150ನೇ ಪಂದ್ಯ ಆಡುತ್ತಿರುವ ಪೊಲಾರ್ಡ್‌ಗೆ ಮುಂಬೈನಿಂದ ಸ್ಪೆಷಲ್ ಗಿಫ್ಟ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ಪರ ಇಂದು (ಸೆಪ್ಟೆಂಬರ್ 23) 150ನೇ ಪಂದ್ಯ ಆಡುತ್ತಿರುವ ವೆಸ್ಟ್ ಇಂಡೀಸ್‌ನ ಅನುಭವಿ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್‌ಗೆ ಎಂಐ ವಿಶೇಷ ಉಡುಗೊರೆ ನೀಡಿದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ಮುಂಬೈ ಇಂಡಿಯನ್ಸ್ ಪರ 150ನೇ ಪಂದ್ಯ ಆಡುತ್ತಿರುವ ಪೊಲಾರ್ಡ್‌ಗೆ ಮುಂಬೈ ಫ್ರಾಂಚೈಸಿ ವಿಶೇಷ ಜೆರ್ಸಿ ನೀಡಿದೆ. ಬುಧವಾರ ನಡೆಯುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ವಿಶೇಷ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದ್ದಾರೆ.
ಸದ್ಯ ಎಂಐ ಪರ 149 ಪಂದ್ಯಗಳನ್ನಾಡಿರುವ ಆಡಿರುವ ಪೊಲಾರ್ಡ್ 28.59ರ ಸರಾಸರಿಯಲ್ಲಿ 2773 ರನ್ ಬಾರಿಸಿದ್ದಾರೆ. ಇದರಲ್ಲಿ 14 ಅರ್ಧ ಶತಕಗಳು ಸೇರಿವೆ. 149 ಪಂದ್ಯಗಳಲ್ಲಿ ಬೌಲಿಂಗ್ ಕೂಡ ಮಾಡಿರುವ ಕೀರನ್ 56 ವಿಕೆಟ್ ದಾಖಲೆ ಹೊಂದಿದ್ದಾರೆ.
ಒಟ್ಟು 25 ಮುಖಾಮುಖಿಗಳಲ್ಲಿ ಎಂಐ ತಂಡ 19 ಗೆಲುವುಗಳನ್ನು ದಾಖಲಿಸಿದ್ದರೆ, ಕೆಕೆಆರ್ ಗೆದ್ದಿದ್ದು ಕೇವಲ 6 ಪಂದ್ಯಗಳಲ್ಲಿ. ವಿಶೇಷವೆಂದರೆ 2014ರ ಸೀಸನ್‌ನಲ್ಲಿ ಕೆಕೆಆರ್ 2 ಪಂದ್ಯಗಳನ್ನು ಗೆದ್ದಿತ್ತು. ಇದೇ ಆ ತಂಡ ಸೀಸನ್ ಒಂದರಲ್ಲಿ ಎಂಐ ವಿರುದ್ಧ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು. ಉಳಿದೆಲ್ಲ ಸೀಸನ್‌ಗಳಲ್ಲಿ ಕೆಕೆಆರ್ ಹೆಚ್ಚಿನ ಪಂದ್ಯಗಳನ್ನು ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications