Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mumbai Indians Playoff Scenarios: ಅಂಕಪಟ್ಟಿಯಲ್ಲಿ ಟಾಪ್‌ 4ರಲ್ಲಿ ಮುಂಬೈ ತಲುಪಬಹುದಾ? ಇಲ್ಲಿದೆ ಲೆಕ್ಕಾಚಾರ

ಐದು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದರಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಸೋಮವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿದ ಮುಂಬೈ 2 ಅಂಕವನ್ನು ಕಲೆ ಹಾಕಿದೆ. ಈ ಮೂಲಕ ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

19ನೇ ಆವೃತ್ತಿ ಐಪಿಎಲ್‌ನ 47ನೇ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್‌ ಸೇರಿಸಿದರು. ಈ ವೇಳೆ ಮಧ್ಯಮ ಕ್ರಮಾಂಕದ ನಿಕೋಲಸ್ ಪೂರನ್ (63 ರನ್‌) ಹಾಗೂ ಮಿಚೆಲ್ ಮಾರ್ಷ್ (44 ರನ್) ತಂಡದ ಮೊತ್ತ ಹಿಗ್ಗಿಸುವಲ್ಲಿ ಸಫಲರಾದರು. ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ಆರಂಭಿಕರಾದ ರಯಾನ್ ರಿಕಲ್ಟನ್‌ (83 ರನ್) ಹಾಗೂ ಸ್ಟಾರ್ ಆಟಗಾರ ರೋಹಿತ್ ಶರ್ಮಾ (84 ರನ್) ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು. ಪರಿಣಾಮ ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್‌ ಸೇರಿಸಿ ಜಯ ಸಾಧಿಸಿತು.

Mumbai Indians

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಜಸ್ಪ್ರೀತ್ ಬುಮ್ರಾ, ದೀಪಕ್‌ ಚಹಾರ್‌, ಕಾರ್ಬಿನ್ ಬೋಷ್‌ ಬಿಗುವಿನ ದಾಳಿ ನಡೆಸುವಲ್ಲಿ ಹಿಂದೆಟು ಹಾಕಿದ್ದಾರೆ. ಇನ್ನು ಬೌಲರ್‌ಗಳಷ್ಟೇ ಅಲ್ಲ ಬ್ಯಾಟರ್‌ಗಳು ಸಹ ರನ್‌ ಬಾರಿಸಲು ಕಷ್ಟ ಪಡುತ್ತಿದ್ದಾರೆ. ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಇವರು ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಮುಂಬೈ ಇಂಡಿಯನ್ಸ್‌ ಮುಂದಿನ ಹಂತವನ್ನು ತಲುಪಬೇಕಾದಲ್ಲಿ ಸಂಘಟಿತ ಆಟದ ಅನಿವಾರ್ಯತೆ ಇದೆ.

ಮುಂಬೈ ಇಂಡಿಯನ್ಸ್‌ ತಂಡ ಸದ್ಯ ಅಂಕ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ?

ಮುಂಬೈ ಇಂಡಿಯನ್ಸ್‌ ತಂಡ ಆಡಿದ 10 ಪಂದ್ಯಗಳಲ್ಲಿ 3 ಜಯ, 7 ಸೋಲು ಕಂಡಿದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ವೇಳೆ ಮುಂಬೈ ರನ್‌ ರೇಟ್‌ -0.649 ಆಗಿದೆ.

ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ಮುಂಬೈ ಇಂಡಿಯನ್ಸ್‌ ತಂಡ ಇನ್ನು 4 ಪಂದ್ಯಗಳನ್ನು ಆಡಲಿದೆ. ಈ ವೇಳೆ ನಾಲ್ಕೂ ಪಂದ್ಯಗಳನ್ನು ಗೆದ್ದಲ್ಲಿ ಸುಲಭವಾಗಿ ಯಾವ ತಂಡದ ಸಹಾಯವೂ ಇಲ್ಲದೇ 14 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಬಹುದು. ಇನ್ನು ಉಳಿದ 4 ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಸೋತರೂ ಮುಂದಿನ ಹಂತಕ್ಕೆ ಪ್ರವೇಶಿಸಬಹುದು. ಆಗ ರನ್‌ ರೇಟ್‌ ಲೆಕ್ಕಾಚಾರ ಆರಂಭವಾಗುತ್ತದೆ. ಹೀಗಾಗಿ ಮುಂಬೈ ಇಂಡಿಯನ್ಸ್‌ ತಂಡ ತನ್ನ ರನ್‌ ರೇಟ್ ಸುಧಾರಿಸಿಕೊಳ್ಳುವುದು ಸಹ ಅನಿವಾರ್ಯವಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಪಂದ್ಯಗಳು

  • ಮೇ 10, ಆರ್‌ಸಿಬಿ, ರಾಯ್‌ಪುರ್‌, ಸಂಜೆ 7.30ಕ್ಕೆ
  • ಮೇ 14, ಪಂಜಾಬ್‌ ಕಿಂಗ್ಸ್‌, ಧರ್ಮಶಾಲಾ, ಸಂಜೆ 7.30ಕ್ಕೆ
  • ಮೇ 20, ಕೆಕೆಆರ್‌, ಕೋಲ್ಕತ್ತಾ, ಸಂಜೆ 7.30ಕ್ಕೆ
  • ಮೇ 24, ರಾಜಸ್ಥಾನ್‌ ರಾಯಲ್ಸ್‌, ಮುಂಬೈ, ಮಧ್ಯಾಹ್ನ 3.30ಕ್ಕೆ

Story first published: Tuesday, May 5, 2026, 10:05 [IST]
Other articles published on May 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+