Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs KKR IPL 2024: ಕುಸಿದ ಕೆಕೆಆರ್‌ಗೆ ವೆಂಕಟೇಶ್ ಅಯ್ಯರ್‌ ಆಸರೆ; ಮುಂಬೈಗೆ ಸವಾಲಿನ ಗುರಿ

ಶನಿವಾರ ಮೇ 11ರಂದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಎದುರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ಉತ್ತಮ ರನ್‌ ಕಲೆ ಹಾಕಿದೆ.

ಮಳೆಯಿಂದ ತಡವಾಗಿ ಆರಂಭವಾದ ಪಂದ್ಯವನ್ನು 16 ಓವರ್‌ಗಳಿಗೆ ನಡೆಸಲಾಯಿತು. ಮುಂಬೈ ಬೌಲಿಂಗ್‌ ದಾಳಿಗೆ ಕುಸಿದ ಕೆಕೆಆರ್ ಪರ ವೆಂಕಟೇಶ್‌ ಅಯ್ಯರ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಈ ಮೂಲಕ ಕೆಕೆಆರ್‌ 7 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಲು ಸಾಧ್ಯವಾಯಿತು. ಮುಂಬೈಗೆ ಗೆಲ್ಲಲು 158 ರನ್ ಅವಶ್ಯಕತೆ ಇದೆ.

Mumbai Indians MI vs Kolkata Knight Riders KKR IPL 2024 Match Report

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಕೋಲ್ಕತ್ತಾ ಪರ ಫಿಲಿಪ್ ಸಾಲ್ಟ್ ಹಾಗು ಸುನಿಲ್ ನರೈನ್ ಜೋಡಿ ಬೃಹತ್‌ ರನ್‌ ಹೊಡೆಯುವ ಲೆಕ್ಕಚಾರ ಹಾಕಿಕೊಂಡಿತ್ತು. ಆದರೆ ಪವರ್‌ ಪ್ಲೇನಲ್ಲೇ ಫಿಲಿಪ್ ಸಾಲ್ಟ್(6), ಸುನಿಲ್ ನರೈನ್ (೦) ಹಾಗು ನಾಲ್ಕೆನೇ ಕ್ರಮಾಂಕದಲ್ಲಿ ಬಂದ ನಾಯಕ ಶ್ರೇಯಸ್‌ ಆಯ್ಯರ್‌ (7) ವಿಕೆಟ್‌ ಕಳೆದುಕೊಂಡು ನಿರಾಸೆ ಮೂಡಿಸಿದರು.

ಆದರೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ವೆಂಕಟೇಶ್ ಅಯ್ಯರ್ ಕುಸಿದ ಕೆಕೆಆರ್‌ ತಂಡಕ್ಕೆ ನೆರವಾದರು. ಅಬ್ಬರದ ಬ್ಯಾಟಿಂಗ್‌ ಮಾಡಿದ ವೆಂಕಟೇಶ್ ಅಯ್ಯರ್ ಕೇವಲ 21 ಎಸೆತಗಳಲ್ಲಿ 2 ಸಿಕ್ಸರ್‌ ಹಾಗು 6 ಬೌಂಡರಿ ಮೂಲಕ 42 ರನ್‌ ಬಾರಿಸಿ ಔಟ್‌ ಆದರು.

ಇತ್ತ ನಿಧಾನವಾಗಿ ರನ್ ಕಲೆ ಹಾಕುತ್ತಿದ್ದ ನಿತೀಶ್ ರಾಣಾ (33) ದುರುದೃಷ್ಟಕರ ರನ್‌ ಔಟ್‌ಗೆ ಬಲಿಯಾದರು. ಬಳಿಕ ಮುಂಬೈಗೆ ಅಪಾಯಕಾರಿಯಾಗಿ ಕಾಣುಸುತ್ತಿದ್ದ ಆಂಡ್ರೆ ರಸೆಲ್ (24) 2 ಸಿಕ್ಸರ್‌ ಹಾಗು ಬೌಂಡರಿ ಹೊಡೆದು ರನ್‌ ಗಳಿಸುವ ವೇಗದಲ್ಲಿ ವಿಕೆಟ್‌ ಕಳೆದುಕೊಂಡರು.

ನಂತರ ಒಂದಾದ ರಿಂಕು ಸಿಂಗ್ ಮತ್ತು ರಮಣ್‌ದೀಪ್ ಸಿಂಗ್ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ರನ್‌ ಕಲೆ ಹಾಕಿದರು. ಆದರೆ ರಿಂಕು ಸಿಂಗ್‌ 20 ರನ್‌ಗೆ ಔಟ್‌ ಆಗಿ ತಮ್ಮ ಆಟ ನಿಲ್ಲಿಸಿದರು. ಕೊನೆಯಲ್ಲಿ ರಮಣ್‌ದೀಪ್ ಸಿಂಗ್ ಅಜೇಯ 17 ಹಾಗು ಮಿಚೆಲ್‌ ಸ್ಟಾರ್ಕ್‌ 2 ರನ್‌ ಗಳಿಸಿದರು.

ಮುಂಬೈ ಪರ ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಗು ಜಸ್ಪ್ರೀತ್ ಬುಮ್ರಾ 2 ಕಬಳಿಸಿದರೆ, ಅನ್ಶುಲ್ ಕಾಂಬೋಜ್ ಮತ್ತು ನುವಾನ್ ತುಷಾರ 1 ವಿಕೆಟ್‌ ಪಡೆದುಕೊಂಡರು.

Story first published: Saturday, May 11, 2024, 23:09 [IST]
Other articles published on May 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+