IPL 2025: ಮತ್ತೆ ಅಭಿಮಾನಿಗಳ ಹೃದಯ ಗೆದ್ದ ಧೋನಿ ತಿರ್ಮಾನ
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಈಗ ಬರೀ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಧೋನಿ ಅವರಿಗೆ ಏಜ್ ಇಸ್ ಜಸ್ಟ್ ನಂಬರ್ ಇದ್ದ ಹಾಗೆ. ಈಗಲೂ ಅವರು ಯುವಕರು ನಾಚಿಸುವಂತಹ ಆಟವನ್ನು ಆಡುತ್ತಾರೆ.
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಏನೇ ಮಾಡಿದ್ರೂ ವಿಭಿನ್ನವಾಗಿಯೇ ಮಾಡುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಲು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ತೀರ್ಮಾನದಿಂದ ನಿಜಕ್ಕೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ತಲೈವಾ ಅವರನ್ನು ನೋಡುವ ದೃಷ್ಟಿ ಬದಲಾಗಲಿದೆ. ಧೋನಿ ಈಗಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಲೂ ಇವರ ಮೇಲಿನ ಕ್ರೇಜ್ ಕಡಿಮೆ ಏನು ಆಗಿಲ್ಲ. ಈಗಲೂ ಮಾಹಿ ಅಂಗಳಕ್ಕೆ ಇಳಿದರೆ ಮೈದಾನ ಪೂರ್ತಿ ಹಳದಿ ಮಯವಾಗುತ್ತದೆ.

ಅಭಿಮಾನಿಗಳ ಮನ ಗೆದ್ದಿರುವ ತೀರ್ಮಾನ ಯಾವುದು?
ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ವಿಶೇಷ ಗೌರವ ಹೊಂದಿದ್ದಾರೆ. ಸಿಎಸ್‌ಕೆ ತಂಡದ ಬಗ್ಗೆ ಮಾತನಾಡುವಾಗ ಧೊನಿ ಹಲವು ಬಾರಿ ಭಾವುಕರಾಗಿದ್ದನ್ನು ಕಾಣಬಹುದು. ಚೆನ್ನೈ ತಂಡದ ಒಳಿತಿಗಾಗಿ ಧೋನಿ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆದಿವೆ. ಧೋನಿ ಐಪಿಎಲ್ 2025ಕ್ಕೂ ಮುನ್ನ ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಧೋನಿ ಮೇಲೆ ಗೌರವ ಹೆಚ್ಚಾಗುವಂತೆ ಮಾಡಿದೆ.
ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ. ಇವರ ಮುಂದಾಳತ್ವದಲ್ಲಿ ಚೆನ್ನೈ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇವರಿಗೆ ತಂಡ ದೊಡ್ಡ ಮೊತ್ತವನ್ನು ಸಂಭವಾನೆ ರೂಪದಲ್ಲಿ ನೀಡುತ್ತದೆ. ತಂಡದ ಒಳಿತಗಾಗಿ ಮಾಹಿ ತಮ್ಮ ಸಂಭವಾನೆಯನ್ನು ಕಡಿತ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಭ್ಯವಾಗಿರುವ ಮಾಹಿತಿಯಂತೆ ಧೋನಿ ಐಪಿಎಲ್ 2025 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಕೇವಲ 6 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ.

ಚೆನ್ನೈ ಪ್ಲ್ಯಾನ್ ಏನು?
ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಐಪಿಎಲ್ ಮಾಲೀಕರು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡಬೇಕಾಗುತ್ತದೆ. ಅದರಂತೆ ಚೆನ್ನೈ ಅಳೆದು ತೂಗಿ ಆಟಗಾರರನ್ನು ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ, ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ಮತಿಶಾ ಪತಿರಾನ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಧೋನಿ ಅವರನ್ನು ತಂಡ ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಬಹುದು. ಐಪಿಎಲ್ ಮ್ಯಾನೇಜ್ಮೆಂಟ್ ಇದಕ್ಕೆ ಅವಕಾಶ ನೀಡದೇ ಇದ್ದಲ್ಲಿ ಮತ್ತೆ ರಣ ತಂತ್ರ ಬದಲಾಗಬಹುದು.
ಐಪಿಎಲ್ 18ನೇ ಆವೃತ್ತಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ರಿಲೀಸ್ ಮಾಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಬಿಡುಗಡೆ ಗೊಳಿಸಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications