ಮಾಡುವ ವೇಳೆ ಚೆನ್ನೈ ಫೀಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಅಲ್ಲದೆ ಮೂರು ಕ್ಯಾಚ್‌ಗಳನ್ನು ಕೈ ಬಿಟ್ಟಿತು. ಅಲ್ಲದೆ ಮಾಹಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ.

Story first published: Saturday, March 29, 2025, 12:16 [IST]
Other articles published on Mar 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+