Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಮುಂಬೈ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಕೆಕೆಆರ್

ಐಪಿಎಲ್ 2025 ರ 12 ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸುತ್ತಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2025 ರಲ್ಲಿ ಮೊದಲ ಬಾರಿಗೆ ತನ್ನ ತವರು ನೆಲವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುತ್ತಿದೆ. ತವರಿನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆಲೌಟ್ ಮಾಡಿದ ಮುಂಬೈ ಇಂಡಿಯನ್ಸ್ 117 ರನ್‌ಗಳ ಗೆಲುವಿನ ಗುರಿ ಪಡೆದಿದೆ.

ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಪರಿಣಾಮ ಕೆಕೆಆರ್ ನಿಗದಿತ ಕೇವಲ 16.2 ಓವರ್‍‌ಗಳಲ್ಲಿ 116 ರನ್‌ಗಳಿಗೆ ಸರ್ವಪತನವಾಯಿತು.

Mumbai Indians vs Kolkata Knight Riders IPL 2025 12th Match First Innings

ಕೋಲ್ಕತ್ತಾ ನೈಟ್ ರೈಡರ್ಸ್ ಪರ ಇನ್ನಿಂಗ್ಸ್ ತೆರೆಯಲು ಬಂದ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಜೋಡಿ ಉತ್ತಮ ಆರಂಭ ನೀಡಲಿಲ್ಲ. ಸುನಿಲ್ ನರೈನ್ ಶೂನ್ಯಕ್ಕೆ ಔಟ್ ಆದರೆ, ಕ್ವಿಂಟನ್ ಡಿ ಕಾಕ್ 1 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನ್ ಕೂಡ 11 ರನ್‌ಗಳಿಗೆ ಸೀಮಿತವಾದರು. ಅಂಗ್‌ಕ್ರಿಶ್ ರಘುವಂಶಿ ತಾಳ್ಮೆಯುವ ಬ್ಯಾಟಿಂಗ್ ಮಾಡುವ ಮೂಲಕ 22 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಅಂಗ್‌ಕ್ರಿಶ್ ರಘುವಂಶಿ ಔಟಾದ ಬಳಿಕ ಬಂದ ಕೆಕೆಆರ್ ಬ್ಯಾಟರ್‍‌ಗಳು ತಂಡಕ್ಕೆ ಆಸರೆಯಾಗಲಿಲ್ಲ. ವೆಂಕಟೇಶ್ ಅಯ್ಯರ್ (3), ರಿಂಕು ಸಿಂಗ್ (17), ಮನೀಶ್ ಪಾಂಡ್ಯ (19), ಆಂಡ್ರೆ ರಸೆಲ್ (5), ಸ್ಪೆನ್ಸರ್ ಜಾನ್ಸನ್ (1*), ಹರ್ಷಿತ್ ರಾಣಾ (4) ಹೆಚ್ಚು ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಬಿರುಸಿನಿ ಬ್ಯಾಟಿಂಗ್ ಮಾಡಿದ ರಮಣದೀಪ್ ಸಿಂಗ್ 22 ಔಟ್ ಆದರು.

ಮುಂಬೈ ಇಂಡಿಯನ್ಸ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್‍‌ಗಳು ಮಿಂಚಿದರು. ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಅಶ್ವನಿ ಕುಮಾರ್ 4 ವಿಕೆಟ್ ಕಬಳಿಸಿ ಮಿಂಚಿದರೆ, ದೀಪಕ್ ಚಹಾರ್ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಹಾರ್ದಿಕ್ ಪಾಂಡ್ಯ, ವಿಘ್ನೇಶ್ ಪುತ್ತೂರು ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಉಭಯ ತಂಡಗಳ ಪ್ಲೇಯಿಂಗ್-11

ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಮುಂಬೈ ಇಂಡಿಯನ್ಸ್: ರಯಾನ್ ರಿಕಲ್ಟನ್, ವಿಲ್ ಜ್ಯಾಕ್ಸ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್, ವಿಘ್ನೇಶ್ ಪುತ್ತೂರ್.

Story first published: Monday, March 31, 2025, 21:05 [IST]
Other articles published on Mar 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+