Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಾರ್ಷಿಕ ಗುತ್ತಿಗೆ: ಧೋನಿ ಹೊರಬೀಳಲು ಕಾರಣ ಬಹಿರಂಗ

BCCI ಕಾಂಟ್ರಾಕ್ಟ್ ನಿಂದ ಧೋನಿ ಹೊರ ಬರಲು ಬಹಿರಂಗವಾಯ್ತು ಕಾರಣ | BCCI | CONTRACT | ODI | ONEINDIA KANNADA
MS Dhoni Was Informed Of Contract List Exclusion, Says BCCI Official

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಪ್ರಕಟವಾದ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಇದು ಚರ್ಚೆಯ ಕೇಂದ್ರಬಿಂದುವಾಗಿದೆ. ಮಾಜಿ ನಾಯಕ ಎಂ.ಎಸ್ ಧೋನಿ ಕ್ರಿಕೆಟ್ ಬದುಕು ಅಂತ್ಯವಾಯಿತಾ ಎಂಬ ಚರ್ಚೆಗೂ ಕಾರಣವಾಗಿದೆ. ಇದೀಗ ಬಿಸಿಸಿಐ ಅಧಿಕಾರಯೊಬ್ಬರು ಈ ವಿಚಾರವಾಗಿ ಸುದ್ದಿ ಸಂಸ್ಥೆ ಪಿಟಿಐಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಬಿಸಿಸಿಐನ ಅಧಿಕಾರಿಯ ಮಾಹಿತಿಯ ಪ್ರಕಾರ ಗುತ್ತಿಗೆ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೂ ಮುನ್ನ ಎಂ.ಎಸ್ ಧೋನಿಯನ್ನು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗುತ್ತಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತುಕತೆಯನ್ನು ನಡೆಸಲಾಗಿದ ಎಂದು ವಿವರಣೆಯನ್ನು ನೀಡಿದ್ದಾರೆ.

ಮಾಜಿ ನಾಯಕ ಎಂ.ಎಸ್ ಧೋನಿ ವಿಶ್ವಕಪ್‌ ಪಂದ್ಯಾವಳಿಯ ಬಳಿಕ ಹೊಸ ಗುತ್ತಿಗೆ ಅವಧಿ ಯಾವುದೇ ಪಂದ್ಯದಲ್ಲೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿಲ್ಲ. ಹೀಗಾಗಿ ಗುತ್ತಿಗೆ ಪಟ್ಟಿಯಲ್ಲಿ ಧೋನಿ ಸೇರ್ಪಡೆಗೊಳ್ಳುವುದಿಲ್ಲ ಎಂದು ಸ್ವತಃ ಧೋನಿಗೇ ಉನ್ನತ ಅಧಿಕಾರಿ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಚ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ, ಸಿಇಒ ರಾಹುಲ್ ಜೋಹ್ರಿ ಈ ಮೂವರಲ್ಲಿ ಯಾರು ಧೋನಿಯನ್ನು ಸಂಪರ್ಕಿಸಿದ್ದರು ಎಂಬ ಪ್ರಶ್ನೆಗೆ ಅನಾಮಧೇಯ ಅಧಿಕಾರಿ ಸ್ಪಷ್ಟನೆಯನ್ನು ನೀಡಲು ಬಯಸಿಲ್ಲ ಎಂದು ಪಿಟಿಐ ತಿಳಿಸಿದೆ.

ವಾರ್ಷಿಕ ಗುತ್ತಿಗೆ ಪಡೆದಿಲ್ಲ ಅಂದಾಕ್ಷಣ ಧೋನಿ ತಂಡದಲ್ಲಿ ಸ್ಥಾನ ಪಡೆಯಲಿ ಸಾಧ್ಯವಿಲ್ಲ ಎಂದಿಲ್ಲ. ಪ್ರೋ-ರೇಟಾ ಆಧಾರದಲ್ಲಿ ಎಂ.ಎಸ್ ಧೋನಿ ತಂಡದಲ್ಲಿ ಸ್ಥಾನವನ್ನು ಪಡೆಯಲಿ ಸಾಧ್ಯವಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಜೊತೆಗೆ ವಿಶ್ವಕಪ್‌ ಪಂದ್ಯಾವಳಿ ಮುಂದಿನ ವರ್ಷದ ಗುತ್ತಿಗೆ ಪಟ್ಟಿಯಲ್ಲಿ ಸೇರಿಕೊಳ್ಳುವುದರಿಂದ ಆಗ ಮತ್ತೆ ಧೋನಿ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳು ಅವಕಾಶವಿದ ಎಂದು ತಿಳಿಸಿದ್ದಾರೆ.

Story first published: Thursday, January 16, 2020, 21:00 [IST]
Other articles published on Jan 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+