For Quick Alerts
ALLOW NOTIFICATIONS  
For Daily Alerts
 

IPL 2024: ಅಂದು ಬೆನ್ನಿಗೆ ನಿಂತ ನಾಯಕನ ಸ್ಥಾನವನ್ನೇ ಇಂದು ಕಸಿದುಕೊಂಡ ಸ್ಟಾರ್ ಪ್ಲೇಯರ್‌!

ಇಂಡಿಯನ್ ಪ್ರೀಮಿಯರ್‌ ಲೀಗ್ ಆರಂಭವಾದಾಗಿನಿಂದ ಯುವ ಆಟಗಾರರ ಲಕ್ ಬದಲಾಗಿದೆ. ಹಲವು ಆಟಗಾರರ ಹಣೆ ಬರಹವನ್ನು ಐಪಿಎಲ್‌ ಬದಲಿಸಿದೆ. ಆಟಗಾರರ ಜೀವನ ಶೈಲಿ ಸಹ ಐಪಿಎಲ್‌ನಿಂದ ಬದಲಾವಣೆ ಆಗಿದೆ. ಅಂದು ಯಂಗ್ ಪ್ಲೇಯರ್‌ ಆಗಿ ಹಲವು ತಂಡಗಳನ್ನು ಸೇರಿದ ಆಟಗಾರರು ಇಂದು ಸ್ಟಾರ್ ಗಿರಿಯ ಮೇಲೆ ತಮ್ಮ ರಾಜಭಾರವನ್ನು ನಡೆಸುತ್ತಿದ್ದಾರೆ.

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಂದು. ಈ ತಂಡ ಹಲವು ಸ್ಟಾರ್ ಆಟಗಾರರಿಗೆ ಬೆಳಿಸಿ ಪ್ರೋತ್ಸಾಹಿಸಿದೆ. ಅಲ್ಲದೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಈ ತಂಡದಿಂದಲೇ ಭಾರತ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಇಂದು ಅಭಿಮಾನಿಗಳ ಫೆವರೀಟ್ ಪ್ಲೇಯರ್ಸ್‌. ಈ ಪಟ್ಟಿ ದೊಡ್ಡದಿದೆ. ಆದರೆ ಪ್ರಮುಖವಾಗಿ ಕಾಣಿಸಿಕೊಳ್ಳುವ ಹೆಸರು ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ್‌ ಎದ್ದು ಕಾಣುತ್ತಾರೆ.

Mumbai Indians Captain Rohit Sharma Saved Hardik Pandya s Careers in Ipl

ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ಮುನ್ನವೇ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ತಂಡವು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದು ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿಯನ್ನು ನೀಡಿದೆ. ರೋಹಿತ್ ಮುಂಬೈ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದರು.

ಅಂದು ಬೆನ್ನಿಗೆ ನಿಂತಿದ್ದ ನಾಯಕ

ಮುಂಬೈ ಇಂಡಿಯನ್ಸ್‌ ಒಮ್ಮೆ ಪಾಂಡ್ಯ ಅವರನ್ನು ತಂಡದಿಂದ ತೆಗೆದುಹಾಕಲು ಬಯಸಿತ್ತು. ಆದರೆ ನಂತರ ರೋಹಿತ್ ಹಾರ್ದಿಕ್ ಅನ್ನು ಉಳಿಸಿ ಕೊಂಡಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ರೋಹಿತ್ ಮತ್ತು ಪಾಂಡ್ಯ ವಿಚಾರಕ್ಕೆ ಸಂಬಂಧಿಸಿದಂತೆ ಪಾರ್ಥಿವ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಕೈ ಬಿಡಲು ಬಯಸಿತ್ತು ಮುಂಬೈ

ಸಂದರ್ಶನವೊಂದರಲ್ಲಿ ಪಾರ್ಥಿವ್ ಪಟೇಲ್ ಮುಂಬೈ ಇಂಡಿಯನ್ಸ್ ತಂಡದ ಬಗ್ಗೆ ಮಾತನಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ತೆಗೆದುಹಾಕಲು ಫ್ರಾಂಚೈಸಿ ಬಯಸಿತ್ತು ಎಂದು ಅವರು ಹೇಳಿದರು. ಆದರೆ ರೋಹಿತ್ ಇಬ್ಬರನ್ನೂ ಕೈ ಬಿಡದಂತೆ ತಡೆದಿದ್ದರು.

Mumbai Indians Captain Rohit Sharma Saved Hardik Pandya s Careers in Ipl

2015ರಲ್ಲಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಎಂಟ್ರಿ ನೀಡಿದಾಗ ಅವರ ಹೆಸರು ಮುನ್ನೆಲೆಗೆ ಬಂದಿತು. ಆದರೆ 2016ರ ಋತು ಪಾಂಡ್ಯಗೆ ಚೆನ್ನಾಗಿರಲಿಲ್ಲ. ಅನ್‌ಕ್ಯಾಪ್ಡ್ ಆಟಗಾರರೇ ಫ್ರಾಂಚೈಸಿಗಳ ಚಿತ್ತ ನೆಟ್ಟಿರುತ್ತಾರೆ. ಅವರು ಪ್ರದರ್ಶನ ನೀಡದೆ ಇದ್ದರೆ ಕೈ ಬಿಟ್ಟು ಬಿಡಲು ಸಿದ್ಧರಾಗುತ್ತರೆ. ಇದೇ ಸನ್ನವೇಶಕ್ಕೆ ಅಂದು ಹಾರ್ದಿಕ್ ಪಾಂಡ್ಯ ಒಳಗಾಗಿದ್ದರು. ಆದರೆ ಇದಕ್ಕೆ ಅಂದು ರೋಹಿತ್ ಶರ್ಮಾ ಆಸ್ಪದ ನೀಡಲಿಲ್ಲ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಅನೇಕ ಆಟಗಾರರು ಬೆಳಕಿಗೆ ಬಂದಿದ್ದಾರೆ ಎಂದು ಅವರು ಹೇಳಿದರು. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಸೇರಿದಂತೆ ಇನ್ನು ಹಲವು ಆಟಗಾರರು ರೋಹಿತ್ ಗರಡಿಯಲ್ಲೇ ಬೆಳೆದವರು.

Mumbai Indians Captain Rohit Sharma Saved Hardik Pandya s Careers in Ipl

ಮುಂಬೈ ಪರ ಹಾರ್ದಿಕ್ ಸಾಧನೆ

ಪಾಂಡ್ಯ 2015 ರಲ್ಲಿ ಪದಾರ್ಪಣೆ ಮಾಡಿದರು. ಅವರು ಈ ಋತುವಿನಲ್ಲಿ 9 ಪಂದ್ಯಗಳನ್ನು ಆಡಿ 112 ರನ್ ಗಳಿಸಿ 1 ವಿಕೆಟ್ ಪಡೆದಿದ್ದರು. ಪಂದ್ಯವೊಂದರಲ್ಲಿ ಪಾಂಡ್ಯ ಅಜೇಯ 61 ರನ್ ಗಳಿಸಿದ್ದರು. ಐಪಿಎಲ್ 2016ರಲ್ಲಿ 11 ಪಂದ್ಯಗಳನ್ನು ಆಡಿ ಉತ್ತಮವಾಗಿರಲಿಲ್ಲ. ಪಾಂಡ್ಯ 2017ರಲ್ಲಿ 17 ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ ಅವರು 250 ರನ್ ಮತ್ತು 6 ವಿಕೆಟ್ ಪಡೆದರು. 2018ರಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದರು.

Story first published: Friday, March 15, 2024, 13:41 [IST]
Other articles published on Mar 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+