ಜುಲೈ 4 ಗುರುವಾರ, ಇಂದು ಮುಂಜಾನೆ ನವದೆಹಲಿಗೆ ಟಿ20 ವಿಶ್ವಕಪ್ ಗೆದ್ದ 5 ದಿನಗಳ ನಂತರ ಬಾರ್ಬಡೋಸ್‌ನಿಂದ ಚಾಂಪಿಯನ್ ಟೀಮ್ ಇಂಡಿಯಾ ತವರಿಗೆ ಮರಳಿತು. ಅಭಿಮಾನಿಗಳು ಆಟಗಾರರಿಗೆ ಆತ್ಮೀಯ ಸ್ವಾಗತ ನೀಡಿದರು.
ನವದೆಹಲಿಯ ಹೋಟೆಲ್ ಐಟಿಸಿ ಮೌರ್ಯದಲ್ಲಿ ವಿಶ್ರಾಂತಿ ಪಡೆದ ನಂತರ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಭೇಟಿಯಾದರು. ಪ್ರಧಾನಿ ಮೋದಿ ಅವರ ಭೇಟಿಯ ನಂತರ ಟೀಮ್ ಇಂಡಿಯಾ ವಿಕ್ಟರಿ ಪರೇಡ್‌ಗಾಗಿ ಮುಂಬೈಗೆ ತೆರಳಿತು.

ಮುಂಬೈ ವಿಮಾನ ನಿಲ್ದಾಣದ ಸುತ್ತಲೂ ಅಭಿಮಾನಿಗಳು ಜಮಾಯಿಸಿ ಟೀಮ್ ಇಂಡಿಯಾರನ್ನು ಸ್ವಾಗತಿಸಿದರು. ಈ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಿಂದಿಸಿದ್ದಕ್ಕಾಗಿ ಅಭಿಮಾನಿಯೊಬ್ಬರು ಕ್ಷಮೆಯಾಚಿಸಿದರು.
ಭಾರತ ತಂಡವನ್ನು ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಮಹಿಳಾ ಅಭಿಮಾನಿಯೊಬ್ಬರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಂಡ್ಯ ಅವರನ್ನು ನಿಂದಿಸಿದ್ದಕ್ಕಾಗಿ ಲೈವ್‌ನಲ್ಲೇ ಕ್ಷಮೆಯಾಚಿಸಿದರು.
ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ಮಹಿಳಾ ಅಭಿಮಾನಿ, ಹಾರ್ದಿಕ್ ಪಾಂಡ್ಯ ಅವರಿಗೆ ಕ್ಷಮೆ ಕೇಳಿದ್ದಾರೆ. "ನಾನು ಹಾರ್ದಿಕ್ ಪಾಂಡ್ಯಗೆ ಕ್ಷಮಿಸಿ ಎಂದು ಹೇಳಲು ಬಯಸುತ್ತೇನೆ. ಹಾರ್ದಿಕ್ ಅವರನ್ನು ಮೊದಲು ಏಕೆ ಟ್ರೋಲ್ ಮಾಡಿದೆ ಎಂದು ನನಗೆ ತಿಳಿದಿಲ್ಲ.
ನನ್ನನ್ನು ಕ್ಷಮಿಸಿ. ಫೈನಲ್‌ನಲ್ಲಿ ಕೊನೆಯ ಓವರ್ ಅದ್ಭುತವಾಗಿ ಮಾಡಿದಕ್ಕೆ ತುಂಬಾ ಧನ್ಯವಾದ ಎಂದು ಮಹಿಳಾ ಅಭಿಮಾನಿ ಹೇಳಿದ್ದಾರೆ.
ಐಪಿಎಲ್ 2024 ರ ಋತುವಿನಲ್ಲಿ ಪಾಂಡ್ಯ ಅವರು ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಈ ವೇಳೆ ಹಿಟ್‌ಮ್ಯಾನ್ ಅಭಿಮಾನಿಗಳು ಹಾರ್ದಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮತ್ತೊಂದೆಡೆ ಹಾರ್ದಿಕ್ ಅವರ ನಾಯಕತ್ವದಲ್ಲಿ ಎಂಐ ತಂಡ ಕಳಪೆ ಫಾರ್ಮಾನಿಂದ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಗುಳಿದಿತ್ತು.
ಪಾಂಡ್ಯ ಅವರು ತಮ್ಮ ಗುಜರಾತ್ ಟೈಟನ್ಸ್ ತಂಡದ ನಾಯಕನ ಫಾರ್ಮ್ ಅನ್ನು ಪುನರಾವರ್ತಿಸಲು ವಿಫಲವಾದ ನಂತರ ಅಭಿಮಾನಿಗಳು ಮತ್ತು ತಜ್ಞರಿಂದ ಸಾಕಷ್ಟು ನಿಂದನೆಯನ್ನು ಎದುರಿಸಿದ್ದರು.
ಟಿ20 ವಿಶ್ವಕಪ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಆಡಿದ 8 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 151.57 ಸ್ಟ್ರೈಕ್ ರೇಟ್‌ನಲ್ಲಿ ಒಂದು ಅರ್ಧಶತಕ ಸೇರಿದಂತೆ 144 ರನ್ ಗಳಿಸಿದರು. 8 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದರ. ಫೈನಲ್‌ನಲ್ಲಿ 7.64 ರ ಎಕಾನಮಿ ದರದಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೆಂಕಿ ಬೌಲಿಂಗ್ ಪ್ರದರ್ಶನ ಮಾಡಿದರು. ತಾವು ಮಾಡಿದ ಮೂರು ಓವರ್‌ಗಳಲ್ಲಿ 20 ರನ್ ಬಿಟ್ಟುಕೊಟ್ಟಿ 3 ವಿಕೆಟ್ ಪಡೆದು ಮಿಂಚಿದರು.
ಅದರಲ್ಲೂ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್‌ಗಳ ಬೇಕಿದಾಗ ಭರ್ಜರಿಯಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರು. ಕೊನೆಯ ಓವರ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ (17 ಎಸೆತಗಳಲ್ಲಿ 21 ರನ್) ವಿಕೆಟ್ ಪಡೆದು ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿದರು.
ಇದರೊಂದಿಗೆ 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಗೆದ್ದಿತು. ಇದಕ್ಕೂ ಮುನ್ನ ಟೀಮ್ ಇಂಡಿಯಾ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದರು.