Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಮುಂಬೈ ಇಂಡಿಯನ್ಸ್' ಹೆಸರಿನಲ್ಲಿದೆ ಕೆಟ್ಟ ದಾಖಲೆ: ಡೆಲ್ಲಿಗೆ ಅದೃಷ್ಟ ತರುತ್ತಾ 2020?

Mumbai Indians have not won an IPL trophy in even Number year

ಐಪಿಎಲ್ 2020 ಟೂರ್ನಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಸಾರಥ್ಯದ ಡೆಲ್ಲಿ ಕ್ಯಾಪಿಟೆಲ್ಸ್ ಫೈನಲ್ ಆಡಲಿದೆ.

ಈಗಾಗಲೇ ನಾಲ್ಕು ಬಾರಿ ಐಪಿಎಲ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಈ ವರ್ಷದ ಫೆವರಿಟ್ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ, 2020ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಡೆಲ್ಲಿ ಮೇಲೆ ಹೆಚ್ಚಿನ ಭರವಸೆ ಇದೆ. ಈ ನಡುವೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿ ಒಂದು ಕೆಟ್ಟ ದಾಖಲೆ ಇದೆ. ಇದನ್ನು ಸೂಕ್ಷ್ಮವಾಗಿ ಗಮಿಸಿದರೆ ಅದೃಷ್ಟ ಡೆಲ್ಲಿ ಪರವಾಗಿದೆ. ಏನದು? ಮುಂದೆ ಓದಿ...

ನಾಲ್ಕು ಬಾರಿ ಐಪಿಎಲ್ ಗೆದ್ದಿರುವ ಮುಂಬೈ

ನಾಲ್ಕು ಬಾರಿ ಐಪಿಎಲ್ ಗೆದ್ದಿರುವ ಮುಂಬೈ

2008ರಿಂದ 2012ರ ಆವೃತ್ತಿವರೆಗೂ ಮುಂಬೈ ಇಂಡಿಯನ್ಸ್ ಒಮ್ಮೆಯೂ ಫೈನಲ್‌ ಗೆದ್ದಿಲ್ಲ. 2013ರಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಮುಡಿಗೇರಿಸಿಕೊಂಡ ಮುಂಬೈ ನಂತರ 2015, 2017, 2019ರಲ್ಲಿ ಕಪ್ ಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ಜರ್ನಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಟ್ಟ ದಾಖಲೆಯೊಂದಿದೆ.

ಬೆಸ ಸಂಖ್ಯೆಯ ವರ್ಷದಲ್ಲಿ ಕಪ್ ಗೆದ್ದಿಲ್ಲ?

ಬೆಸ ಸಂಖ್ಯೆಯ ವರ್ಷದಲ್ಲಿ ಕಪ್ ಗೆದ್ದಿಲ್ಲ?

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಇದುವರೆಗೂ ಸಮಸಂಖ್ಯೆಯ ವರ್ಷದಲ್ಲಿ ಟ್ರೋಫಿ ಗೆದ್ದೇ ಇಲ್ಲ. 2013, 2015, 2017, 2019 ಬೆಸ ಸಂಖ್ಯೆಯ ವರ್ಷದಲ್ಲಿ ಮಾತ್ರ ಐಪಿಎಲ್ ಗೆದ್ದಿದ್ದಾರೆ.

ಈ ಅಂಕಿ ಅಂಶ ಡೆಲ್ಲಿಗೆ ವರದಾನ!

ಈ ಅಂಕಿ ಅಂಶ ಡೆಲ್ಲಿಗೆ ವರದಾನ!

ಮುಂಬೈ ಇಂಡಿಯನ್ಸ್‌ಗೆ ಸಮಸಂಖ್ಯೆ ಮತ್ತು ಬೆಸ ಸಂಖ್ಯೆ ವರ್ಷ ಎನ್ನುವ ಸಂಪ್ರದಾಯ ನಿಜವೇ ಆದರೆ '2020' ಅವರ ಪಾಲಿಗೆ ನಿರಾಸೆಯಾಗಲಿದೆ. ಮುಂಬೈ ಇಂಡಿಯನ್ಸ್ ತಂಡದ ಈ ಅಂಕಿ ಅಂಶದ ಇತಿಹಾಸ ಡೆಲ್ಲಿ ಅಭಿಮಾನಿಗಳಿಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ.

ಕೆಟ್ಟ ದಾಖಲೆ ಅಳಿಸಿಕೊಳ್ಳುತ್ತಾ ಮುಂಬೈ?

ಕೆಟ್ಟ ದಾಖಲೆ ಅಳಿಸಿಕೊಳ್ಳುತ್ತಾ ಮುಂಬೈ?

ಸಮ ಸಂಖ್ಯೆ ಮತ್ತು ಬೆಸ ಸಂಖ್ಯೆ ಅಂಕಿ ಅಂಶವನ್ನು ತಲೆಕೆಳಗಾಗಿಸಿ ಈ ವರ್ಷ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುತ್ತಾ ಅಥವಾ ಡೆಲ್ಲಿ ವಿರುದ್ಧ ಪಂದ್ಯ ಸೋತು ಕೇವಲ ಬೆಸ ಸಂಖ್ಯೆ ಮಾತ್ರ ನಮಗೆ ಅದೃಷ್ಟ ಎಂದು ಬಿಂಬಿಸಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

Story first published: Tuesday, November 10, 2020, 16:25 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+