ಮಧ್ಯರಾತ್ರಿ ಮುಂಬೈ ಮೂಲದ ಕ್ರಿಕೆಟಿಗನ ಕಗ್ಗೊಲೆ!

ಮುಂಬೈ, ಜೂನ್ 07: ಕ್ರಿಕೆಟಿಗ ಹಾಗೂ ತರಬೇತುದಾರನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಭಂದುಪ್ ಮೂಲದವರಾದ ರಾಕೇಶ್ ಪನ್ವರ್ ಎಂಬುವವರನ್ನು ಗುರುವಾರ ತಡರಾತ್ರಿ ಇಲ್ಲಿನ ಪೆಟ್ರೋಲ್ ಪಂಪ್ ಒಂದರ ಸಮೀಪ ಮಚ್ಚು ಲಾಂಗ್‌ಗಳಿಂದ ಬರ್ಭರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಮುಂಬೈನ್ ನಾರ್ತ್-ಈಸ್ಟ್ ಭಾಗದಲ್ಲಿ ಇರುವ ಪೆಟ್ರೋಲ್ ಪಂಪ್ ಒಂದರ ಸಮೀಪ ರಾಕೇಶ್ ಪನ್ವರ್ ತಮ್ಮ ಪ್ರೇಯಸಿ ಜೊತೆಗೆ ಇದ್ದ ಸಂದರ್ಭದಲ್ಲಿ ಶಸ್ತ್ರದಾರಿಗಳಾದ ಮೂವರು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಕೇಶ್ ಅವರನ್ನು ಹತ್ತಿರದ ಮುಲುಂಡ್ ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ರಕ್ತಸ್ರಾವದ ಕಾರಣ ಅವರು ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ,'' ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕೊಲೆಗೆ ನಿಖರ ಕಾರಣ ಏನೆಂಬುದು ಈವರೆಗೆ ತಿಳಿದು ಬಂದಿಲ್ಲ. ಪ್ರೀತಿ- ಪ್ರೇಮ ವಿಚಾರವೇ ಕೊಲೆಗೆ ಕಾಣರ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications