Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs PBKS : ಗೆಲುವಿನ ಟ್ರ್ಯಾಕ್‌ಗೆ ಮರಳಲು ಮುಂಬೈ ಪ್ಲ್ಯಾನ್‌

ಮುಂಬೈ: ದಾಖಲೆಯ ಐದು ಬಾರಿ ಐಪಿಎಲ್‌ ಚಾಂಪಿಯನ್ ಮುಂಬೈ ಇಂಡಿಯನ್ಸ್‌ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಲೀಗ್‌ ಹಂತದಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಗುರುವಾರ ಪಂಜಾಬ್ ಕಿಂಗ್ಸ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆಸೆ ಮುಂಬೈ ತಂಡದ್ದಾಗಿದೆ.

ಮುಂಬೈ ಇಂಡಿಯನ್ಸ್‌ ಈ ಲೀಗ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 1 ಗೆಲುವು, 3 ಸೋಲು ಕಂಡಿದ್ದು, 2 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್‌ ಅಮೋಘ ಪ್ರದರ್ಶನ ನೀಡುತ್ತಿದ್ದು ಆಡಿದ 4 ಪಂದ್ಯಗಳಲ್ಲಿ ಮೂರು ಜಯ ದಾಖಲಿಸಿ, 7 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲಿನಿಂದ ಎರಡನೇ ಸ್ಥಾನದಲ್ಲಿದೆ.

Mumbai Indians

ಮುಂಬೈ ತಂಡದ ಆರಂಭಿಕರಾಗಿ ಕಾಣಿಸಿಕೊಳ್ಳುವ ರಯಾನ್‌ ರಿಕಲ್ಟನ್‌ ಹಾಗೂ ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್‌ ಕಟ್ಟುವ ಅನಿವಾರ್ಯತೆ ಇದೆ. ಈ ಆಟಗಾರರು ಪವರ್ ಪ್ಲೇನಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದಲ್ಲಿ ಗೆಲುವಿನ ಕನಸು ನನಸಾಗುತ್ತದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಈ ಲೀಗ್‌ನಲ್ಲಿ ಒಂದೇ ಒಂದು ದೊಡ್ಡ ಇನಿಂಗ್ಸ್ ಕಟ್ಟಿಲ್ಲ. ಹೀಗಾಗಿ ಈ ಪ್ಲೇಯರ್ ಮೇಲೆ ಒತ್ತಡವಿದೆ. ಆರ್‌ಸಿಬಿ ವಿರುದ್ಧ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡಿದ್ದರೂ ಸಹ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

ಬುಮ್ರಾ ಮೇಲೆ ಒತ್ತಡ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಶೆರ್ಫೇನ್ ರುದರ್ಫೋರ್ಡ್ ಸೊಗಸಾದ ಆಟವನ್ನು ಆಡಿದ್ದರು. ಇವರು 31 ಎಸೆತಗಳಲ್ಲಿ 71 ರನ್‌ ಸಿಡಿಸಿ ಮಿಂಚಿದ್ದರು. ಹೀಗಾಗಿ ಇವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟ್ರೆಂಟ್‌ ಬೋಲ್ಟ್‌ ಹಾಗೂ ಹಾರ್ದಿಕ್ ಪಾಂಡ್ಯ ಪವರ್‌ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಬೇಕಿದೆ. ಇನ್ನು ಜಸ್ಪ್ರೀತ್ ಬುಮ್ರಾ ವಿಕೆಟ್‌ ಬೇಟೆ ನಡೆಸುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಶಾರ್ದೂಲ್‌ ಠಾಕೂರ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ದಾಳಿ ನಡೆಸಬೇಕಿದೆ.

ಯುವಕರೇ ಆಕರ್ಷಣೆ

ಪಂಜಾಬ್‌ ಕಿಂಗ್ಸ್‌ ತಂಡದಲ್ಲಿರುವ ಯುವ ಆಟಗಾರರಾದ ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್‌ ಸಿಂಗ್‌ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಫಾರ್ಮ್‌ನಲ್ಲಿದ್ದು, ಎದುರಾಳಿ ಬೌಲರ್‌ಗಳ ಯೋಜನೆಯನ್ನು ಬುಡಮೇಲು ಮಾಡಬಹುದು. ವೇಗದ ಬೌಲಿಂಗ್ ನೊಗವನ್ನು ಅರ್ಷದೀಪ್‌ ಸಿಂಗ್ ಹೊರಲಿದ್ದಾರೆ. ಇವರು ರನ್‌ಗಳಿಗೆ ಕಡಿವಾಣ ಹಾಕದೇ ಇರುವುದು ತಂಡದ ಚಿಂತೆಯನ್ನು ಹೆಚ್ಚು ಮಾಡಿದೆ. ಇವರು ವಿಕೆಟ್‌ ಬೇಟೆ ನಡೆಸಿದರೂ, ರನ್‌ ನೀಡುತ್ತಿದ್ದಾರೆ. ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ ಯಾವುದೇ ಪರಿಸ್ಥಿತಿಯಲ್ಲಾದರೂ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಸ್ಪಿನ್ ಬೌಲರ್‌ ಯಜುವೇಂದ್ರ ಚಾಹಲ್ ತಮ್ಮ ಪಿರ್ಕಿ ಬೌಲಿಂಗ್‌ನಿಂದ ಎದುರಾಳಿಗಳನ್ನು ಕಾಡಬೇಕಿದೆ. ಅಂದಾಗ ಅಜೇಯ ಓಟ ಮುನ್ನಡೆಯುತ್ತದೆ.

Story first published: Wednesday, April 15, 2026, 18:29 [IST]
Other articles published on Apr 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+