MI vs SRH IPL 2025: ಮುಂಬೈ ಗೆಲುವಿಗೆ 163 ರನ್ ಗುರಿ ನೀಡಿದ ಸನ್‌ರೈಸರ್ಸ್
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ ಸಮಯೋಚಿತ ಆಟದ ಕಾಣಿಕೆ ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ಉತ್ತಮ ಜೊತೆಯಾಟ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಆದರೆ ತಾನು ಅಂದುಕೊಂಡ ಆರಂಭವನ್ನು ಮಾತ್ರ ಪಡೆಯಲಿಲ್ಲ. ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 59 ರನ್‌ಗಳ ಜೊತೆಯಾಟವನ್ನು ನೀಡಿದರು.

ಸಾಲು ಸಾಲು ಜೀವದಾನಗಳ ಲಾಭವನ್ನು ಪಡೆಯುವಲ್ಲಿ ವಿಫಲರಾದರು. ಅಭಿಷೇಕ್ ಶರ್ಮಾ 7 ಬೌಂಡರಿ ಸೇರಿದಂತೆ 40 ರನ್ ಸಿಡಿಸಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಔಟ್ ಆದರು.
ಇದೇ ಮೈದಾನದಲ್ಲಿ ಹಲವು ವರ್ಷಗಳ ಆಡಿದ ಅನುಭವ ಹೊಂದಿದ್ದ ಇಶಾನ್ ಕಿಶನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಇಶಾನ್ ತಮ್ಮ ಮೇಲೆ ಇದ್ದ ಎಲ್ಲ ಭರವಸೆಯನ್ನು ನುಚ್ಚು ನೂರು ಮಾಡಿದರು. ಇವರು 2 ರನ್‌ಗಳಿಗೆ ಆಟ ಮುಗಿಸಿದರು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ತಮ್ಮ ನೈಜ್ಯ ಆಟದ ವಿರುದ್ಧವಾಗಿ ಬ್ಯಾಟ್ ಮಾಡಿ 29 ಎಸೆತಗಳಲ್ಲಿ 28 ರನ್ ಸೇರಿಸಿ ವಿಲ್ ಜಾಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 1 ಬೌಂಡರಿ ಸೇರಿದಂತೆ 19 ರನ್ ಸಿಡಿಸಿ ಔಟ್ ಅದರು.
ಡೆತ್ ಓವರ್‌ನಲ್ಲಿ ಎಸ್‌ಆರ್‌ಎಚ್ ಕಮಾಲ್
18ನೇ ಓವರ್‌ನಲ್ಲಿ ಹ್ಯಾನ್ರಿಕ್ ಕ್ಲಾಸೇನ್ ಆರ್ಭಟ ನಡೆಸಿತು. ಈ ಓವರ್‌ನಲ್ಲಿ ಕ್ಲಾಸೇನ್ 2 ಸಿಕ್ಸರ್, 2 ಬೌಂಡರಿ ಸೇರಿದಂತೆ 21 ರನ್ ಬಾರಿಸಿ ಅಬ್ಬರಿಸಿದರು. ಆದರೆ ಇವರಿಗೆ 19ನೇ ಓವರ್‌ನ ಮೊದಲ ಎಸೆತದಲ್ಲಿ ಬುಮ್ರಾ ಖೆಡ್ಡಾ ತೋಡಿದರು. ಕ್ಲಾಸೇನ್ 28 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿ ಔಟ್ ಆದರು.
ಅನಿಕೇತ್ ವರ್ಮಾ ಅಜೇಯ 18 ರನ್ ಸಿಡಿಸಿದರು. ಇವರ ಈ ಇನಿಂಗ್ಸ್‌ನಲ್ಲಿ 2 ಸಿಕ್ಸರ್‌ಗಳು ಸೇರಿವೆ. ಇನ್ನು ಪ್ಯಾಟ್ ಕಮಿನ್ಸ್ ಅಜೇಯ 8 ರನ್ ಬಾರಿಸಿ ತಂಡಕ್ಕೆ ಆಧಾರವಾದರು. 20ನೇ ಓವರ್‌ನಲ್ಲಿ ಎಸ್‌ಆರ್‌ಎಚ್ ತಂಡ 22 ರನ್ ಬಾರಿಸಿತು. ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಸೇರಿಸಿತು.
ಮುಂಬೈ ತಂಡದ ಪರ ವಿಲ್ ಜಾಕ್ಸ್ 3 ಓವರ್ ಬೌಲ್ ಮಾಡಿ 14 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications