For Quick Alerts
ALLOW NOTIFICATIONS  
For Daily Alerts
 

ಮುಂಬೈ ತಂಡಕ್ಕೆ ಎಂಟ್ರಿ ನೀಡಿದ ಮೂವರು ಸ್ಫೋಟಕ ಪ್ಲೇಯರ್ಸ್

ಇಂಡಿಯನ್ ಪ್ರೀಮಿಯರ್‌ ಲೀಗ್ ರೋಚಕ ಘಟ್ಟಕ್ಕೆ ತಲುಪಿದೆ. ಐಪಿಎಲ್‌ ಪ್ಲೇ ಆಫ್‌ಗೆ ಒಟ್ಟು ನಾಲ್ಕು ತಂಡಗಳು ಅರ್ಹತೆ ಪಡೆಯುತ್ತವೆ. ಈ ವೇಳೆ ಮೂರು ತಂಡಗಳು ಈಗಾಗಲೇ ಪ್ಲೇ ಆಫ್‌ಗೆ ಎಂಟ್ರಿ ಪಡೆದುಕೊಂಡಿವೆ. ಗುಜರಾತ್‌ ಟೈಟಾನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಪಂಜಾಬ್‌ ಕಿಂಗ್ಸ್‌ ತಂಡಗಳು ಅರ್ಹತೆ ಪಡೆದಿವೆ. ಈಗ ಉಳಿದ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಬಿಗ್ ಫೈಟ್ ನಡೆಯಲಿದೆ. ಈ ಫೈಟ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ ಮ್ಯಾಚ್‌ ವಿನ್ನರ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಉಭಯ ತಂಡಗಳ ಆಟಗಾರರು ಪ್ಲೇ ಆಫ್‌ ಐಪಿಎಲ್‌ ತಂಡಕ್ಕೆ ಇರುವುದಿಲ್ಲ. ಹೀಗಾಗಿ ಬಿಸಿಸಿಐ ಈ ದೇಶದ ಆಟಗಾರರಿಗೆ ಬದಲಿ ಆಟಗಾರರನ್ನು ಸೇರಿಸಿಕೊಳ್ಳುವಂತೆ ಫ್ರಾಂಚೈಸಿಗಳಿಗೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಎಲ್ಲ ತಂಡಗಳು ಬದಲಿ ಆಟಗಾರರ ಘೋಷಣೆ ಮಾಡಿದ್ದವು. ಈಗ ಮುಂಬೈ ಇಂಡಿಯನ್ಸ್‌ ಸಹ ತನ್ನ ಆಟಗಾರರನ್ನು ಘೋಷಣೆ ಮಾಡಿದೆ.

Mumbai Indians Add Three New Players for IPL 2025 Playoff Fight

ಮುಂಬೈ ತಂಡದ ವಿದೇಶಿ ಆಟಗಾರರಾದ ವಿಲ್ ಜ್ಯಾಕ್ಸ್, ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ. ಇಂಗ್ಲೆಂಡ್‌ ತಂಡದ ಜಾನಿ ಬೈರ್‌ಸ್ಟೋವ್, ರಿಚರ್ಡ್ ಗ್ಲೀಸನ್ ಮತ್ತು ಚರಿತ್ ಅಸಲಂಕಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವಿಲ್ ಜ್ಯಾಕ್ಸ್, ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ ಕೊನೆಯ ಲೀಗ್ ಪಂದ್ಯವನ್ನು ಆಡಿದ ನಂತರ ತಮ್ಮ ತಮ್ಮ ರಾಷ್ಟ್ರೀಯ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.

ಜಾನಿ ಬೇರ್‌ಸ್ಟೋ ಎಂಟ್ರಿ

ವಿಲ್‌ ಜಾಕ್ಸ್‌ ಅವರ ಬದಲಿಗೆ ಮುಂಬೈ ಇಂಗ್ಲೆಂಡ್‌ನ ಅನುಭವಿ ಆಟಗಾರ ಜಾನಿ ಬೇರ್‌ಸ್ಟೋವ್‌ ಅವರನ್ನು ಸೇರಿಸಿಕೊಂಡಿದೆ. ಇವರಿಗೆ 5.25 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಜಾನಿ ಬೇರ್‌ಸ್ಟೋ ಈಗಾಗಲೇ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರ ಆಗಮನದಿಂದ ತಂಡದ ಅಗ್ರ ಕ್ರಮಾಂಕ ಬಲಾಢ್ಯವಾದಂತೆ ಆಗಿದೆ. ಇನ್ನು ದಕ್ಷಿಣಾ ಆಫ್ರಿಕಾದ ರಯಾನ್‌ ರಿಕಲ್ಟನ್‌ ಬದಲಿಗೆ ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಇವರಿಗೆ 1 ಕೋಟಿ ರೂ. ನೀಡಿದೆ. ಇವರು ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

Mumbai Indians Add Three New Players for IPL 2025 Playoff Fight

ಇನ್ನು ಮುಂಬೈ ಕಾರ್ಬಿನ್‌ ಬಾಷ್‌ ಬದಲಿಗೆ ಶ್ರೀಲಂಕಾದ ಚರಿತ್‌ ಅಸಲಂಕಾ ಅವರನ್ನು 75 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಆಕ್ರಮಣಕಾರಿ ಬ್ಯಾಟಿಂಗ್‌ ಮಾಡುವುದಲದೆ, ಪಾರ್ಟ್ ಟೈಮ್‌ ಆಪ್ ಸ್ಪಿನ್ ಸಹ ಮಾಡಬಲ್ಲರು.

ಮುಂಬೈ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಲಿದೆ. ಈ ವೇಳೆ ಮಹತ್ವದ ಪಂದ್ಯ ಬುಧವಾರ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Tuesday, May 20, 2025, 15:30 [IST]
Other articles published on May 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+