For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆ

Mumbai Indians become first team to play 200 matches in IPL

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡ ವಿಶೇಷ ದಾಖಲೆಗೆ ಕಾರಣವಾಗಿದೆ. ಐಪಿಎಲ್‌ನಲ್ಲಿ 200ನೇ ಪಂದ್ಯ ಆಡಿದ ಮೊದಲ ತಂಡವಾಗಿ ಮುಂಬೈ ಗುರುತಿಸಿಕೊಂಡಿದೆ. ಶನಿವಾರ (ಅಕ್ಟೋಬರ್ 31) ನಡೆದ ಐಪಿಎಲ್ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಎಂಐ ಈ ಮೈಲಿಗಲ್ಲು ಸ್ಥಾಪಿಸಿದೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯ ವೇಳೆ ಮುಂಬೈ ಎಂದಿನ ನಾಯಕ ರೋಹಿತ್ ಶರ್ಮಾ ಆಡಿರಲಿಲ್ಲ. ರೋಹಿತ್ ಗಾಯಕ್ಕೀಡಾಗಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಕೀರನ್ ಪೊಲಾರ್ಡ್ ನಾಯಕತ್ವ ವಹಿಸಿಕೊಂಡಿದ್ದರು.

ಐಪಿಎಲ್‌ನಲ್ಲಿ ಅತೀ ಹೆಚ್ಚಿನ ಪಂದ್ಯ (200) ಆಡಿ, ದಾಖಲೆ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ಅನಂತರದ ಸ್ಥಾನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (193), ಕೋಲ್ಕತ್ತಾ ನೈಟ್ ರೈಡರ್ಸ್ (191), ಕಿಂಗ್ಸ್ 11 ಪಂಜಾಬ್ (189), ಚೆನ್ನೈ ಸೂಪರ್ ಕಿಂಗ್ಸ್ (178), ರಾಜಸ್ಥಾನ್ ರಾಯಲ್ಸ್ (160), ಸನ್ ರೈಸರ್ಸ್ ಹೈದರಾಬಾದ್ (120) ತಂಡಗಳಿವೆ.

ಐಪಿಎಲ್‌ನಲ್ಲಿ ಬೇಗನೆ 150 ಪಂದ್ಯಗಳನ್ನಾಡಿದ ದಾಖಲೆ ಮುಂಬೈ ಇಂಡಿಯನ್ಸ್ ತಂಡದ್ದಾಗಿದ್ದರೆ, 50 ಪಂದ್ಯಗಳನ್ನು ಮೊದಲು ಆಡಿದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿ 100 ಪಂದ್ಯಗಳನ್ನು ವೇಗವಾಗಿ ಆಡಿದ ದಾಖಲೆಯಿದೆ.

Story first published: Saturday, October 31, 2020, 17:21 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+