Mukesh Kumar: 4 ವಿಕೆಟ್ ಪಡೆದು ಮಿಂಚಿದ ಮುಕೇಶ್ ಕುಮಾರ್
ಇಂಡಿಯನ್ ಪ್ರೀಮಿಯರ್ ಲಿಗ್‌ನಲ್ಲಿ ಈಗ ರಿವೇಂಜ್ ವೀಕ್ ನಡೆಯುತ್ತಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಿವೇಂಜ್ ತಿರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಡೆಲ್ಲಿ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಕೆಎಲ್ ರಾಹುಲ್, ಅಭಿಷೇಕ್ ಪೋರೆಲ್ ಅರ್ಧಶತಕ ಬಾರಿಸಿ ಮಿಂಚಿದರೆ, ಬೌಲಿಂಗ್‌ನಲ್ಲಿ ಮುಕೇಶ್ ಕುಮಾರ್ ಕಮಾಲ್ ಬೌಲಿಂಗ್ ಪ್ರದರ್ಶನ ನೀಡಿ ಲಕ್ನೋ ಬ್ಯಾಟರ್‌ಗಳನ್ನು ಕಾಡಿದರು. ಇವರ ಸ್ಥಿರ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಗರಿ ಸಹ ಸಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆಲ್ಲುತ್ತಿದಂತೆ ಬೌಲಿಂಗ್ ಮಾಡಲು ಮುಂದಾಯಿತು. ಆದರೆ ಆರಂಭಿಕ 10 ಓವರ್‌ಗಳಲ್ಲಿ ಯಾವುದೇ ವಿಕೆಟ್‌ಗಳು ಸಿಕ್ಕಿರಲಿಲ್ಲ. ಆಗ ಅಕ್ಷರ್ ಪಟೇಲ್ ಮುಖದಲ್ಲಿ ತಾನು ತಪ್ಪು ನಿರ್ಧಾರ ತೆಗೆದುಕೊಂಡೆನಾ ಎಂಬ ಭಾವ ಕಾಣುತ್ತಿತ್ತು. ಆದರೆ 10ನೇ ಓವರ್‌ನ ಕೊನೆಯ ಎಸೆದಲ್ಲಿ ದಶುಮಂತ್ ಚಮೀರಾ ಅರ್ಧಶತಕ ಬಾರಿಸಿ ಮುನ್ನಗುತ್ತಿದ್ದ ಐಡೇನ್ ಮಾರ್ಕ್ರಾಮ್ ಅವರಿಗೆ ಖೆಡ್ಡಾ ತೋಡಿದರು. ಇಲ್ಲಿಂದ ಡೆಲ್ಲಿ ಕ್ಯಾಂಪ್‌ನಲ್ಲಿ ಕೊಂಚ ಮಂದಹಾಸ ಮೂಡಿತು.

ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ನಿಕೋಲಸ್ ಪೂರನ್ ಡೆಲ್ಲಿ ವಿರುದ್ಧ ನಿರಾಸೆ ಅನುಭವಿಸಿದರು. ಇವರಿಗೆ ಮಿಚೆಲ್ ಸ್ಟಾರ್ಕ್ ಖೆಡ್ಡಾ ತೋಡಿದರು. ನಂತರ ಶುರುವಾಗಿದ್ದೇ ಮುಕೇಶ್ ಕುಮಾರ್ ಮ್ಯಾಜಿಕ್.
ಒಂದೇ ಓವರ್‌ನಲ್ಲಿ ಡಬಲ್ ವಿಕೆಟ್
14ನೇ ಓವರ್ ಮಾಡಲು ಮುಂದಾದ ಮುಕೇಶ್ ಕುಮಾರ್ ಎರಡನೇ ಎಸೆತದಲ್ಲೇ ಅಬ್ದುಲ್ ಸಮದ್‌ಗೆ ಖೆಡ್ಡಾ ತೋಡಿದಿರು. ಗಂಟೆಗೆ 136 ಕಿಲೋ ಮೀಟರ್ ವೇಗದಲ್ಲಿ ಬಂದ ಶಾರ್ಟ್ ಆಫ್ ಲೆಂಥ್ ಎಸೆತವನ್ನು ಅಬ್ದುಲ್ ಸಮದ್ ಜಸ್ಟ್ ಟಚ್ ಮಾಡಿದರು. ಚೆಂಡು ಮುಕೇಶ್ ಅವರತ್ತ ಸಾಗಿತು. ಮುಕೇಶ್ ಸಿಂಪಲ್ ಕ್ಯಾಚ್ ಪಡೆದರು. ಇದೇ ಓವರ್‌ನಲ್ಲಿ ಮತ್ತೊಮ್ಮೆ ಮುಕೇಶ್ ಅಬ್ಬರಿಸಿದರು.
14ನೇ ಓವರ್‌ನ ಕೊನೆಯ ಎಸೆತದಲ್ಲಿ 45 ರನ್ ಬಾರಿಸಿ ಮುನ್ನುಗುತ್ತಿದ್ದ ಮಿಚೆಲ್ ಮಾರ್ಷ್‌ಗೆ ಪರ್ಫೆಕ್ಟ್ ಯಾರ್ಕರ್ ಎಸೆದು ಬೋಲ್ಡ್ ಮಾಡಿದರು. ಆಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಇಂಪ್ಯಾಕ್ಟ್ ಪ್ಲೇಯರ್ ಆಯುಷ್ ಬದೋನಿ 36 ರನ್ ಬಾರಿಸಿ ಮುನ್ನಗುತ್ತಿದ್ದಾಗ ಮುಕೇಶ್ ಇವರ ಆಟಕ್ಕೆ ಫುಲ್ ಸ್ಟಾಪ್ ಹಾಕಿದರು. ಇವರು ಸಹ ಮುಕೇಶ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಬೋಲ್ಡ್ ಆದರು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ರಿಷಬ್ ಪಂತ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಮುಕೇಶ್ ಆರ್ಭಟಿಸಿದರು.
ಮುಕೇಶ್ ಕುಮಾರ್ ತಮ್ಮ ವೃತ್ತಿಜೀವನದಲ್ಲೇ ಅಮೋಘ ಸ್ಪೇಲ್ ಮಾಡಿ ಕಮಾಲ್ ಮಾಡಿದರು. ಇವರು 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ 4 ವಿಕೆಟ್ ಪಡೆದರು. ಈ ವೇಳೆ ಇವರು 11 ಡಾಟ್ ಬೌಲ್‌ಗಳನ್ನು ಸಹ ಎಸೆದಿದ್ದರು. ಇವರ ಸ್ಥಿರ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications