Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತ್ಯುತ್ತಮ ಐಪಿಎಲ್ ನಾಯಕನನ್ನು ಹೆಸರಿಸಿದ ಕನ್ನಡಿಗ ಕೃಷ್ಣಪ್ಪ ಗೌತಮ್

Ms Dhoni Vs Rohit Sharma Vs Virat Kohli: Krishnappa Gowtham Picks Best Ipl Captain

ಕನ್ನಡಿಗ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಐಪಿಎಲ್ ವೃತ್ತಿ ಜೀವನದಲ್ಲಿ ಈವರೆಗೆ ಕೆಲ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿರುವ ಕೆ ಗೌತಮ್ ಅತ್ಯುತ್ತಮ ದಾಂಡಿಗರೆದುರು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಗೌತಮ್ ತಮ್ಮ ನೆಚ್ಚಿನ ಐಪಿಎಲ್ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ನಾಯಕರು ಎನಿಸಿದ್ದಾರೆ. ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಆ ತಂಡಕ್ಕೆ ಸ್ಪೂರ್ತಿಯಾಗಿದ್ದಾರೆ.

ಆದರೆ ಕನ್ನಡಿಗ ಕೆ ಕೃಷ್ಣಪ್ಪ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ತನ್ನ ನೆಚ್ಚಿನ ನಾಯಕ ಎಂಬುದನ್ನು ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ ಕನ್ನಡಿಗ ಸ್ಪಿನ್ನರ್. ರೋಹಿತ್ ನಾಯಕತ್ವದಲ್ಲೇ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದ ಕಾರಣ ಆತ ತನ್ನ ನೆಚ್ಚಿನ ನಾಯಕ ಎಂದು ತಿಳಿಸಿದರು.

ಇನ್ನು ಈ ಸಂದರ್ಶನದ ಸಂದರ್ಭದಲ್ಲಿ ಕೆಲ ಕ್ರಿಕೆಟರ್‌ಗಳ ಬಗ್ಗೆ ಒಂದು ಪದದಲ್ಲಿ ಉತ್ತರಿಸುವಂತೆ ಕೇಳಿಕೊಂಡಾಗ ಗೌತಮ್ ಅದಕ್ಕೆ ಪ್ರತಿಕ್ರಿಯಿಸಿದರು. ವಿರಾಟ್ ಕೊಹ್ಲಿಗೆ ಮಿಸ್ಟರ್ ಕನ್ಸಿಸ್ಟೆಂಟ್ ಎಂದರೆ ಎಂಎಸ್ ಧೋನಿಯನ್ನು ಒಂದು ಪದದಲ್ಲಿ 'ನಾಯಕ' ಎಂದು ಉತ್ತರಿಸಿದರು.

ಐಪಿಎಲ್ 2020ರ ಆವೃತ್ತಿಯಲ್ಲಿ ಕೆ ಗೌತಮ್ ಕಿಂಗ್ ಇಲವೆನ್ ಪಂಜಾಬ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ತಂಡದಲ್ಲಿ ಇನ್ನೋರ್ವ ಕನ್ನಡಿಗ ಕೆಎಲ್ ರಾಹುಲ್ ನಾಯಕರಾಗಿದ್ದಾರೆ. ಇನ್ನು ಗೌತಮ್ ಐಪಿಎಲ್‌ನಲ್ಲಿ ಈವರೆಗೆ ಆಡಿರುವ 22 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದರೆ ಬ್ಯಾಟ್‌ನಲ್ಲಿ 144 ರನ್ ಸಿಡಿಸಿದ್ದಾರೆ.

Story first published: Friday, June 26, 2020, 21:46 [IST]
Other articles published on Jun 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+