For Quick Alerts
ALLOW NOTIFICATIONS  
For Daily Alerts
 

IPL 2023: "ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ": ರೋಹಿತ್ ಪಡೆಯ ಆಟಕ್ಕೆ ಕೋಚ್ ಕಿಡಿ

ಮುಂಬೈ ಇಂಡಿಯನ್ಸ್ ತಂಡ ನಿರ್ಣಾಯಕ ಪಂದ್ಯದಲ್ಲಿ ಮತ್ತೊಮ್ಮೆ ಎಡವಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವ ಎಲ್ಲಾ ಅವಕಾಶವನ್ನು ಹೊಂದಿದ್ದರು ಕೂಡ ಕಡೇ ಕ್ಷಣದಲ್ಲಿ ಹಿನ್ನಡೆ ಅನುಭವಿಸಿದ ಕಾರಣ 5 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಈ ಸೋಲಿನ ಬಗ್ಗೆ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಮಾಡಿದ ತಪ್ಪಿಗೆ ಶೇನ್ ಬಾಂಡ್ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮತ್ತೆ ಮತ್ತೆ ಹಳೆಯ ತಪ್ಪುಗಳನ್ನೇ ಮಾಡುತ್ತಿದ್ದಾರೆ" ಎಂದು ಶೇನ್ ಬಾಂಡ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಕೊನೆಯ ಕ್ಷಣದಲ್ಲಿ ಎಡವಿದ್ದು ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿದ್ದಾಗ ಮೊಹ್ಸಿನ್ ಖಾನ್ ಬೌಲಿಂಗ್‌ನಲ್ಲಿ ಕೇವಲ ಐದು ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿತ್ತು.

Mumbai Indians lost to LSG: MI coach Shane bond express disappointment

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲ 17 ಓವರ್‌ಗಳಲ್ಲಿ ಹತೋಟಿಯಲ್ಲಿಡಲು ಮುಂಬೈ ಇಂಡಿಯನ್ಸ್ ಬೌಲರ್‌ಗಳು ಯಶಸ್ವಿಯಾಗಿದ್ದರು. 17 ಓವರ್‌ಗಳ ಅಂತ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ 123 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಬಳಿಕ ಎಲ್‌ಎಸ್‌ಜಿ ದಾಂಡಿಗರು ಮೇಲುಗೈ ಸಾಧಿಸಿದ್ದು 20 ಓವರ್‌ಗಳ ಅಂತ್ಯಕ್ಕೆ ಬರೊಬ್ಬರಿ 177 ರನ್‌ಗಳಿಗೆ ಏರಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ಮೂರು ಓವರ್‌ಗಳಲ್ಲಿ 50ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿತ್ತು ಮುಂಬೈ ಇಂಡಿಯನ್ಸ್ ತಂಡ.

"ನಾವು ಮಾಡಿದ ಯೋಜನೆಗೆ ಅಂಟಿಕೊಳ್ಳದಿರುವುದು ನನಗೆ ಹತಾಶೆ ಮುಡಿಸುತ್ತದೆ. ಮಾರ್ಕಸ್ ಸ್ಟೋಯ್ನಿಸ್ ಅವರಂತಾ ಆಟಗಾರನಿದ್ದಾಗ ಈ ಪಿಚ್‌ನಲ್ಲಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟವಾದ ಯೋಜನೆ ಹೊಂದಿದ್ದೆವು. ನಾವು ಯಾವ ಭಾಗದಲ್ಲಿ ಬೌಲಿಂಗ್ ಮಾಡಬೇಕು ಎಂದು ಯೋಜಿಸಿದ್ದೆವೋ ಅಲ್ಲಿ ಸತತವಾಗಿ ಬೌಲಿಂಗ್ ನಡೆಸಲು ವಿಫಲವಾದೆವು" ಎಂದಿದ್ದಾರೆ ಶೇನ್ ಬಾಂಡ್.

"ಮೊದಲ 15 ಓವರ್‌ನಲ್ಲಿ ನಾವು ಅದ್ಭುತವಾಗಿ ಪ್ರದರ್ಶನ ನೀಡಿದೆವು. ನಾವು ಯಾವ ರೀತಿಯಾಗಿ ಬೌಲಿಂಗ್ ಯೋಜನೆ ಹಾಕಿಕೊಂಡಿದ್ದೆವೋ ಅದೇ ರೀತಿ ಆಗಿತ್ತು. ಆದರೆ ಒಬ್ಬ ಆಟಗಾರ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು. ಕಳೆದ ಪಂದ್ಯದಲ್ಲಿ ರಶೀದ್ ಖಾನ್ ಕೂಡ ಇದೇ ಮಾಡಿದ್ದರು. ಆಗಲೂ ನಾವು ಇದೇ ತಪ್ಪುಗಳನ್ನು ಮಾಡಿದ್ದೆವು. ಆ ಪಂದ್ಯದಲ್ಲಿ ಅದು ನಮಗೆ ಹಾನಿಯನ್ನೇನೂ ಮಾಡಲಿಲ್ಲ. ಆದರೆ ಇಂದು ಖಂಡಿತವಾಗಿಯೂ ನಮಗೆ ಅದರಿಂದ ದೊಡ್ಡ ಹಾನಿಯಾಗಿದೆ" ಎಂದಿದ್ದಾರೆ ಶೇನ್ ಬಾಂಡ್.

"ಉತ್ತಮ ಆಟಗಾರರು ರನ್‌ಗಳಿಸುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅಂಥಾ ಆಟಗಾರರು 47 ಎಸೆತಗಳಲ್ಲಿ 89 ರನ್‌ಗಳಿಸುವ ಬದಲಾಗಿ 70 ರನ್‌ಗೆ ನಿಯಂತ್ರಿಸಿದರೆ ಆ 17-20 ರನ್‌ಗಳು ಪಂದ್ಯದ ಮೇಲೆ ಬಹಳ ದೊಡ್ಡ ವ್ಯತ್ಯಾಸವನ್ನುಂಟು ಮಾಡಲಿದೆ" ಎಂದಿದ್ದಾರೆ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್.

Story first published: Wednesday, May 17, 2023, 15:29 [IST]
Other articles published on May 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+