Mukul Choudhary: ಮುಕುಲ್ ಚೌಧರಿ ಹೆಸರು ನೆನಪಿಟ್ಟುಕೊಳ್ಳಿ; ವ್ಹಾ.. ಕೆಕೆಆರ್ ವಿರುದ್ಧ ಏನ್ ಬ್ಯಾಟಿಂಗ್
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಈ ವೇದಿಕೆಯ ಮೇಲೆ ಆಡ ಬೇಕು ಎಂಬ ಕನಸು ಅದೆಷ್ಟೋ ಕ್ರಿಕೆಟ್ ಆಟಗಾರರು ಕಂಡಿರುತ್ತಾರೆ. ಈ ಲೀಗ್ ಭಾರತದಲ್ಲಿ ಆರಂಭವಾದಾಗಿನಿಂದ ಗ್ರಾಮೀಣ ಆಟಗಾರರು ಸಹ ವಿಶ್ವ ಕ್ರಿಕೆಟ್‌ಗೆ ಪರಿಚಯವಾಗುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುವ ಈ ಯುವ ಆಟಗಾರರು ಭಾರತದಲ್ಲಿ, ಅಷ್ಟೇ ಏಕೆ ವಿಶ್ವದಲ್ಲೇ ಹೆಸರು ಪಡೆಯುತ್ತಾರೆ. ರಾತ್ರೋ ರಾತ್ರಿ ಸ್ಟಾರ್‌ಗಿರಿ ಪಡೆಯುತ್ತಾರೆ. ಇಂಹತದ್ದೇ ಒಂದು ಕೆಲಸವನ್ನು ಮಾಡಿ ವಿಶ್ವ ಕ್ರಿಕೆಟ್‌ಗೆ ಅಂಬೆಗಾಲಿಡಲು ಸಿದ್ಧರಾಗಿರುವ ಪೋರ ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಕಂಟಕವಾಗಿದ್ದಾರೆ.
ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಗುರುವಾರ 19ನೇ ಆವೃತ್ತಿಯ ಐಪಿಎಲ್‌ನ 15ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 15 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 127 ರನ್ ಸಿಡಿಸಿತ್ತು.

ಈ ಸ್ಕೋರ್ ಬೋರ್ಡ್ ನೋಡಿದ್ದ ಅದೆಷ್ಟೋ ಎಲ್‌ಎಸ್‌ಜಿ ಅಭಿಮಾನಿಗಳು ಟಿವಿ ಆಫ್ ಮಾಡಿರಲೂ ಬಹುದು. ಆದರೆ ಕೊನೆಯ 30 ಎಸೆತಗಳಲ್ಲಿ ಚಮತ್ಕಾರ ನಡೆಯಿತು. ಆಯುಷ್ ಬದೋನಿ ಔಟ್ ಆಗುತ್ತಿದ್ದಂತೆ ಬ್ಯಾಟಿಂಗ್ ಭಾರವನ್ನು ತಮ್ಮದೇ ಮೇಲೆ ಹೊತ್ತುಕೊಂಡು ಆಡಿದ ಬ್ಯಾಟರ್, 21 ವರ್ಷದ ಮುಕುಲ್ ಚೌಧರಿ. ಈ ಪೋರನ ಬ್ಯಾಟಿಂಗ್ ಕಂಡು ಅಭಿಮಾನಿಗಳು ಹೇಳಿದ್ದು ವ್ಹಾ.. ಏನ್ ಬ್ಯಾಟಿಂಗ್.
ಮುಕುಲ್ ಚೌಧರಿ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಎಲ್‌ಎಸ್‌ಜಿ ಅಭಿಮಾನಿಗಳಿಗೆ ಹಬ್ಬದೂಟ ಹಾಕಿದರು. ಭಾರತದ ಐಕಾನಿಕ ಈಡನ್ ಗಾರ್ಡನ್ ಅಂಗಳದಲ್ಲಿ ಎಂದು ಮರೆಯದಂತಹ ಇನಿಂಗ್ಸ್ ಕಟ್ಟಿದರು. ಕೇವಲ 27 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 54 ರನ್ ಬಾರಿಸಿದ ಮುಕುಲ್ ಚೌಧರಿ ಎಲ್‌ಎಸ್‌ಜಿ ಅಭಿಮಾನಿಗಳ ನ್ಯೂ ಪೋಸ್ಟರ್ ಬಾಯ್ ಆದರು.
ಯಾರು ಈ ಮುಕುಲ್ ಚೌಧರಿ?
ಮುಕುಲ್ ಚೌಧರಿ ರಾಜಸ್ಥಾನ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ವಿಕೆಟ್ ಕೀಪರ್ ಬ್ಯಾಟರ್. ಇವರಿಗೆ ಈಗ 21 ವರ್ಷ. ಈಗಾಗಲೇ ಇವರು ದೇಶೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ಆಟಗಾರ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನದ ಪರ ಆಡಿದ 5 ಪಂದ್ಯಗಳಲ್ಲಿ 173 ರನ್ ಸಿಡಿಸಿದ ಬ್ಯಾಟರ್. ಈ ವೇಳೆ ಇವರು 10 ಬೌಂಡರಿ, 13 ಸಿಕ್ಸರ್ ಸಿಡಿಸಿದರು. ಟಿ20 ಕ್ರಿಕೆಟ್‌ನಲ್ಲಿ ಇವರ ಸ್ಟ್ರೈಕ್ ರೇಟ್ 198 ಆಗಿದೆ.
ಹುಟ್ಟುವ ಮುನ್ನವೇ ಆರಂಭವಾಗಿತ್ತು ಕ್ರಿಕೆಟಿಗನಾಗುವ ಕನಸು
ಮುಕುಲ್ ಚೌಧರಿ ರಾಜಸ್ಥಾನ ರಾಜ್ಯದ ಜುನ್ಜುನುನಲ್ಲಿ ಆಗಸ್ಟ್ 4, 2004ರಲ್ಲಿ ಜನಿಸಿದರು. ಅಂಡರ್ 19 ಸೇರಿದಂತೆ ಹಲವು ವಯೋಮಿತಿಗಳಲ್ಲಿ ಆಡಿ ಸೈ ಎನಿಸಿಕೊಂಡರು. ಇವರು ಹುಟ್ಟುವ ಮುನ್ನವೇ ಇವರ ತಂದೆ ಇವರನ್ನು ಕ್ರಿಕೆಟ್ ಆಟಗಾರನಾಗಿ ಮಾಡುವ ಕನಸನ್ನೇ ಕಂಡಿದ್ದರು. ಅಂದು ಕಂಡ ಕನಸು ಕೋಲ್ಕತ್ತದಲ್ಲಿ ಫಲ ನೀಡಿದೆ.
ಹರಾಜಿನಲ್ಲಿ 2.60 ಕೋಟಿ
ಅಬುದಾಬಿಯಲ್ಲಿ ಇತ್ತೀಚಿಗೆ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಮುಕುಲ್ ಚೌಧರಿ ಅವರು ಹರಾಜಿನ ಅಂಗಳಕ್ಕೆ ಎಂಟ್ರಿ ನೀಡಿದರು. ಇವರು 30 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದರು. ಆದರೆ ಎಲ್‌ಎಸ್‌ಜಿ ಇವರಿಗೆ 2.60 ಕೋಟಿ ರೂ. ನೀಡಿ ಖರೀದಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications