WPL 2025: ಗೆಲುವಿನ ಖಾತೆ ಓಪನ್ ಮಾಡಿದ ಮುಂಬೈ ಇಂಡಿಯನ್ಸ್
ಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದನೇ ಪಂದ್ಯ ವಡೋಧರಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಮೋಗ ಸಂಘಟಿತ ಪ್ರದರ್ಶನ ನೀಡಿ ಗೆಲುವು ದಾಖಲಿಸಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಗುಜರಾತ್ ಎರಡನೇ ಗೆಲುವಿನ ಆಸೆ ನುಚ್ಚು ನೂರಾಗಿದೆ. ಸೋಲಿನ ಮೂಲಕ ಗುಜರಾತ್ ತವರಿನ ಅಭಿಯಾನವನ್ನು ಮುಗಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಸ್ಟಾರ್ ಆಟಗಾರ್ತಿಯರು ಆಧಾರವಾಗಲಿಲ್ಲ. ಪರಿಣಾಮ 20 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 16.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 122 ರನ್ ಸೇರಿಸಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಮುಂಬೈ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಕಳಪೆ ಆರಂಭ
ಗುಜರಾತ್ ಜೈಂಟ್ಸ್ ಪರ ಟಾಪ್ ಆರ್ಡರ್ ಆಟಗಾರ್ತಿಯರು ಸ್ಥಿರ ಪ್ರದರ್ಶನ ನೀಡಲಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಬೆತ್ ಮೂನಿ, ಲಾರಾ ವೊಲ್ವಾರ್ಡ್ಟ್, ದಯಾಳನ್ ಹೇಮಲತಾ ಸಿಂಗಲ್ ಡಿಜಿಟ್‌ನಲ್ಲಿ ಆಟವನ್ನು ಮುಗಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಗುಜರಾತ್ ನಾಯಕಿ ಆಶ್ಲೀ ಗಾರ್ಡ್ನರ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಮಂಕಾದ್ರು. ಇವರು 10 ರನ್ ಗಳಿಸಿದ್ದಾಗ ನ್ಯಾಟ್ ಸ್ಕಿವರ್ ಬ್ರಂಟ್ ಅವರಿಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಗುಜರಾತ್ ಪರ ಹರ್ಲೀನ್ ಡಿಯೋಲ್ (32) ಹಾಗೂ ಕಾಶ್ವೀ ಗೌತಮ್ (20) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಕೊಂಚ ಶ್ರಮಿಸಿದರು.
ಮುಂಬೈ ತಂಡದ ಪರ ಬಿಗುವಿನ ದಾಳಿ ನಡೆಸಿದ ಹೇಮಲತಾ ಮ್ಯಾಥ್ಯೂಸ್ 16 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ನ್ಯಾಟ್ ಸ್ಕಿವರ್ ಬ್ರಂಟ್ ಹಾಗೂ ಅಮೆಲಿ ಕೆರ್ ತಲಾ ಎರಡು ವಿಕೆಟ್ ಪಡೆದರು.

ಸ್ಟಾರ್ ಪ್ಲೇಯರ್ ಅಬ್ಬರ
ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಯಾಸ್ತಿಕಾ ಭಾಟಿಯಾ (8), ಹ್ಯಾಲಿ ಮ್ಯಾಥ್ಯೂಸ್ (17) ಇಬ್ಬರೂ ಆರಂಭಿಕ ಆಟಗಾರ್ತಿಯರು ತಂಡದ ಮೊತ್ತ 44 ಆಗಿದ್ದಾಗ ಪೆವಿಲಿಯನ್ ಸೇರಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡದ ಪರ ಹೆಚ್ಚಿನ ಕಾಣಿಕೆ ನೀಡಲಿಲ್ಲ. ಅಮೆಲಿ ಕೆರ್ (19), ಸಂಜೀವನ್ ಸಂಜನ್ (ಅಜೇಯ 10) ತಂಡದ ಗೆಲುವಿನಲ್ಲಿ ಮಿಂಚಿದರು.
ಮೊದಲು ಬೌಲಿಂಗ್‌ನಲ್ಲಿ ಪ್ರಭಾವ ಶಾಲಿ ದಾಳಿ ನಡೆಸಿದ್ದ ನ್ಯಾಟಿ ಸ್ಕೀವರ್ ಬ್ರಂಟ್ ಬ್ಯಾಟಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿದರು. ಇವರು 39 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ 57 ರನ್ ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು.
ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಹ್ಯಾಲಿ ಮ್ಯಾಥ್ಯೂಸ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿತು.
ಆರೆಂಜ್ ಕ್ಯಾಪ್: ಆಶ್ಲೀ ಗಾರ್ಡ್ನರ್, ಗುಜರಾತ್
ಪರ್ಪಲ್ ಕ್ಯಾಪ್: ರೇಣುಕಾ ಸಿಂಗ್, ಆರ್‌ಸಿಬಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications