IPL 2025: ಮುಂಬೈ ತಂಡದಲ್ಲಿ ಯಾರಿಗೆ ಉಳಿಗಾಲ, ಯಾರಿಗೆ ಗೇಟ್ ಪಾಸ್?
ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಆವೃತ್ತಿಗೆ ಸಿದ್ಧತೆಗಳನ್ನು ನಡೆಸಿದೆ. ಈ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಬಗ್ಗೆ ಈಗಾಗಲೇ ಕುತೂಹಲಗಳು ಮನೆ ಮಾಡಿವೆ. ತಂಡಕ್ಕೆ ಐದು ಬಾರಿ ಚಾಂಪಿಯನ್ ತೊಟ್ಟ ತೊಡಿಸಿರುವ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ, ಮುಂಬೈ ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟವನ್ನು ಕಟ್ಟಿತ್ತು. ಈಗ ಹರಾಜಿಗೂ ಮುನ್ನ ಹಾರ್ದಿಕ್ ಅವರನ್ನು ಮುಂಬೈ ಉಳಿಸಿಕೊಳ್ಳುವುದಾ ಎಂಬ ಪ್ರಶ್ನೆಗಳು ಎದ್ದಿವೆ.
ಈ ಬಾರಿ ಐಪಿಎಲ್ ರಿಟೇನ್ಶನ್ ನಿಯಮಗಳಲ್ಲಿ ಕೆಲವು ಬದಲಾವಣೆಗಳು ಕಂಡು ಬರುವ ಸಾಧ್ಯತೆ ಇದೆ. ಮಾಧ್ಯಮಗಳ ವರದಿಯನ್ನು ನಂಬುವುದಾದರೆ ಈ ಬಾರಿ ಹರಾಜಿನಲ್ಲಿ ಮಾಲೀಕರಿ ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶವನ್ನು ತೆಗೆದು ಹಾಕುವ ಸಾಧ್ಯತೆ ಇದೆ. ಇನ್ನು ಮಾಧ್ಯಮಗಳ ವರದಿಯ ಅನ್ವಯ ತಂಡಗಳು ಹೆಚ್ಚಾಗಿ ಐದು ತಂಡಗಳನ್ನು ಉಳಿಸಿಕೊಳ್ಳುವ ಅವಕಾಶ ಸಿಗುವ ಸಾಧ್ಯತೆಗಳಿವೆ. ಈ ಹೊಸ ನಿಯಮವು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಖದಲ್ಲಿ ಹೊಸ ಚಿಂತೆಯನ್ನು ಮೂಡಿಸಿದೆ.

ಸ್ಟಾರ್ ಆಟಗಾರರ ತವರು ಮುಂಬೈ
ಈ ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಇದ್ದಾರೆ. ಮಾಲೀಕರು ಯಾರನ್ನು ಉಳಿಸಿಕೊಳ್ಳುತ್ತಾರೆ ಯಾರಿಗೆ ಗೇಟ್ ಪಾಸ್ ನೀಡುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ಮುಂಬೈನಲ್ಲಿ ಜಸ್ಪ್ರಿತ್ ಬುಮ್ರಾ, ಇಶಾನ್ ಕಿಶನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ ವರ್ಮಾ ಅವರಂತಹ ಸ್ಟಾರ್ ಆಟಗಾರರ ದಂಡೇ ಇದೆ. ಮ್ಯಾನೇಜ್ಮೆಂಟ್ ಯಾವ ಐದು ಆಟಗಾರರನ್ನು ಉಳಿಸಿಕೊಳ್ಳುತ್ತದೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.
ಯಾರಿಗೆ ಮುಂಬೈ ಹಾಕುತ್ತೆ ಮಣೆ?
ಇನ್ನು ಮುಂಬೈ ಇಂಡಿಯನ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದ ಒಂದು ಪ್ರಶ್ನೆ ಎಂದರೆ ನಾಯಕರನ್ನಾಗಿ ಯಾರನ್ನು ಉಳಿಸಿಕೊಳ್ಳಬೇಕು. ಐಪಿಎಲ್ 2024ರ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್‌ನಿಂದ ಟ್ರೇಡ್ ಮಾಡಿಕೊಂಡಿರುವ ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರಿಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ರೋಹಿತ್ ಶರ್ಮಾ ತಮ್ಮ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದರು.
ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಜಕ್ಕೂ ಇಬ್ಬರಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬುದೇ ದೊಡ್ಡ ಟಾಸ್ಕ್ ಆಗಿರಲಿದೆ. ಇವರ ಮುಂದಾಳತ್ವದಲ್ಲಿ ತಂಡ ಹಲವು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇವರ ನಾಯಕತ್ವ ಗುಣಗಳು ಹಾಗೂ ನಡೆ ತಂಡದ ಪ್ರಮುಖ ಆಸ್ತಿ. ಇನ್ನು ಹಾರ್ದಿಕ್ ಪಾಂಡ್ಯ ಸಹ ತಮ್ಮನ್ನು ತಾವು ಒಬ್ಬ ಬೆಸ್ಟ್ ಆಲ್‌ರೌಂಡರ್ ಎಂದು ಸಾಬೀತು ಪಡಿಸಿದ್ದಾರೆ. ಇವರು ಒಬ್ಬರೇ ತಂಡದ ಗತಿಯನ್ನು ಬದಲಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗಬಲ್ಲ ಪ್ಲೇಯರ್.
ರೋಹಿತ್, ಹಾರ್ದಿಕ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ?
ಮುಂಬೈ ಇಂಡಿಯನ್ಸ್ ತಂಡ ಅಳೆದು ತೂಗಿ ಆಟಗಾರರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ನಾಯಕತ್ವದ ಗುಣಗಳು ಹಾಗೂ ಅವರ ಮೌಲ್ಯ ಉಳಿಸಿಕೊಳ್ಳುವಾಗ ತಂಡ ಲೆಕ್ಕ ಹಾಕುವ ಸಾಧ್ಯತೆ ಹೆಚ್ಚಿದೆ. ಇನ್ನು ತಂಡದಲ್ಲಿನ ವಾತಾವರಣವನ್ನು ತಿಳಿಯಾಗಿಸಲು ಯಾರು ಹಿತವರೋ ಅವರಿಗೆ ತಂಡ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಗುಣಗಳನ್ನು ನೋಡಿದಾಗ ಮುಂಬೈ ಇಂಡಿಯನ್ಸ್ ಯಾರನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ಹೇಳುವುದು ಮೆಲ್ನೋಟಕ್ಕಂತೂ ಕಷ್ಟ.
ರಿಟೇನ್ಶನ್ ಪಾಲೀಸಿ ಹೊರ ಬೀಳುತ್ತಿದ್ದಂತೆ ಯಾವ ತಂಡ ಹೇಗೆ ಲೆಕ್ಕಾಚಾರವನ್ನು ಮಾಡುತ್ತದೆ ಎಂದು ಈಗಾಗಲೇ ಫ್ಯಾನ್ಸ್ ಚಿಂತನೆ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications