Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದುಬೈನಲ್ಲಿ ಕ್ರಿಕೆಟ್ ಅಕಾಡೆಮಿ ಅರಂಭಿಸಿದ ಧೋನಿ

ಬೆಂಗಳೂರು, ಆಗಸ್ಟ್ 16: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಅಕಾಡೆಮಿಯೊಂದನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ದುಬೈನಲ್ಲಿ ಪೆಸಿಫಿಕ್ ಸ್ಫೋರ್ಟ್ಸ್ ಕ್ಲಬ್ ನಲ್ಲಿ ಕೋಚಿಂಗ್ ಅಕಾಡೆಮಿ ಆರಂಭಿಸಲಿದ್ದಾರೆ.

ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ನಂತರ ಧೋನಿ ಅವರು ಕ್ರಿಕೆಟ್ ಅಕಾಡೆಮಿ ಸ್ಥಾಪಿಸುತ್ತಿರುವ ಕ್ರಿಕೆಟರ್ ಆಗಿದ್ದಾರೆ.

Dhoni to open academy in Dubai

ಪೆಸಿಫಿಕ್ ವೆಂಚರ್ಸ್ ನ ಮುಖ್ಯಸ್ಥರಾದ ಪರ್ವೇಜ್ ಖಾನ್ ಅವರು ಈ ಬಗ್ಗೆ ಘೋಷಣೆ ಮಾಡಿ, ಧೋನಿ ಅವರ ಹೆಸರಿನಲ್ಲಿ 'ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ(ಎಂಎಸ್ಡಿಸಿಎ)' ಎಂದು ಹೆಸರಿಡಲಾಗಿದೆ ಎಂದಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 20ರಿಂದ ಐದು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಆಗಸ್ಟ್ 17ರಂದು ಧೋನಿ ಅವರು ತಂಡವನ್ನು ಸೇರಲಿದ್ದಾರೆ. ಕ್ರಿಕೆಟ್, ಫುಟ್ಬಾಲ್, ಮೋಟರ್ ಸ್ಫೋರ್ಟ್ಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಧೋನಿ ಅವರು ಅಕಾಡೆಮಿ ಮೂಲಕ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲು ಬಯಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Read in English: Dhoni's academy in Dubai
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+