For Quick Alerts
ALLOW NOTIFICATIONS  
For Daily Alerts
 

ತವರಿಗೆ ಮರಳಿದ ಮುಂಬೈ ಆಲ್‌ರೌಂಡರ್‌; ಟ್ರೇಡ್‌ ಆಗಿದ್ದು ಹೇಗೆ!

ನವೆಂಬರ್ 15 ರೊಳಗೆ ತಂಡಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕು. ಇದಕ್ಕೂ ಮೊದಲು ದೊಡ್ಡ ಸುದ್ದಿಯೊಂದು ಬಂದಿದೆ. ಇದರ ಪ್ರಕಾರ ಮುಂಬೈ ಇಂಡಿಯನ್ಸ್‌ ಒಬ್ಬ ಆಟಗಾರರನ್ನು ಟ್ರೇಡ್ ಮಾಡಿಕೊಂಡಿದೆ. ಆಲ್‌ರೌಂಡರ್‌ ಶರ್ದೂಲ್‌ ಠಾಕೂರ್‌ ಅವರನ್ನು ಮುಂಬೈ ಇಂಡಿಯನ್ಸ್‌, ಲಕ್ನೋ ಸೂಪರ್‌ ಜೇಂಟ್ಸ್‌ ತಂಡದಿಂದ ವಿನಿಮಯ ಮಾಡಿಕೊಂಡಿದೆ. ಇವರ ಆಗಮನ ನಿಶ್ಚಿತವಾಗಿ ಮುಂಬೈ ತಂಡಕ್ಕೆ ಬಲವನ್ನು ನೀಡಿದೆ. ಇವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಕಳೆದ ಬಾರಿ ಐಪಿಎಲ್‌ ಮೆಗಾ ಹರಾಜು ಸೌದಿಯಲ್ಲಿ ನಡೆದಿತ್ತು. ಆಗ ಶಾರ್ದೂಲ್ ಠಾಕೂರ್ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್‌ ಗಾಯಕ್ಕೆ ತುತ್ತಾಗಿದ್ದರಿಂದ, ತಂಡ ಇವರನ್ನು ಬದಲಿ ಆಟಗಾರನಾಗಿ 2 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಶಾರ್ದೂಲ್‌ ಮಿಂಚಿದರು.

Mumbai Indians Trade for Shardul Thakur from LSG Ahead of IPL 2026 Auction

ಶಾರ್ದೂಲ್‌ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ಮತ್ತು ಲಕ್ನೋ ಸೂಪರ್‌ ಜೈಂಟ್ಸ್ ತಂಡದ ಒರ ಈಗಾಗಲೇ ಆಡಿದ್ದಾರೆ. ಮುಂಬೈ ಇಂಡಿಯನ್ಸ್‌ ಇವರ ಐಪಿಎಲ್‌ ವೃತ್ತಿಯ ಏಳನೇ ತಂಡವಾಗಿದೆ.

ಶಾರ್ದೂಲ್ ಸಾಧನೆ

ಈ ಬಾರಿಯ ಐಪಿಎಲ್‌ 2026 ಮಿನಿ ಹರಾಜು ನಡೆಯಲಿದೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಹರಾಜನ್ನು ಡಿಸೆಂಬರ್‌ನಲ್ಲಿ ನಡೆಸುವ ಸಾಧ್ಯತೆ ಇದೆ. ನವೆಂಬರ್‌ 15ರೊಳಗೆ ತಂಡಗಳು ತಾವು ಉಳಿಸಿಕೊಳ್ಳುವ ಹಾಗೂ ಹರಾಜಿನ ಅಂಗಳಕ್ಕೆ ಬಿಡುವ ಆಟಗಾರರ ಪಟ್ಟಿಯನ್ನು ನೀಡಬೇಕು. ಈ ಪಟ್ಟಿಯನ್ನು ನೀಡುವದರೊಳಗೆ ಮುಂಬೈ ಇಂಡಿಯನ್ಸ್‌ ಲಕ್ನೋನಿಂದ ಶಾರ್ದೂಲ್‌ ಅವರನ್ನು ಟ್ರೇಡ್ ಮಾಡಿದೆ. ಶಾರ್ದೂಲ್‌ ಒಟ್ಟಾರೆ 105 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 107 ವಿಕೆಟ್‌ ಪಡೆದಿದ್ದು, ಒಂದು ಅರ್ಧಶತಕ ಸೇರಿದಂತೆ 325 ರನ್ ಸಿಡಿಸಿದ್ದಾರೆ.

ಟ್ರೇಡ್‌ ಆಗಿದ್ದು ಹೇಗೆ?

ಪ್ರಸಕ್ತ ಸಾಲಿನ ಮೊದಲ ಟ್ರೇಡ್‌ ಆದ ಆಟಗಾರ ಎಂಬ ಹೆಗ್ಗಳಿಕೆ ಶಾರ್ದೂಲ್‌ ಠಾಕೂರ್‌ ಅವರದ್ದಾಗಿದೆ. ಇವರನ್ನು ಮುಂಬೈ ಇಂಡಿಯನ್ಸ್ 2 ಕೋಟಿ ರೂ. ನೀಡಿ ಲಕ್ನೋ ಸೂಪರ್‌ ಜೈಂಟ್ಸ್ ತಂಡದಿಂದ ಖರೀದಿ ಮಾಡಿದೆ. ಇದರ ಅರ್ಥ ಉಭಯ ತಂಡಗಳ ನಡುವೆ ಆಟಗಾರರ ಬದಲಾವಣೆ ನಡೆದಿಲ್ಲ. ಬದಲಿಗೆ ನಗದು ರೂಪದಲ್ಲಿ ಆಟಗಾರರನ್ನು ಮುಂಬೈ ಪಡೆದಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಶಾರ್ದೂಲ್‌ ಆಡಿದ 10 ಪಂದ್ಯಗಳಲ್ಲಿ 13 ವಿಕೆಟ್‌ ಕಬಳಿಸಿದ್ದಾರೆ.

ಮೂರನೇ ಬಾರಿಗೆ ಟ್ರೇಡ್ ಆದ ಶಾರ್ದೂಲ್‌

ಶಾರ್ದೂಲ್‌ ಅವರನ್ನು ಟ್ರೇಡ್‌ ಮೂಲಕ ಖರೀದಿಸಿರುವುದು ಇದು ಮೂರನೇ ಬಾರಿ ಆಗಿದೆ. ಇದಕ್ಕೂ ಮೊದಲು ರೈಸಿಂಗ್ ಪುಣೆ ಸೂಪರ್‌ಜೈಂಟ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ನಿಂದ ಖರೀದಿಸಿತು. ಇದಾದ ಬಳಿಕ 2023 ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ದೆಹಲಿ ಕ್ಯಾಪಿಟಲ್ಸ್‌ನಿಂದ ಖರೀದಿಸಿತು.

Story first published: Friday, November 14, 2025, 8:31 [IST]
Other articles published on Nov 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+