For Quick Alerts
ALLOW NOTIFICATIONS  
For Daily Alerts
 

MI vs LSG IPL 2025: ಹಾರ್ದಿಕ್‌ vs ರಿಷಭ್‌ ರೋಚಕ ಹೆಚ್ಚಿಸಿದೆ ಕಾದಾಟ

ಇಂಡಿಯನ್ ಪ್ರೀಮಿಯರ್‌ ಲೀಗ್‌ನ 45ನೇ ಪಂದ್ಯ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿದೆ. ಉಭಯ ತಂಡಗಳು ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ತಲಾ 5 ಜಯ ಸಾಧಿಸಿದ್ದು, 10 ಅಂಕಗಳನ್ನು ಕಲೆ ಹಾಕಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಪ್ಲೇ ಆಫ್‌ಗೆ ಹತ್ತಿರವಾಗುತ್ತದೆ.

ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಲಿರುವ ಹಾರ್ದಿಕ್ ಪಾಂಡ್ಯ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ರಿಷಭ್‌ ಪಂತ್ ನಡುವಿನ ಕಾಳಗ ರೋಚಕತೆ ಹೆಚ್ಚಿಸಿದೆ. ಉಭಯ ತಂಡಗಳು ಈಗಾಗಲೇ 7 ಬಾರಿ ಐಪಿಎಲ್ ನಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಲಕ್ನೋ ಆರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಮುಂಬೈ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ. ಮುಂಬೈನ ವಾಂಖೇಡೆ ಅಂಗಳದಲ್ಲಿ ಈವರೆಗೆ ಒಟ್ಟು 120 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 55 ಬಾರಿ, ಚೇಸ್ ಮಾಡಿದ ತಂಡ 65 ಬಾರಿ ಜಯ ಸಾಧಿಸಿದೆ.

Mumbai Indians and Lucknow Super Giants Set for High-Stakes IPL 2025 Clash at Wankhede

ಸ್ಟಾರ್‌ಗಳ ಬಲ

ಮುಂಬೈ ತಂಡದ 18ನೇ ಆವೃತ್ತಿಯ ಆರಂಭದಲ್ಲಿ ಸೋಲುಗಳಿಂದ ಕಂಗೆಟ್ಟು. ಆದರೆ ಈಗ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಈ ವೇಳೆ ತಂಡದ ಸ್ಟಾರ್ ಆಟಗಾರರು ತಂಡದ ಗೆಲುವಿನಲ್ಲಿ ಅಗತ್ಯ ಕಾಣಿಕೆ ನೀಡುತ್ತಿದ್ದಾರೆ. ಜಸ್ಪ್ರಿತ್‌ ಬುಮ್ರಾ ಲಯಬದ್ಧ ದಾಳಿ ನಡೆಸುತ್ತಿದ್ದು, ದೀಪಕ್ ಚಹಾರ್‌, ಟ್ರೆಂಟ್‌ ಬೌಲ್ಟ್‌ ಹೊಸ ಚೆಂಡಿನ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಮಿಡ್ಲ್ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, ಮಿಚೆಲ್‌ ಸ್ಯಾಂಟ್ನರ್‌ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿರುವ ಟ್ರೆಂಟ್‌ ಬೌಲ್ಟ್‌ ಮೇಲೆ ವಿಶ್ವಾಸ ಹೆಚ್ಚಿದೆ.

ಆರಂಭದಲ್ಲಿ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದ ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಬ್ಯಾಕ್ ಟು ಬ್ಯಾಕ್‌ ಹಾಫ್‌ ಸೆಂಚುರಿ ಬಾರಿಸಿದ್ದಾರೆ. ಇವರು ಎದುರಾಳಿ ಬೌಲರ್‌ಗಳಿಗೆ ಸ್ವಿಂಹಸ್ವಪ್ನರಾಗಬಹುದು. ವಿಕೆಟ್‌ ಕೀಪರ್ ಬ್ಯಾಟರ್‌ ರಯನ್‌ ರಿಕಲ್ಟನ್‌, ವಿಲ್‌ ಜಾಕ್ಸ್‌, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಕಾಡಬಲ್ಲರು. ಇನ್ನು ಹಾರ್ದಿಕ್ ಪಾಂಡ್ಯ, ನಮನ್‌ ಧೀರ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ ಅಂದಾಗ ಗೆಲುವು ಸಾಧ್ಯ.

Mumbai Indians and Lucknow Super Giants Set for High-Stakes IPL 2025 Clash at Wankhede

ನಿಕೋಲಸ್‌ ಪೂರನ್ ಆರ್ಕಷಣೆ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ಬಲವಾಗಿರುವ ನಿಕೋಲಸ್ ಪೂರನ್‌ ಪ್ರಸಕ್ತ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಗರಿಷ್ಠ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಭರವಸೆ ಹೆಚ್ಚಿದೆ. ಇನ್ನು ಆರಂಭಿಕ ಮಿಚೆಲ್‌ ಮಾರ್ಷ್, ಐಡೇನ್ ಮಾರ್ಕ್ರಾಮ್‌ ಎದುರಾಳಿ ಬೌಲರ್‌ಗಳಿಗೆ ಕಾಡಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ ಅವರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಶಾರ್ದೂಲ್‌ ಠಾಕೂರ್, ಆವೇಶ್ ಖಾನ್‌, ದಿಗ್ವೇಶ್ ರಾಠಿ, ರವಿ ಬಿಷ್ಣೋಯಿ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿದಾಗ ಗೆಲುವು ಸಾಧ್ಯ.

ಸಮಯ: ಮಧ್ಯಾಹ್ನ 3.30ಕ್ಕೆ

Story first published: Sunday, April 27, 2025, 7:29 [IST]
Other articles published on Apr 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+