IPL 2025: ರೋಹಿತ್ ಶರ್ಮಾ ಷರತ್ತು ಒಪ್ಪಿಕೊಂಡಿತಾ ಮುಂಬೈ ಇಂಡಿಯನ್ಸ್? ಹಾರ್ದಿಕ್ ಬದಲಿಗೆ ಈ ಪ್ಲೇಯರ್ ನಾಯಕ
ನಿಜಕ್ಕೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಪಾಲಿಗೆ ಬಿಗ್ ಗುಡ್ ನ್ಯೂಸ್.. ಮುಂಬೈ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮತ್ತೆ ಮುಂಬೈ ತಂಡದ ಪರ ಕಣಕ್ಕೆ ಇಳಿಯುವುದು ಬಹುತೇಕ ಕನ್ಫರ್ಮ್ ಆಗಿದೆ. ತಾವು ತಂಡದಲ್ಲಿ ಇರಬೇಕಾದಲ್ಲಿ ಮ್ಯಾನೇಜ್ಮೆಂಟ್‌ಗೆ ರೋಹಿತ್ ಶರ್ಮಾ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಈ ಎಲ್ಲ ಷರತ್ತುಗಳಿಗೆ ಒಕೆ ಎನ್ನಲಾಗಿದೆ ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾದ ನಾಯಕನಾಗಿ ರೋಹಿತ್ ಶರ್ಮಾ ಅಮೋಘ ಸಾಧನೆ ಮಾಡಿದ್ದಾರೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ ಬಳಿಕ, ತಮ್ಮಲ್ಲಿ ಇನ್ನು ನಾಯಕತ್ವದ ಗುಣಗಳು ಇವೆ ಎಂದು ಸಾಬೀತು ಮಾಡಿದ್ದಾರೆ. ಹೀಗಾಗಿ ಇವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮಾಲೀಕರು ಸಹ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಬೇರೆ ತಂಡಗಳ ಮಾಲೀಕರ ಪ್ಲ್ಯಾನ್ ಎಲ್ಲ ಠುಸ್ ಆಗಿದೆ. ರೋಹಿತ್ ಮತ್ತೊಮ್ಮೆ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈ ಪರ ಕಣಕ್ಕೆ?
ಸಾಮಾಜಿಕ ಮಾಧ್ಯಮದಲ್ಲಿ ಈಗ ಒಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯನ್ನು ನಂಬುವುದಾದರೆ ರೋಹಿತ್ ಶರ್ಮಾ ಮುಂಬೈ ಪರ ಮುಂದಿನ ಐಪಿಎಲ್ ಆವೃತ್ತಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಈ ಮ್ಯಾಜಿಕ್ ನಡೆಯಲು ಕಾರಣ ಏನು ಎಂಬ ಕುತೂಹಲ ಇದ್ದೇ ಇರುತ್ತದೆ ಅದಕ್ಕೆ ಇಲ್ಲಿದೆ ಉತ್ತರ.
ಮುಂಬೈ ತಂಡದ ಯಶಸ್ವಿ ನಾಯಕ
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರು. ಇವರ ಮುಂದಾಳತ್ವದಲ್ಲಿ ಮುಂಬೈ ತಂಡ ಐದು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು. ಆಗಲೇ ಟೀಮ್ ಮ್ಯಾನೇಜ್ಮೆಂಟ್‌ಗೆ ನಾಯಕನ ಬದಲಾವಣೆ ಮಾಡಬೇಕು ಎಂದು ಅನಿಸರಬೇಕು. ಮುಂಬೈ ತಂಡ, ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯವನ್ನು ಟ್ರೇಡ್ ಮಾಡಿ ತಂಡಕ್ಕೆ ಸೇರಿಸಿಕೊಂಡು, ನಾಯಕತ್ವದ ಜವಾಬ್ದಾರಿ ನೀಡಿತು.

ಹಾರ್ದಿಕ್ ಪಾಂಡ್ಯ ನಾಯಕ ಎಂದು ಘೋಷಣೆ ಆಗುತ್ತಿದ್ದಂತೆ, ಮುಂಬೈ ಕ್ಯಾಂಪ್‌ನಲ್ಲಿ ಅಸಮಾಧಾನದ ಹೊಗೆ ಆಡಲು ಆರಂಭಿಸಿತು. ರೋಹಿತ್ ಉತ್ತರಾಧಿಕಾರಿ ಎಂತೆ ಕಾಣಿಸಿಕೊಂಡಿದ್ದ, ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರಿತ್ ಬುಮ್ರಾ ಅವರಿಗೆ ಬೇಸರ ಆಗಿತ್ತು. ಇದರಿಂದ ತಂಡದ ಪ್ರದರ್ಶನದ ಮೇಲೂ ನೇರವಾಗಿ ಪರಿಣಾಮ ಬಿದ್ದಿತ್ತು. ಇದನ್ನೇಲ್ಲಾ ಅರಿತು ಟೀಮ್ ಮ್ಯಾನೇಜ್ಮೆಂಟ್ ಈಗ ಒಂದು ಹೊಂದಾಣಿಕೆ ಮಾಡಿಕೊಂಡಿದೆ.
ಪೋಸ್ಟ್ ಸಖತ್ ವೈರಲ್
ರೋಹಿತ್ ಶರ್ಮಾ ಮುಂದಿನ ಬಾರಿಯ ಐಪಿಎಲ್‌ನಲ್ಲಿ ಬೇರೆ ತಂಡಗಳಿಗೆ ಸೇಲ್ ಆಗಬಹುದು ಎಂದು ತಿಳಿದು ಮುಂಬೈ ಸಹ ಮೇಗಾ ಐಡಿಯಾ ಮಾಡಿದೆ. ಅದರಂತೆ ರೋಹಿತ್ ಅವರ ಷರತ್ತುಗಳನ್ನು ಮುಂಬೈ ಒಪ್ಪಿದ್ದು, ಹಾರ್ದಿಕ್ ಪಾಂಡ್ಯರನ್ನು ನಾಯಕತ್ವದಿಂದ ಕೆಳಗಿಳಿಸಬಹುದು ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರೋಹಿತ್ ಮತ್ತೆ ಟಾಸ್ ವೇಳೆ ಅಂಗಳದಲ್ಲಿ ಮೈಕ್ ಹಿಡಿದು ಕಾಣಿಸಿಕೊಳ್ಳಬಹುದು.
ರುಶಿ ಹೆಸರಿನ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಈ ಅಪ್‌ಡೇಟ್ ಲಭ್ಯವಾಗಿದೆ. ಈ ಪೋಸ್ಟ್‌ನ ಆಧಾರದಲ್ಲಿ ಸೂರ್ಯಕುಮಾರ್ ನಾಯಕರಾಗಬೇಕೋ ಅಥವಾ, ಅವರೇ ನಾಯಕರಾಗಿ ಉಳಿಯುತ್ತಾರೋ ಎಂಬ ನಿರ್ಧಾರವನ್ನು ರೋಹಿತ್ ಶರ್ಮಾ ತೆಗೆದುಕೊಳ್ಳಲಿದ್ದಾರೆ. ಸೂರ್ಯ ಮುಂದಿನ ನಾಯಕನಾಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ತಂಡದಲ್ಲಿ ಉಳಿಸಿಕೊಳ್ಳಲು ಕಸರತ್ತು
ಹಿಟ್ ಮ್ಯಾನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಭಾರೀ ಕಸರತ್ತು ನಡೆಸಿದೆ. ಅಲ್ಲದೆ ಮಿಸ್ಟರ್ 360 ಖ್ಯಾತಿಯ ಸೂರ್ಯ ಹಾಗೂ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications