For Quick Alerts
ALLOW NOTIFICATIONS  
For Daily Alerts
 

ಎಂಎಸ್‌ಎಲ್‌: ಎಬಿಡಿ ಬ್ಯಾಟಿಂಗ್ ಅಬ್ಬರ ವ್ಯರ್ಥ, ಕೇಪ್ ಟೌನ್ ಬ್ಲಿಟ್ಜ್‌ಗೆ ಜಯ

MSL 2018: De Villiers fifty in vain as Cape Town Blitz cruise to victory

ಕೇಪ್‌ಟೌನ್, ನವೆಂಬರ್ 17: ಪಾಕಿಸ್ತಾನದ ಮೊಹಮ್ಮದ್ ನವಾಝ್ ಅವರ ಆಲ್‌ ರೌಂಡರ್ ಆಟದ ನೆರವಿನಿಂದಾಗಿ ಕೇಪ್‌ಟೌನ್‌ನಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಷ್ವಾನೆ ಸ್ಪಾರ್ಟನ್ಸ್ ವಿರುದ್ಧ ಕೇಪ್ ಟೌನ್ ಬ್ಲಿಟ್ಜ್‌ 49 ರನ್ ಜಯ ಸಾಧಿಸಿದೆ. ಸ್ಪಾರ್ಟನ್ಸ್ ಪರ ಎಬಿ ಡಿ ವಿಲಿಯರ್ಸ್ ಬಾರಿಸಿದ್ದ ಅರ್ಧ ಶತಕ ವ್ಯರ್ಥಗೊಂಡಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೇಪ್ ಟೌನ್ ಬ್ಲಿಟ್ಜ್‌ ತಂಡಕ್ಕೆ ಕೈಲ್ ವೆರ್ರಿನ್ನೆ 53, ಮೊಹಮ್ಮದ್ ನವಾಝ್ 59, ಜೇಸನ್ ಸ್ಮಿತ್ 25 ರನ್ ಸೇರಿಸಿ ಬೆಂಬಲಿಸಿದರು. ಕೇಪ್ ಟೌನ್ ಬ್ಲಿಟ್ಜ್‌ 20 ಓವರ್ ಗಳಲ್ಲಿ 4 ವಿಕೆಟ್ ಕಳೆದು 180 ರನ್ ಪೇರಿಸಿತು.

ಷ್ವಾನೆ ಸ್ಪಾರ್ಟನ್ಸ್ ಪರ ನಾಯಕ ಎಬಿಡಿ ಮತ್ತು ಡೀನ್ ಎಲ್ಗರ್ ಮಾತ್ರ ಹೋರಾಟ ನಡೆಸಿದರು. ಉಳಿದವರ ಬೆಂಬಲ ತಂಡಕ್ಕೆ ಸಿಗಲಿಲ್ಲ. ಎಲ್ಗರ್ 32 ರನ್ ಬಾರಿಸಿದರೆ, ಎಬಿಡಿ 3 ಬೌಂಡರಿ, 5 ಸಿಕ್ಸರ್ ಸೇರಿ 59 ರನ್ ಸೇರಿಸಿದರು. ಷ್ವಾನೆ ಸ್ಪಾರ್ಟನ್ಸ್ ತಂಡ 19.3 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದು 131 ರನ್ ಪೇರಿಸಿ ಶರಣಾಯಿತು.

ಕೇಪ್ ಟೌನ್ ಬ್ಲಿಟ್ಜ್‌ ಪರ ಫೆರಿಸ್ಕೊ ​​ಆಡಮ್ಸ್ 3, ನವಾಝ್ 1 ವಿಕೆಟ್ ಕೆಡವಿ ಷ್ವಾನೆ ಸ್ಪಾರ್ಟನ್ಸ್ ಕಟ್ಟಿಹಾಕಿದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ದಕ್ಷಿಣ ಆಫ್ರಿಕಾ ಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್, ಕ್ರೀಡಾಭಿಮಾನಿಗಳನ್ನು ರಂಜಿಸಿದ್ದು ಸುಳ್ಳಲ್ಲ. ಎಬಿಸಿ ಬ್ಯಾಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

Story first published: Saturday, November 17, 2018, 18:26 [IST]
Other articles published on Nov 17, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+