For Quick Alerts
ALLOW NOTIFICATIONS  
For Daily Alerts
 

ಭಾರೀ ಸದ್ದು ಮಾಡ್ತಾ ಇದೆ ಮುಂಬೈ ವಿಡಿಯೋ: "ಜಬ್ ಕರ್‌ನಾಥಾ ಮೈನೆ ಕಿಯಾ"

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಎಲ್ಲ ತಂಡಗಳು ತಲಾ ಮೂರು ಮೂರು ಪಂದ್ಯಗಳನ್ನು ಈಗ ಆಡಿವೆ. ಈಗ ಈ ಲೀಗ್‌ನ ರೋಚಕತೆ ಹೆಚ್ಚಿಸಿದೆ. ಈ ಮಧ್ಯೆ ಶುಕ್ರವಾರ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಣ ಕಾದಾಟ ಲಕ್ನೋದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಈ ವಿಡಿಯೋ ಜಸ್ಟ್‌ 6 ರಿಂದ 7 ಸೆಕೆಂಡ್‌ಗಳಿಂದ ಕೂಡಿದೆ. ಆದರೆ ಈ ವಿಡಿಯೋದಲ್ಲಿರುವ ಆಡಿಯೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಎಕಾನ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಎಲ್‌ಎಸ್‌ಜಿ ತಂಡಗಳು ಅಭ್ಯಾಸವನ್ನು ನಡೆಸಿದವು. ಈ ವೇಳೆ ರೋಹಿತ್‌ ಶರ್ಮಾ ಅವರನ್ನು ಹಿಂಬದಿಯಿಂದ ರಿಷಭ್‌ ಪಂತ್‌ ಅಪ್ಪಿಕೊಳ್ಳುವುದು ಕಾಣುತ್ತದೆ. ಆದರೆ ವಿಡಿಯೋದ ತಿರಳು ಈ ಅಪ್ಪುಗೆ ಅಲ್ಲಾ. ರೋಹಿತ್‌ ಮಾತಾಡಿದ ಆ ಮಾತು.

Mumbai Indians Viral Video Sparks Controversy Rohit Sharma s Jab Karanatha Maine Kiya

ಎಲ್‌ಎಸ್‌ಜಿ ಕೋಚ್‌ ಜಹೀರ್ ಖಾನ್‌ ಅವರೊಂದಿಗೆ ರೋಹಿತ್ ಶರ್ಮಾ ಮಾತನಾಡುತ್ತಿರುವ ವಿಡಿಯೋ ಇದಾಗಿದೆ. ಈ ವೇಳೆ ರೋಹಿತ್ ಶರ್ಮಾ ಅವರ ಮುಖವನ್ನು ನೋಡಿದರೆ, ಇವರು ಸಿಟ್ಟಿನಲ್ಲಿ ಸಂಭಾಷಣೆ ಮಾಡುತ್ತಾ ಇದ್ದಂತೆ ಕಂಡು ಬಂದಿದೆ. ಈ ವೇಳೆ ರೋಹಿತ್ ಶರ್ಮಾ, ಜಹೀರ್ ಖಾನ್‌ಗೆ ಹೇಳಿದ ಆ ಒಂದು ವಾಖ್ಯ ಸದ್ಯಕ್ಕೆ ಭಾರೀ ಚರ್ಚೆಯ ವಸ್ತುವಾಗಿದೆ.

ವಿಡಿಯೋದಲ್ಲಿ ಏನಿದೆ

ಜಹಿರ್‌ ಖಾನ್‌ ಅವರೊಂದಿಗೆ ಮಾತನಾಡುವಾಗ ರೋಹಿತ್‌ "ಜಬ್ ಕರನಾಥಾ ಮೈನೆ ಕಿಯಾ" (ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ) ಎಂದು ಹೇಳುತ್ತಿದ್ದಾರೆ. ಆಗಲೇ ರಿಷಭ್ ಪಂತ್‌ ಎಂಟ್ರಿ ಆಗುತ್ತದೆ. ಈ ದೃಶ್ಯವನ್ನು ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದೆ. ಈ ವೇಳೆ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಈ ವಿಡಿಯೋಕ್ಕೆ ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್‌ ರೋಹಿತ್‌ ಶರ್ಮಾ ಅವರ ಮಾನಹಾನಿ ಮಾಡಲೆಂದು ಈ ವಿಡಿಯೋವನ್ನು ಹಾಕಿದೆ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಹಿಟ್‌ ಮ್ಯಾನ್‌ ವಿರುದ್ಧ ಧ್ವನಿ ಎತ್ತಿದ್ದಾರೆ.

ಈ ಆಡಿಯೋಗೆ ಸಾಮಾಜಿಕ ತಾಣದಲ್ಲಿ ಭಿನ್ನ ವಿಭಿನ್ನ ಕಮೆಂಟ್‌ಗಳು ಬರುತ್ತಿವೆ. ಈ ವೇಳೆ ರೋಹಿತ್‌ ಶರ್ಮಾ ಅವರ ಫಾರ್ಮ್‌ ಬಗ್ಗೆಯೂ ಅಭಿಮಾನಿಗಳು ಮಾತನಾಡಿದ್ದಾರೆ. ಈ ಸಂಭಾಷಣೆಯಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಸ್ಪಷ್ಟತೆ ಅಭಇಲ್ಲ. ಆದರೆ ಮುಂಬೈ ಚಿಕ್ಕ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದೆ.

ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರನ್ನು ಕಳೆದ ಬಾರಿ ಐಪಿಎಲ್‌ಗೂ ಮುಂಚಿತವಾಗಿ ತಂಡದ ನಾಯಕತ್ವದಿಂದ ಕೆಳಗಿಳಿಸಿತ್ತು. ಇದೇ ವೇಳೆ ಈ ಸ್ಥಾನಕ್ಕೆ ಗುಜರಾತ್‌ ಟೈಟಾನ್ಸ್‌ ತಂಡದಿಂದ ಟ್ರೆಡ್ ಮಾಡಿದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ತಂದು ಕೂರಿಸಲಾಯಿತು. ಮುಂಬೈ ಇಂಡಿಯನ್ಸ್ ತಂಡದ ಈ ನಿರ್ಧಾರದ ವಿರುದ್ಧ ಆಗ ಅಭಿಮಾನಿಗಳು ಕೆಂಡ ಕಾರಿದ್ದರು.

Story first published: Friday, April 4, 2025, 15:33 [IST]
Other articles published on Apr 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+