ಐಪಿಎಲ್‌ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಅವರ ಸುವರ್ಣ ಪಯಣ ಕೊನೆಗೊಂಡಿದೆ. ಮುಂಬೈ ಇಂಡಿಯನ್ಸ್ ಶುಕ್ರವಾರ ಸಂಜೆ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ 2024 ರ ಹೊಸ ನಾಯಕನಾಗಿ ನೇಮಿಸುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದೆ. ಐದು ಬಾರಿ ಮುಂಬೈ ಚಾಂಪಿಯನ್ ಆಗಿದ್ದ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರವನ್ನು 2023 ರ ವಿಶ್ವಕಪ್ ಸಮಯದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
2023 ರ ವಿಶ್ವಕಪ್‌ನಲ್ಲಿಯೇ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರವನ್ನು ಮುಂಬೈ ಇಂಡಿಯನ್ಸ್ ತೆಗೆದುಕೊಂಡಿತ್ತು. ರೋಹಿತ್ ಐಪಿಎಲ್ 2024 ರಲ್ಲಿ ಮುಂಬೈ ತಂಡದ ನಾಯಕನಾಗಿ ತಾನು ಮುಂದುವರೆಯುವುದಿಲ್ಲ ಎಂದು ಹೇಳಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಈ ಮೊದಲೇ ಮುಂಬೈ ರೋಹಿತ್‌ಗೆ ತಿಳಿಸಿತ್ತು. ರೋಹಿತ್ ಕೂಡ ಹಾರ್ದಿಕ್ ನಾಯಕತ್ವದಲ್ಲಿ ಆಡಲು ಒಪ್ಪಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಮುಂಬೈ ಇಂಡಿಯನ್ಸ್ ಮೊದಲು ವ್ಯಾಪಾರಕ್ಕಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಸಂಪರ್ಕಿಸಿದಾಗ, ಹಾರ್ದಿಕ್ ತಮ್ಮ ಹಳೆಯ ತಂಡದ ಮುಂದೆ ಒಂದು ಷರತ್ತು ಹಾಕಿದ್ದರು. ಮುಂಬೈ ಇಂಡಿಯನ್ಸ್ ತಂಡಕ್ಕೆ ತಂಡದ ಮರಳ ಬೇಕೆಂದರೆ ತಮಗೆ ನಾಯಕನ ಜವಾಬ್ದಾರಿಯನ್ನು ನೀಡಬೇಕು ಎಂದು ತಿಳಿಸಿದ್ದರು.
ಹಾರ್ದಿಕ್ ಅವರ ಈ ಷರತ್ತನ್ನು ಮುಂಬೈ ಒಪ್ಪಿಕೊಂಡಿದೆ. ಇದಾದ ನಂತರವೇ ಹಾರ್ದಿಕ್ ಗುಜರಾತ್ ಟೈಟಾನ್ಸ್‌ಗೆ ಟ್ರೇಡ್ ಆಗಿದ್ದರು. ಅಂದರೆ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರವನ್ನು ಬಹಳ ಹಿಂದೆಯೇ ತೆಗೆದುಕೊಳ್ಳಲಾಗಿತ್ತು.
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಐದು ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ. ಹಿಟ್‌ಮ್ಯಾನ್ 2011 ರಲ್ಲಿ ಮುಂಬೈ ತಂಡವನ್ನು ಸೇರಿಕೊಂಡರು. 2013 ರಲ್ಲಿ ತಂಡದ ನಾಯಕನನ್ನಾಗಿ ಘೋಷಿಸಲಾಯಿತು. ರೋಹಿತ್ ಇದೇ ವರ್ಷ ತಂಡಕ್ಕೆ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ತೊಡಿಸಿದ್ದರು. ಆಗಿನಿಂದ ಇವರ ಮೇಲೆ ಭರವಸೆ ಹೆಚ್ಚಿತು. ಇದಾದ ನಂತರ 2015, 2017, 2019 ಮತ್ತು 2020ರಲ್ಲಿ ರೋಹಿತ್ ನಾಯಕತ್ವದಲ್ಲಿ ಮುಂಬೈ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಐಪಿಎಲ್‌ನಲ್ಲಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರ ದಾಖಲೆ ಸರಿಸಾಟಿಯಿಲ್ಲ. ಹಾರ್ದಿಕ್ ತನ್ನ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಸೀಸನ್‌ನಲ್ಲಿ ಚಾಂಪಿಯನ್ ಆಗುವಂತೆ ಮಾಡಿದ್ದರು. ಅದೇ ಸಮಯದಲ್ಲಿ, ಕಳೆದ ಋತುವಿನಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ತಂಡವು ಫೈನಲ್ ತಲುಪಿತ್ತು.
ಇದೇ ಕಾರಣಕ್ಕೆ ಮುಂಬೈ ತಂಡ ಈ ಸೀಸನ್‌ಗಾಗಿ ಹಾರ್ದಿಕ್ ಮೇಲೆ ಬೆಟ್ಟಿಂಗ್ ನಡೆಸಿದೆ. ಇನ್ನು ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಲ ತುಂಬಲಿದ್ದಾರೆ. ಗುಜರಾತ್ ಟೈಟನ್ಸ್ ಪರ ಹಾರ್ದಿಕ್ ಪಾಂಡ್ಯ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ನಾಲ್ಕು ಓವರ್ ಬೌಲ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ.