ಮಿಸ್ಟರ್ ಕೂಲ್ ಧೋನಿಗೆ 37, ಟ್ವಿಟ್ಟರ್‌ನಲ್ಲಿ ಶುಭಾಶಯಗಳ ಮಹಾಪೂರ
ಬೆಂಗಳೂರು, ಜುಲೈ 07: ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೊನಿಗೆ ಇಂದು 37ನೇ ವರ್ಷ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಅವರು ಕುಟುಂಬ ಹಾಗೂ ಕ್ರಿಕೆಟ್ ತಂಡದೊಂದಿಗೆ ಆಚರಿಸಿಕೊಂಡಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಅವರು ಅಲ್ಲಿಯೇ ಮಗಳು ಜೀವಾ, ಮಡದಿ ಸಾಕ್ಷಿ ಹಾಗೂ ಸಹ ಆಟಗಾರರುಜ ಜೊತೆ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಧೋನಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರವೇ ಹರಿದುಬಂದಿದ್ದು, ಐಸಿಸಿ, ಸಚಿನ್ , ಸಹ ಆಟಗಾರರು ಎಲ್ಲರೂ ತಮ್ಮ ಮೆಚ್ಚಿನ ಧೋನಿಗೆ ಶುಭಾಶಯಗಳನ್ನು ಹೇಳಿದ್ದಾರೆ.
ಸಚಿನ್ ಶುಭಾಶಯ
ಧೋನಿ ಹುಟ್ಟುಹಬಕ್ಕೆ ಶುಭಾಶಯ ತಿಳಿಸಿರುವ ಕ್ರಿಕೆಟ್ ದೇವರು ಸಚಿನ್. ಜೊತೆಗೆ ಧೋನಿ ಅವರ 500ನೇ ಅಂತರರಾಷ್ಟ್ರೀಯ ಪಂದ್ಯಕ್ಕೂ ಶುಭಾಶಯ ಹೇಳಿದ್ದಾರೆ. ಧೋನಿ ಜೊತೆಗಿರುವ ತಮ್ಮ ಚಿತ್ರವನ್ನು ಅವರು ಹಂಚಿಕೊಂಡಿಕೊಡಿದ್ದಾರೆ.
ಐಸಿಸಿ ಶುಭಾಶಯ
500 ಪಂದ್ಯಗಳು, 16,330 ರನ್, ಕೀಪರ್ ಆಗಿ ಹಿಂದೆ 780 ವಿಕೆಟ್‌ಗಳು, ಎರಡು ವಿಶ್ವಕಪ್ ಒಂದು ಚಾಂಪಿಯನ್ಸ್ ಟ್ರೋಫಿ ವಿಜೇತ ಧೋನಿಗೆ ಹುಟ್ಟುಹಬ್ಬದ ಶುಭಾಶಯ ಎಂದಿದೆ ಐಸಿಸಿ
ಬಿಸಿಸಿಐ ವಿಶೇಷ ವಿಡಿಯೋ
ಬಿಸಿಸಿಐ ವಿಶೇಷವಾಗಿ ಮಹೇಂದ್ರ ಸಿಂಗ್ ಧೋನಿಗೆ ವಿಷ್ ಮಾಡಿದ್ದು, ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಆಟಗಾರರು ಧೋನಿ ಬಗ್ಗೆ ತಮ್ಮ ಅಭಿಪ್ರಾಯ ಹೇಳಿ ಶುಭಾಶಯ ಹೇಳಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿ ಶುಭಾಶಯ ಕೋರಿದೆ.
ಸುರೇಶ್ ರೈನಾ ಟ್ವೀಟ್
ಧೋನಿಯ ಅಪ್ಪಟ ಸ್ನೇಹಿತ ಅಭಿಮಾನಿ ಸುರೇಶ್ ರೈನಾ ಅವರು ಧೋನಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಧೋನಿಗೆ ಕೇಕ್ ಮೆತ್ತಿರುವ ಚಿತ್ರವನ್ನು ಅವರು ಶೇರ್ ಮಾಡಿದ್ದಾರೆ.
ವಿರೇಂದ್ರ ಸೆಹ್ವಾಗ್ ಫನ್ನಿ ಟ್ವೀಟ್
ತಮ್ಮ ವ್ಯಂಗ್ಯ ಶೈಲಿಯ ಟ್ವೀಟ್‌ನಿಂದ ಪರಿಚಿತರಾಗಿರುವ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಅವರು ಧೋನಿ ಅವರಿಗೆ ಫನ್ನಿ ಆಗಿಯೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಧೋನಿ ಸ್ಕ್ರೀಸ್‌ಗೆ ವಾಪಾಸ್ ಬರಲು ಪ್ರಯತ್ನಿಸುತ್ತಿರುವ ಚಿತ್ರ ಅಪ್‌ಲೋಡ್ ಮಾಡಿ, ನಿಮ್ಮ ಆಯಸ್ಸು ಹೀಗೆಯೇ ಉದ್ದವಾಗಲಿ, ನೀವು ಸ್ಟಂಪ್ ಮಾಡುವ ವೇಗಕ್ಕಿಂತಲೂ ವೇಗವಾಗಿ ನಿಮ್ಮ ನಗು ಹೆಚ್ಚಾಗಲಿ ಎಂದಿರುವ ಅವರು, ಕೊನೆಯಲ್ಲಿ 'ಓಂ ಫಿನಿಶ್ ಆಯ ನಮಃ' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications