ಮ್ಯಾನ್ಚೆಸ್ಟರ್ ಯು., ಲಿವರ್‌ಪೂಲ್, ಬಾರ್ಕಾ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್!

ನವದೆಹಲಿ: ವಿಶ್ವ ಕ್ರೀಡೆಯಲ್ಲಿ ಫುಟ್ಬಾಲ್‌ಗಿರುಷ್ಟು ಅಭಿಮಾನಿಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹುಚ್ಚು ಕ್ರೀಡೆ ಕ್ರಿಕೆಟ್‌ಗೆ ಕೂಡ ಇಲ್ಲ. ಫುಟ್ಬಾಲ್ ಆಟಗಾರರಿಗೆ, ತಂಡಗಳಿಗೆ, ಪಂದ್ಯಗಳಿಗೆ ಅಷ್ಟು ದೊಡ್ಡಮಟ್ಟಿನ ಅಭಿಮಾನಿಗಳಿದ್ದಾರೆ. ಆದರೂ ಜನಪ್ರಿಯ ಫುಟ್ಬಾಲ್ ತಂಡಗಳಾದ ಮಾನ್ಚೆಸ್ಟರ್ ಯುನೈಟೆಡ್, ಲಿವರ್‌ಪೂಲ್ ಮತ್ತು ಬಾರ್ಸಿಲೋನಾವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ಹಿಂದಿಕ್ಕಿದೆ.
ವಿಶ್ವದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫುಟ್ಬಾಲ್ ತಂಡಗಳಾದ ಮಾನ್ಚೆಸ್ಟರ್ ಯುನೈಟೆಡ್, ಲಿವರ್‌ಪೂಲ್ ಮತ್ತು ಬಾರ್ಸಿಲೋನಾವನ್ನು ಮುಂಬೈ ಇಂಡಿಯನ್ಸ್ ತಂಡ ಸೋಲಿಸಿದ್ದು ಹೌದು, ಆದರೆ ಅದು ಜನಪ್ರಿಯತೆಯ ಮೂಲಕ ಎಂಬುದನ್ನು ಅಧ್ಯಯನವೊಂದು ಹೇಳಿದೆ.

ರೋಹಿತ್ ತಂಡ ಮುಂದು
2020ರ ಅಕ್ಟೋಬರ್-ನವೆಂಬರ್‌ನಲ್ಲಿ ಫೇಸ್ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಜನಪ್ರಿಯತೆಯನ್ನು ಪರಿಗಣಿಸಿದರೆ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಮಾನ್ಚೆಸ್ಟರ್ ಯುನೈಟೆಡ್, ಲಿವರ್‌ಪೂಲ್ ಮತ್ತು ಬಾರ್ಸಿಲೋನಾವನ್ನು ಮೀರಿಸಿದಂತಾಗಿದೆ. 2020ರಲ್ಲಿ ಚಾಂಪಿಯನ್ ಪಟ್ಟಿ ಗೆಲ್ಲುವುದರೊಂದಿಗೆ ಮುಂಬೈ 5ನೇ ಐಪಿಎಲ್ ಟ್ರೋಫಿ ಗೆದ್ದಿತ್ತು.

317 ಮಿಲಿಯನ್ ವೀಕ್ಷಣೆ
ಐಪಿಎಲ್ ವೇಳೆ ಎಂಐನಿಂದ ಎಂಐ ಲೈವ್, ಪಲ್ಟಾನ್ ಪ್ಲೇ, ವರ್ಚ್ಯುಯಲ್ ವಾಂಖೆಡೆ ಎಂಬಿತ್ಯಾದಿ ಲೈವ್ ಕಾರ್ಯಕ್ರಮಗಳು ನಡೆದಿತ್ತು. ಹೀಗಾಗಿಯೇ 2020ರ ಐಪಿಎಲ್ ಚಾಂಪಿಯನ್ಸ್ ಮುಂಬೈ ಸಾಮಾಜಿಕ ಜಾಲತಾಣ ವೀಕ್ಷಣೆಯಲ್ಲಿ 317 ಮಿಲಿಯನ್ ವೀಕ್ಷಣೆಯೊಂದಿಗೆ ಮೊದಲ ಸ್ಥಾನ ಪಡೆದಿದೆ. ಜನಪ್ರಿಯತೆಯಲ್ಲೂ ಅಗ್ರಸ್ಥಾನಕ್ಕೇರಿದೆ.

ಖ್ಯಾತ ಫೂಟ್ಬಾಲ್ ತಂಡಗಳು ಬದಿಗೆ
ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್ ಇನ್ನುಳಿದ ತಂಡಗಳ ಜನಪ್ರಿಯತೆಯ ಮಾಹಿತಿ ತೆಗೆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (277.65 ಮಿಲಿಯನ್), ಚೆನ್ನೈ ಸೂಪರ್ ಕಿಂಗ್ಸ್ (189.67 ಮಿಲಿಯನ್) ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ಅಕ್ಟೋಬರ್-ನವೆಂಬರ್‌ನಲ್ಲಿ ಮುಂಬೈ ಜನಪ್ರಿಯತೆ ಮಾನ್ಚೆಸ್ಟರ್ ಯುನೈಟೆಡ್, ಲಿವರ್‌ಪೂಲ್, ಬಾರ್ಸಿಲೋನಾ ಮತ್ತು ಆರ್ಸೆನಲ್ ಎಫ್‌ಸಿಗಳ ಜನಪ್ರಿಯತೆಗಿಂತ ಹೆಚ್ಚಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications