UP vs MI WPL 2025: ಯುಪಿ ವಾರ್ ಗೆದ್ದ ಮುಂಬೈ ಇಂಡಿಯನ್ಸ್‌ಗೆ ಎರಡನೇ ಸ್ಥಾನ
ಸಂಘಟಿತ ಆಟದ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳಿಂದ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಣಿಸಿತು. ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಪೂರ್ಣ ಎರಡೂ ಅಂಕ ಕಲೆ ಹಾಕಿತು. ಈ ಮೂಲಕ ಆಡಿದ 6 ಪಂದ್ಯಗಳಲ್ಲಿ 4 ಜಯ, 2 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಯುಪಿ ವಾರಿಯರ್ಸ್ ಅಂಕಗಳನ್ನು ಗಳಿಸುವ ಆಸೆಗೆ ಪೆಟ್ಟು ಬಿದ್ದಿದೆ.
ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 153 ರನ್ ಕಲೆ ಹಾಕಿ ಜಯ ಸಾಧಿಸಿತು.

ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಹ್ಯಾಲಿ ಮ್ಯಾಥ್ಯೂಸ್ ಹಾಗೂ ಅಮೆಲಿಯಾ ಕೆರ್ ಜೋಡಿ 3 ಓವರ್‌ಗಳಲ್ಲಿ 24 ರನ್ ಸೇರಿಸಿತು. ಅಮೆಲಿಯಾ ಕೆರ್ 10 ರನ್‌ಗಳಿಗೆ ಔಟ್ ಆದರು. ಎರಡನೇ ವಿಕೆಟ್‌ಗೆ ಹ್ಯಾಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸ್ಕಿವರ್ ಬ್ರಂಟ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 58 ಎಸೆತಗಳಲ್ಲಿ 92 ರನ್ ಸಿಡಿಸಿದರು. ನ್ಯಾಟ್ ಸ್ಕಿವರ್ ಬ್ರಂಟ್ 7 ಬೌಂಡರಿ ನೆರವಿನಿಂದ 37 ರನ್ ಸಿಡಿಸಿದರು.
ಹ್ಯಾಲಿ ಮ್ಯಾಥ್ಯೂಸ್ 46 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ನೆರವಿನಿಂದ 68 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಮನ್ಜೋತ್ ಕೌರ್ ಅಜೇಯ 12, ಯಾಸ್ತಿಕಾ ಭಾಟಿಯಾ ಅಜೇಯ 10 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿತು.
ಭರ್ಜರಿ ಜೊತೆಯಾಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡ ಭರ್ಜರಿ ಆರಂಭವನ್ನು ಪಡೆಯಿತು. ತಂಡದ ಆರಂಭಿಕರಾದ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೋಲ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ತಂಡಕ್ಕೆ ಪವರ್ ಪ್ಲೇ ನಲ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 8 ಓವರ್‌ಗಳಲ್ಲಿ 74 ರನ್ ಗಳ ಕಾಣಿಕೆ ನೀಡಿದರು. ಗ್ರೇಸ್ ಹ್ಯಾರಿಸ್ 28 ರನ್ ಬಾರಿಸಿದ್ದಾಗ ಬಿಗ್ ಶಾಟ್ ಹೊಡೆಯಲು ಹೋಗಿ ಔಟ್ ಆದರು.
ಆರಂಭಿಕ ಜಾರ್ಜಿಯಾ ವೋಲ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 33 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ 55 ರನ್ ಬಾರಿಸಿ ಔಟ್ ಆದರು. ನಾಯಕಿ ದೀಪ್ತಿ ಶರ್ಮಾ 25 ಎಸೆತಗಳಲ್ಲಿ 27 ರನ್ ಬಾರಿಸಿ ಔಟ್ ಆದರು. ದಿನೇಶ್ ವೃಂದಾ 10, ಸೋಫಿಯಾ 16 ರನ್ ಸಿಡಿಸಿ ಔಟ್ ಆದರು.
ಮುಂಬೈ ತಂಡದ ಪರ ಅಮೆಲಿಯಾ ಕೆರ್ ಬಿಗುವಿನ ದಾಳಿ ನಡೆಸಿದರು. ಇವರು 38 ರನ್ ನೀಡಿ 5 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications