ವಿಶ್ವಕಪ್: ಧವನ್ ಜಾಗಕ್ಕೆ ಪಂತ್ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

ನವದೆಹಲಿ, ಜುಲೈ 22: ಇಂಗ್ಲೆಂಡ್ ನಲ್ಲಿ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್ 2019ರಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡಾಗ ಅವರ ಬದಲಿಗೆ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಆಡುವ 11ರಲ್ಲಿ ಸೇರಿಸಿಕೊಳ್ಳಲಾಗಿತ್ತು. ತಂಡದಲ್ಲಿ ಪಂತ್‌ಗೆ ಸ್ಥಾನ ನೀಡಿದ್ದೇಕೆಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ವೇಳೆ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡು ತಂಡದಿಂದ ಹೊರ ಬಿದ್ದಾಗ ನಂ.4ನೇ ಸ್ಥಾನದಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಆರಂಭಿಕ ಸ್ಥಾನಕ್ಕೆ, 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಪಂತ್ ಅವರನ್ನು ತರಲಾಗಿತ್ತು. ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳೂ ನಡೆದಿದ್ದವು.
'ಆಯ್ಕೆ ವಿಚಾರಕ್ಕೆ ಬಂದಾಗ ವಿಶ್ವಕಪ್‌ನಂತ ದೊಡ್ಡ ಮಟ್ಟದ ಟೂರ್ನಿಯ ವೇಳೆ ಕೆಲವೊಂದು ನಿಯಮಗಳಿರುತ್ತವೆ. ಹೀಗಾಗಿ ಚರ್ಚೆಗೆ ದಾರಿಯಾಗಬಲ್ಲ ಸುದ್ದಿಗೋಷ್ಠಿಯನ್ನು ಕರೆಯುವ ಗೋಜಿಗೆ ನಾನು ಹೋಗಲಿಲ್ಲ,' ಎಂದು ಭಾನುವಾರ (ಜುಲೈ 21) ಸುದ್ದಿಗಾರರೊಂದಿಗೆ ಮಾತನಾಡುತ್ತ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
'ಶಿಖರ್ ಧವನ್ ಗಾಯಗೊಂಡಾಗ ನಾವಾಗಲೇ ಆರಂಭಿಕ ಸ್ಥಾನಕ್ಕೆ ಮೀಸಲಿದ್ದ ಕೆಎಲ್ ರಾಹುಲ್ ಅವರನ್ನು ತಂದೆವು. ಯಾಕೆಂದರೆ ಟಾಪ್ ಆರ್ಡರ್‌ನಲ್ಲಿ ಎಡಗೈ ಬ್ಯಾಟ್ಸ್ಮನ್ ಪಂತ್ ಅವರನ್ನು ತರುವಂತಿರಲಿಲ್ಲ. ಆದರೆ ತಂಡ ನಿರ್ವಹಣಾ ಸಮಿತಿ ವಿನಂತಿಸಿಕೊಂಡಿದ್ದರಿಂದ ನಮಗೆ 4ನೇ ಕ್ರಮಾಂಕಕ್ಕೆ ಪಂತ್ ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ. ಅಲ್ಲದೆ ನಮಗೆ ಪಂತ್ ಸಾಮರ್ಥ್ಯವೇನನ್ನೋದು ಗೊತ್ತಿತ್ತು,' ಎಂದು ಎಂಎಸ್‌ಕೆ ವಿವರಿಸಿದರು.
ವಿಶ್ವಕಪ್ ವೇಳೆ ಟೀಮ್ ಇಂಡಿಯಾದ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಆಲ್ ರೌಂಡರ್ ವಿಜಯ್ ಶಂಕರ್ ಕೂಡ ಗಾಯಗೊಂಡಾಗ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಮಯಾಂಕ್‌ಗೆ ಮೈದಾನಕ್ಕಿಳಿಯುವ ಅವಕಾಶ ಲಭಿಸಿರಲಿಲ್ಲ. ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಶೆ ಅನುಭವಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications