Mumbai Indians: ಮುಂಬೈ ಹರಾಜಿನಲ್ಲಿ ಈ ಆಟಗಾರರನ್ನು ಗುರಿಯಾಗಿಸುವ ಸಾಧ್ಯತೆ
ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ನಡೆಯಲಿದೆ. ಈ ಹರಾಜು ಅಬುಧಾಬಿಯಲ್ಲಿ ನಡೆಯಲಿದ್ದು, ಸಿದ್ಧತೆಗಳು ನಡೆಸಿವೆ. ಈ ಹರಾಜಿನಲ್ಲಿ ಎಲ್ಲ ತಂಡಗಳು ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿವೆ. ದಾಖಲೆಯ ಐಪಿಎಲ್ ಚಾಂಪಿಯನ್ ವಿಜೇತ ಮುಂಬೈ ಇಂಡಿಯನ್ಸ್ ಸಹ ತನ್ನ ಬಳಿ ಇರುವ ಹಣದಲ್ಲಿ 5 ಆಟಗಾರರನ್ನು ಖರೀದಿಸುವ ಯೋಚನೆ ಮಾಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರಲ್ಲಿ ಪ್ಲೇಯಿಂಗ್ ಇಲೆವೆನ್‌ಗೆ ಬೇಕಾದ ಆಟಗಾರರು ಎಲ್ಲ ಇದ್ದಾರೆ. ಆದರೂ ಬ್ಯಾಕ್ ಆಪ್ ಆಟಗಾರರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಮುಂಬೈ ಇಂಡಿಯನ್ಸ್ ಬಳಿ ಸ್ಟಾರ್ ಆಟಗಾರರ ಖರೀದಿಗೆ ಹಣ ಕಡಿಮೆ ಇದೆ. ತನ್ನ ಬಳಿ ಇರುವ ಹಣದಲ್ಲಿ (₹2.75 ಕೋಟಿ) ಬಲಿಷ್ಠ ಆಟಗಾರರ ಹುಡುಕಾಟವನ್ನು ಮುಂಬೈ ಇಂಡಿಯನ್ಸ್ ನಡೆಸಲಿದೆ. ಹರಾಜಿನಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಆಟಗಾರರನ್ನು ಗುರಿಯಾಗಿಸುವ ಸಾಧ್ಯತೆ ಹೆಚ್ಚಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಭರವಸೆಯ ಆಟಗಾರ ಅರ್ಜುನ್ ತೆಂಡೂಲ್ಕರ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ವಿನಿಮಯ ಮಾಡಿಕೊಂಡಿದೆ. ಇನ್ನು ಅರ್ಜುನ್ ಬದಲಿಗೆ ಶಾರ್ದೂಲ್ ಠಾಕೂರ್ ಅವರು ಮುಂಬೈ ತಂಡ ಸೇರಿದ್ದಾರೆ. ಮುಂಬೈ ಎಲ್‌ಎಸ್‌ಜಿ ತಂಡದಿಂದ ಶಾರ್ದೂಲ್ ಠಾಕೂರ್ ಅವರನ್ನು ಟ್ರೇಡ್ ಮಾಡಿ ಕೊಂಡಿದೆ.
ಇವರನ್ನು ಗುರಿಯಾಗಿಸಿ ಹಣ ಹೂಡಬಹುದು
ಮುಂಬೈ ತಂಡ ಹರಾಜಿನಲ್ಲಿ ಸ್ಪಿನ್ ಬೌಲರ್‌ನ್ನು ಗುರಿಯಾಗಿಸಬಹುದು. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಮತ್ತು ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್ ಅವರನ್ನು ಪರಿಗಣಿಸಬಹುದು. ಮೈಕೆಲ್ ಬ್ರೇಸ್‌ವೆಲ್ ಅವರನ್ನು ಸಹ ಗುರಿಯಾಗಿಸಿ ಹರಾಜಿನಲ್ಲಿ ಆರಂಭದಲ್ಲಿ ಹಣವನ್ನು ಹೂಡಬಹುದಾಗಿದೆ. ಶಮ್ಸ್ ಮುಲಾನಿಯನ್ನು ಸಹ ಗುರಿಯಾಗಿಸಿ ಹಣ ಹೂಡಬಹುದಾಗಿದೆ.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರು: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಮಿಚೆಲ್ ಸ್ಯಾಂಟ್ನರ್, ನಮನ್ ಧೀರ್, ರಘು ಶರ್ಮಾ, ರಾಜ್ ಬಾವಾ, ರಾಬಿನ್ ಮಿಂಗ್, ರಿಯಾನ್ ರಿಕೆಲ್ಟನ್, ಟ್ರೆಂಟ್ ಬೌಲ್ಟ್, ವಿಲ್ ಜಾಕ್ಸ್, ಶಾರ್ದೂಲ್ ಠಾಕೂರ್, ಶೆರ್ಫೇನ್ ರುದರ್‌ಫೋರ್ಡ್, ಮಯಾಂಕ್ ಮಾರ್ಕಾಂಡೆ, ಎಎಮ್ ಗಜನ್‌ಫರ್, ಅಶ್ವಿನಿ ಕುಮಾರ್, ಕಾರ್ಬಿನ್ ಬಾಷ್, ದೀಪಕ್ ಚಾಹರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications