ಎಂಎಸ್‌ಎಲ್: ಕ್ರಿಸ್ ಗೇಲ್ ಬಳಗ ಸೋಲಿಸಿದ ಡು ಪ್ಲೆಸಿಸ್‌ನ ಪಾರ್ಲ್ ರಾಕ್ಸ್

ಜೋಹಾನ್ಸ್‌ಬರ್ಗ್, ಡಿಸೆಂಬರ್ 10: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ (ಡಿಸೆಂಬರ್ 9) ನಡೆದ ಮಝನ್ಸಿ ಸೂಪರ್ ಲೀಗ್ 26ನೇ ಪಂದ್ಯದಲ್ಲಿ ಜೋಝಿ ಸ್ಟಾರ್ಸ್ ವಿರುದ್ಧ ಪಾರ್ಲ್ ರಾಕ್ಸ್ ತಂಡ 6 ವಿಕೆಟ್ ಗೆಲುವನ್ನಾಚರಿಸಿದೆ. (ಚಿತ್ರದಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಿದ ಥಾಮ್ಸನ್, ಕೃಪೆ: ಮಝನ್ಸಿ ಸೂಪರ್ ಲೀಗ್)
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೇನ್ ವಿಲಾಸ್ ನಾಯಕತ್ವದ ಜೋಝಿ ಸ್ಟಾರ್ಸ್ ತಂಡಕ್ಕೆ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ಮನ್, ರನ್ ಮೆಷೀನ್ ಕ್ರಿಸ್‌ಗೇಲ್ ಬೆಂಬಲ ದೊರೆಯಲಿಲ್ಲ. ಗೇಲ್ 9 ರನ್ ಗಳಿಸಿ ಕೆರ್ವಿನ್ ಮುಂಗ್ರೂಗೆ ವಿಕೆಟ್ ಒಪ್ಪಿಸಿದರು.
ಆದರೆ ತಂಡಕ್ಕೆ ಮತ್ತೊಬ್ಬ ಆಟಗಾರ ರಾಸ್ಸಿ ವ್ಯಾನ್ ಡೆರ್ ಡಸೆನ್ ಅವರ ಆಕರ್ಷಕ ಅರ್ಧ ಶತಕದ ನೆರವು ದೊರೆಯಿತು. ಡಸೆನ್, 55 ಎಸೆತಗಳಿಗೆ ಅಜೇಯ 83 ರನ್ ಸೇರಿಸಿದರು. 20 ಓವರ್‌ಗಳಲ್ಲಿ ಜೋಝಿ ಸ್ಟಾರ್ಸ್ 6 ವಿಕೆಟ್ ಕಳೆದು 170 ರನ್ ಪೇರಿಸಿತು.
171 ರನ್ ಗುರಿ ಬೆನ್ನತ್ತಿದ ಪಾರ್ಲ್ ರಾಕ್ಸ್‌ಗೆ ನಾಯಕ ಫಾ ಡು ಪ್ಲೆಸಿಸ್ 61, ಗ್ರ್ಯಾಂಟ್ ಥಾಮ್ಸನ್ ಅಜೇಯ 71 ರನ್ ಸೇರಿಸಿ ತಂಡವನ್ನು ಗೆಲುವಿನೆಡೆಗೆ ಎಳೆ ತಂದರು. ರಾಕ್ಸ್ 19.3 ಓವರ್‌ನಲ್ಲಿ 4 ವಿಕೆಟ್ ಕಳೆದು 172 ರನ್ ಪೇರಿಸುವುದರೊಂದಿಗೆ ಗೆಲುವಿನ ನಗು ನಕ್ಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications