Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction MI: ಕಡಿಮೆ ಬೆಲೆಗೆ ಬುಮ್ರಾಗೆ ಸಾಥಿ ಹುಡುಕಿದ ಮುಂಬೈ

ಮುಂಬೈ ಇಂಡಿಯನ್ಸ್‌ ಐಪಿಎಲ್ ಚಾಂಪಿಯನ್ ತಂಡಗಳಲ್ಲಿ ಒಂದು. ಈ ತಂಡ ಈಗಾಗಲೇ 5 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಸ್ಟಾರ್ ಆಟಗಾರರಿಂದಲೇ ತುಂಬಿ ಕೊಂಡಿರುವ ಮುಂಬೈ ಈ ಬಾರಿಯೂ ಸದೃಡವಾಗಿ ಕಾಣುತ್ತಿದೆ. ಮುಂಬೈ ಇಂಡಿಯನ್ಸ್‌ ತಾನು ಉಳಿಸಿಕೊಂಡಿದ್ದ ಮೊತ್ತದಲ್ಲೇ ಭರ್ಜರಿ ಬೇಟೆಯನ್ನು ನಡೆಸಿದೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡ ತನ್ನ ಬೌಲಿಂಗ್ ವಿಭಾಗಕ್ಕೆ ಮತ್ತೊಬ್ಬ ಭಾರತೀಯ ಆಟಗಾರನನ್ನು ಬರ ಮಾಡಿಕೊಂಡಿದೆ.

ಯಾರ್ಕರ್‌ ಸ್ಪೇಷಲಿಸ್ಟ್‌ ಬುಮ್ರಾ ಅವರನ್ನು ಮುಂಬೈ ಉಳಿಸಿಕೊಂಡಿತ್ತು. ಮತ್ತು ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಹುಡುಕಾಟವನ್ನು ನಡೆಸಿತ್ತು. ಈ ವೇಳೆ ಮುಂಬೈ ಅಳೆದು ತೂಗಿ ಆಟಗಾರರ ಖರೀದಿ ನಡೆಸಿದೆ. ಒಮ್ಮೊಮ್ಮೆ ಆಟಗಾರರು ಜಾಕ್‌ ಪಾಟ್‌ ಹೊಡೆದರೆ, ಒಮೊಮ್ಮೆ ಮಾಲೀಕರು ಫುಲ್‌ ಖುಷ್‌. ಇದಕ್ಕೆ ಕಾರಣ ಕಡಿಮೆ ಬೆಲೆಗೆ ಸ್ಟಾರ್ ಪ್ಲೇಯರ್‌ ಒಬ್ಬರು ಮುಂಬೈ ತಂಡ ಸೇರಿದ್ದಾರೆ. ಈ ಮೂಲಕ ಜಸ್ಪ್ರಿತ್ ಬುಮ್ರಾ ಅವರಿಗೆ ಸ್ಥಾನ ನೀಡಲು ಮುಂಬೈ ಮತ್ತೊಬ್ಬ ಭಾರತೀಯ ಆಟಗಾರನಿಗೆ ಮಣೆ ಹಾಕಿದೆ.

Mumbai Indians Secure Deepak Chahar in IPL Auction for 9 25 Crores

ದೀಪಕ್‌ಗೆ ಭಾರೀ ನಷ್ಟ

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಕೈ ಬಿಟ್ಟಿದ್ದ ದೀಪಕ್‌ ಚಹಾರ್‌ ಅವರಿಗೆ ಮುಂಬೈ ಬಾಜಿ ಕಟ್ಟಿ ಗೆದ್ದಿದೆ. ಇವರು ಹೊಸ ಚೆಂಡಿನ ಮೂಲಕ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್‌. ಇವರಿಗೆ ಬಾಜಿ ಕಟ್ಟಿರುವ ಮುಂಬೈ ಇವರಿಗೆ ತಂಡಕ್ಕೆ ಸೇರಿಸಿಕೊಂಡಿದೆ.

ದೀಪಕ್ ಚಹಾರ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಡ್ಡಿಂಗ್ ವಾರ್ ನಡೆಯಿತು. ಕೊನೆಯಲ್ಲಿ ಮುಂಬೈ ಬಾಜಿ ಗೆದ್ದಿದೆ. ಮುಂಬೈ ದೀಪಕ್ ಅವರನ್ನು 9.25 ಕೋಟಿಗೆ ಖರೀದಿಸಿದೆ. ಇದಕ್ಕೂ ಮುನ್ನ ದೀಪಕ್ ಚೆನ್ನೈ ತಂಡದಲ್ಲಿದ್ದಾಗ ಆಗ ಅವರಿಗೆ 14 ಕೋಟಿ ರೂ. ನೀಡಲಾಗಿತ್ತು. ಇದೀಗ ದೀಪಕ್ 4.75 ಕೋಟಿ ನಷ್ಟ ಅನುಭವಿಸಿದ್ದಾರೆ.

ಸ್ವಿಂಗ್ ಅಸ್ತ್ರ

ದೀಪಕ್ ಚಹಾರ್ ಇನ್ನಿಂಗ್ಸ್‌ನ ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್‌ ಮಾಡಬಲ್ಲ ಪ್ಲೇಯರ್. ಅವರು ಸ್ವಿಂಗ್ ಬೌಲಿಂಗ್‌ನಲ್ಲಿ ಹಿಡಿತವನ್ನು ಹೊಂದಿದ್ದಾರೆ. ಇವರ ಎಸೆತಗಳನ್ನು ಎದುರಿಸುವುದು ನಿಜಕ್ಕೂ ಬೌಲರ್‌ಗಳಿಗೆ ಕಷ್ಟವಾಗುತ್ತದೆ. ಇದುವರೆಗೆ ದೀಪಕ್ ಐಪಿಎಲ್‌ನ 81 ಪಂದ್ಯಗಳಲ್ಲಿ 77 ವಿಕೆಟ್‌ಗಳನ್ನು ಪಡೆದಿದ್ದಾರೆ. 13 ರನ್‌ಗಳಿಗೆ 4 ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಸಾಧನೆ.

Story first published: Monday, November 25, 2024, 23:30 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+