Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ಗೆ 18 ಆಟಗಾರರ ಶಾರ್ಟ್‌ಲಿಸ್ಟ್ ಮಾಡಿದ್ದೇವೆ: ಎಂಎಸ್‌ಕೆ ಪ್ರಸಾದ್

MSK Prasad Reveals Plan For Team India Ahead Of World Cup

ನವದೆಹಲಿ, ಫೆಬ್ರವರಿ 16: ವಿಶ್ವಕಪ್‌ ಕ್ರಿಕೆಟ್‌ಗೆ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ. ತಂಡಕ್ಕೆ ಅರ್ಹರೆನಿಸುವ 18 ಆಟಗಾರರ ಶಾರ್ಟ್ ಲಿಸ್ಟ್ ನಮ್ಮ ಬಳಿಕ ಇದೆ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ವೇಳೆ ಕಾರ್ಯಭಾರ ನಿರ್ವಹಣೆಯ ಬಗ್ಗೆ ಮಾತನಾಡುತ್ತ ಅವರು ಈ ವಿಚಾರ ತಿಳಿಸಿದರು.

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ನಡೆಯುವ 2019ರ ವಿಶ್ವಕಪ್ ವೇಳೆ ಟೀಮ್ ಇಂಡಿಯಾ ಉಲ್ಲಾಸಿತವಾಗಿ ಇರೋದು ಮುಖ್ಯ. ಹೀಗಾಗಿ ಮಾರ್ಚ್ 23ರಿಂದ ಆರಂಭಗೊಳ್ಳುವ ಐಪಿಎಲ್ ವೇಳೆ ಕಾರ್ಯಭಾರದ ನಿರ್ವಹಣೆಗೆ ಫ್ರಾಂಚೈಸಿಗಳು ಒತ್ತು ನೀಡಬೇಕೆಂದು ಅವರು ವಿವರಿಸಿದರು.

'ವಿಶ್ವಕಪ್‌ಗೆ ಸಂಬಂಧಿಸಿ ನಾವು 18 ಆಟಗಾರರ ಶಾರ್ಟ್ ಲಿಸ್ಟ್ ಮಾಡಿದ್ದೇವೆ. ವಿಶ್ವಕಪ್‌ಗೆ ಅಂತಿಮ ತಂಡ ಆರಿಸುವ ಮುನ್ನ ಅದನ್ನು ಇನ್ನೊಮ್ಮೆ ಪರಿಶೀಲಿಸಲಿದ್ದೇವೆ. ಆದ್ದರಿಂದ ಆಟಗಾರರ ಮೇಲಿನ ಕಾರ್ಯಭಾರ ನಿರ್ವಹಣೆ ಗಮನ ಹರಿಸುವುದು ಅಗತ್ಯ' ಎಂದು ಎಂಎಸ್‌ಕೆ ಹೇಳಿದರು.

ಫೆಬ್ರವರಿ 24ರಿಂದ ಆರಂಭಗೊಳ್ಳುವ ಆಸ್ಟ್ರೇಲಿಯಾ vs ಭಾರತ ಸರಣಿಗೆ ಸಂಬಂಧಿಸಿ ತಂಡಗಳನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಪ್ರಸಾದ್, 'ವಿಶ್ವಕಪ್ ವೇಳೆ ಕೆಲಸ ಹೊರೆ ನಿರ್ವಹಿಸಲು ಏನೆಲ್ಲ ಮಾಡಬಹುದು ಎನ್ನುವ ಬಗ್ಗೆ ಇನ್ನಷ್ಟು ಚರ್ಚೆಗಳಾಗಬೇಕಿವೆ. ಅನಂತರ ಅದನ್ನು ಕಾರ್ಯರೂಪಕ್ಕೆ ತರಬೇಕಿದೆ' ಎಂದರು.

Story first published: Saturday, February 16, 2019, 11:22 [IST]
Other articles published on Feb 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+