
ರಾಂಚಿ, ಮಾರ್ಚ್ 8: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಕೊನೆಯೆರಡು ಪಂದ್ಯಗಳಲ್ಲಿ ಭಾರತ ಪರ ಮಾಜಿ ನಾಯಕ ಎಂಎಸ್ ಧೋನಿ ಆಡೋದಿಲ್ಲ. ಬದಲಿಗೆ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
ಇತ್ತಂಡಗಳ ನಡುವಣ 3ನೇ ಏಕದಿನ ಪಂದ್ಯದ ಮುಕ್ತಾಯದ ಬಳಿಕ ಬಂಗಾರ್ ಮಾತನಾಡುತ್ತ, 'ಉಳಿದೆರಡು ಪಂದ್ಯಕ್ಕಾಗಿ ನಾವು ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಹೀಗಾಗಿ ಕಡೆಯ ಎರಡು ಪಂದ್ಯಗಳಲ್ಲಿ ಧೋನಿ ಆಡುತ್ತಿಲ್ಲ. ಅವರು ವಿಶ್ರಾಂತಿ ಪಡೆಯಲಿದ್ದಾರೆ' ಎಂದು ತಿಳಿಸಿದ್ದಾರೆ.
ಶುಕ್ರವಾರ (ಮಾರ್ಚ್ 8) ರಾಂಚಿಯಲ್ಲಿ ನಡೆದ ಭಾರತ-ಆಸೀಸ್ 3ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ 32 ರನ್ ಸೋಲು ಕಂಡಿತ್ತು. ವಿರಾಟ್ ಕೊಹ್ಲಿ ಶತಕ (123) ಬಾರಿಸಿದರಾದರೂ ಉಳಿದ ಬ್ಯಾಟ್ಸ್ಮನ್‌ಗಳ ಬೆಂಬಲ ತಂಡಕ್ಕೆ ಗಮನಾರ್ಹವಾಗಿ ಲಭಿಸಲಿಲ್ಲ. ಹೀಗಾಗಿ ಏಕದಿನ ಸರಣಿಯನ್ನು ಆಸೀಸ್ 1-2ರಿಂದ ಉಳಿಸಿಕೊಂಡಿದೆ.