MI vs PBKS: ಮುಂಬೈ, ಪಂಜಾಬ್ ನಡುವೆ ಎರಡನೇ ಕ್ವಾಲಿಫೈಯರ್ ಫೈಟ್: ಇಲ್ಲಿದೆ ಮಹತ್ವದ ಅಂಕಿ ಅಂಶ
ಭಾನುವಾರ ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಫೈಟ್ ನಡೆಸಲಿವೆ. ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಮುಂಬೈ ಇಂಡಿಯನ್ಸ್ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಫೈಟ್‌ನಲ್ಲಿ ಗೆದ್ದ ತಂಡ 18ನೇ ಆವೃತ್ತಿಯ ಫೈನಲ್‌ನಲ್ಲಿ, ಆರ್‌ಸಿಬಿ ವಿರುದ್ಧ ಕಾದಾಟ ನಡೆಸಲಿದೆ. ಹಾಗಿದ್ದರೆ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್‌ನ ಕೆಲವು ಇಂಟ್ರಸ್ಟಿಂಗ್ ಅಂಕಿ ಅಂಶಗಳ ಮಾಹಿತಿ ಇಲ್ಲಿದೆ.

ಐಪಿಎಲ್‌ನಲ್ಲಿ ಪಂಜಾಬ್, ಮುಂಬೈ ಎಷ್ಟು ಬಾರಿ ಮುಖಾಮುಖಿಯಾಗಿವೆ?
18ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದೆ. ಈ ವೇಳೆ ಮುಂಬೈ ಹಾಗೂ ಪಂಜಾಬ್ ತಂಡಗಳು ಒಟ್ಟು 32 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಪಂಜಾಬ್ 15, ಮುಂಬೈ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಪಂಜಾಬ್, ಮುಂಬೈ ವಿರುದ್ಧದ ಪಂದ್ಯದಲ್ಲಿ ಗರಿಷ್ಠ ಮೊತ್ತ ಎಷ್ಟು?
ಮೇ 11, 2017ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಪಂಜಾಬ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 230 ರನ್ ಸಿಡಿಸಿತ್ತು. ಇದುವೇ ಉಭಯ ತಂಡಗಳ ನಡುವಿನ ಗರಿಷ್ಠ ಮೊತ್ತ.
ಅರ್ಷದೀಪ್ ಸಿಂಗ್ ವಿರುದ್ಧ ರೋಹಿತ್ ಶರ್ಮಾ ಅವರ ದಾಖಲೆ ಹೇಗಿದೆ?
ರೋಹಿತ್ ಶರ್ಮಾ ಎಡಗೈ ವೇಗದ ಬೌಲರ್‌ಗಳ ವಿರುದ್ಧ ರನ್ ಬಾರಿಸಲು ಪರದಾಟ ನಡೆಸಿದ್ದಾರೆ. ಈ ವೇಳೆ ಐಪಿಎಲ್‌ನಲ್ಲಿ ರೋಹಿತ್, ಅರ್ಷದೀಪ್ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅರ್ಷದೀಪ್ ಸಿಂಗ್ ಎಸೆದ 23 ಎಸೆತಗಳಲ್ಲಿ ರೋಹಿತ್ ಶರ್ಮಾ 28 ರನ್ ಬಾರಿಸಿದ್ದಾರೆ. ಈ ವೇಳೆ ಒಂದು ಬಾರಿ ಔಟ್ ಆಗಿದ್ದಾರೆ.
ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಹಾಲ್ ವಿರುದ್ದ ರೋಹಿತ್ ದಾಖಲೆ
ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಹಾಲ್ ಅವರ 38 ಎಸೆತಗಳಲ್ಲಿ ರೋಹಿತ್ ಶರ್ಮಾ 39 ರನ್ ಸಿಡಿಸಿದ್ದಾರೆ. ಈ ವೇಳೆ ಒಂದು ಬಾರಿ ಮಾತ್ರ ಔಟ್ ಆಗಿದ್ದಾರೆ.

ಪಂಜಾಬ್ ವಿರುದ್ಧ ಸೂರ್ಯಕುಮಾರ್ ಯಾದವ್ ಅಬ್ಬರ ಹೇಗಿದೆ?
ಪಂಜಾಬ್ ವಿರುದ್ಧ ಸೂರ್ಯ ಆಡಿದ 22 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದಾರೆ. ಒಟ್ಟಾರೆ ಪಂಜಾಬ್ ವಿರುದ್ಧ ಸೂರ್ಯಕುಮಾರ್ ಯಾದವ್ 562 ರನ್ ಸಿಡಿಸಿದ್ದಾರೆ.
ಜಸ್ಪ್ರಿತ್ ಬುಮ್ರಾ, ಪಂಜಾಬ್ ವಿರುದ್ಧ ಎಷ್ಟು ವಿಕೆಟ್ ಪಡೆದಿದ್ದಾರೆ?
ಜಸ್ಪ್ರಿತ್ ಬುಮ್ರಾ ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ 17 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ, ಪಂಜಾಬ್ ವಿರುದ್ಧ ಅಬ್ಬರಿಸಿದ್ದಾರಾ?
ಹಾರ್ದಿಕ್ ಪಾಂಡ್ಯ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರು ಪಂಜಾಬ್ ವಿರುದ್ಧದ ಆಡಿದ 16 ಪಂದ್ಯಗಳಲ್ಲಿ 282 ರನ್ ಸಿಡಿಸಿದ್ದಾರೆ. ಈ ವೇಳೆ 5 ವಿಕೆಟ್ ಗಳನ್ನು ಸಹ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿದ್ದಾರಾ?
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 19 ಪಂದ್ಯಗಳನ್ನು ಆಡಿದ್ದು 414 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications