MI vs SRH IPL 2025: ಮೂರನೇ ಗೆಲುವಿನ ಗಂಟು ಬಿಚ್ಚುವುದು ಯಾರು? ಮುಂಬೈ vs ಸನ್‌ರೈಸರ್ಸ್ ಹೋರಾಟ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಮುಂಬೈನ ವಾಂಖೇಡೆ ಅಂಗಳದಲ್ಲಿ ಬಿಗ್ ಫೈಟ್ ನಡೆಯಲಿದೆ. ಉಭಯ ತಂಡಗಳು ಈ ಲೀಗ್‌ನ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿವೆ. ಉಭಯ ತಂಡಗಳ ಬುಟ್ಟಿಯಲ್ಲಿ ತಲಾ ನಾಲ್ಕು ಅಂಕಗಳಿವೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಆದರೆ ಪ್ರಸಕ್ತ ವರ್ಷದ ಫಾರ್ಮ್ ಎರಡೂ ತಂಡಗಳ ನಿದ್ದೆ ಗೆಡಿಸಿದೆ. ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 23 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಮುಂಬೈ 13, ಎಸ್‌ಆರ್‌ಎಚ್ 10 ಗೆಲುವು ದಾಖಲಿಸಿದೆ. ಉಭಯ ತಂಡಗಳ ನಡುವಿನ ಕಾದಾಟದಲ್ಲಿ 277 ಗರಿಷ್ಠ ಸ್ಕೋರ್ ಆಗಿದೆ.

ಹೇಗಿದೆ ಪಿಚ್?
ಮುಂಬೈನ ವಾಂಖೇಡೆ ಮೈದಾನ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವು ನೀಡುತ್ತದೆ. ಈ ಮೈದಾನದಲ್ಲಿ ಚೇಸ್ ಮಾಡಲು ತಂಡಗಳು ಇಷ್ಟ ಪಡುತ್ತವೆ. ಆದರೆ 2024 ರಿಂದ ಈ ವರೆಗೆ ಈ ಮೈದಾನದಲ್ಲಿ ಆಡಲಾದ ಒಂಬತ್ತು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಐದು ಬಾರಿ ಗೆದ್ದಿದೆ.
ಲಯಕ್ಕೆ ಮರಳುತ್ತಾರಾ ಹಿಟ್ ಮ್ಯಾನ್
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಾಲು ಸಾಲು ಬಿಗ್ ಹಿಟರ್‌ಗಳು ಇದ್ದಾರೆ. ಆದರೆ ಈ ಪ್ಲೇಯರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಮುಂಬೈ ಕಾ ರಾಜಾ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ರೋಹಿತ್ ಶರ್ಮಾ, ಪ್ರಸಕ್ತ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರು ಲಯ ಕಂಡುಕೊಳ್ಳುವುದು ತಂಡಕ್ಕೆ ಮಹತ್ವದಾಗಿದೆ. ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧಿರ್ ತಂಡ ತಮಗೆ ನೀಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ. ಅಂದಾಗ ಮಾತ್ರ ಗೆಲುವಿನ ಕನಸು ಸಾಕಾರಗೊಳ್ಳಲಿದೆ.
ತಂಡಕ್ಕೆ ಜಸ್ಪ್ರಿತ್ ಬುಮ್ರಾ ಆಗಮನ ನಿಶ್ಚಿತವಾಗಿ ತಂಡಕ್ಕೆ ಹೊಸ ಬೂಸ್ಟ್ ನೀಡಿದೆ. ಬುಮ್ರಾ ಜೊತೆಗೆ ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಬಿಗುವಿನ ದಾಳಿ ಸಂಘಟಿಸಿ ಎದುರಾಳಿಗಳನ್ನು ಕಾಡಬೇಕಿದೆ. ಇನ್ನು ಸ್ಪಿನ್ ಬೌಲರ್‌ಗಳು ಪಿರ್ಕಿ ಕಮಾಲ್ ಪ್ರದರ್ಶಿಸಬೇಕಿದೆ.

ಮಾಜಿ ತಂಡದ ವಿರುದ್ಧ ಇಶಾನ್ ಕಣಕ್ಕೆ
ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ ತಂಡದ ವಿರುದ್ಧವೇ ಇಶಾನ್ ಕಿಶನ್ ಗುರುವಾರ ಕಣಕ್ಕೆ ಇಳಿಯಲಿದ್ದಾರೆ. ಇವರು ಲಯ ಕಂಡುಕೊಂಡಲ್ಲಿ ಮುಂಬೈ ಬೌಲರ್‌ಗಳನ್ನು ಕಾಡಬಲ್ಲರು. ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿರುವ ಅಭಿಷೇಕ್ ಶರ್ಮಾ, ಟೀಮ್ ಡೇವಿಟ್ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ವಿಕೆಟ್ ಕೀಪರ್ ಬ್ಯಾಟರ್ ಹ್ಯಾನ್ರಿಕ್ ಕ್ಲಾಸೇನ್ ಅನಿಕೇತ್ ವರ್ಮಾ, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಅಗತ್ಯ ಕಾಣಿಕೆ ನೀಡಬೇಕಿದೆ. ಕಳೆದ ಪಂದ್ಯದಲ್ಲಿ ದುಬಾರಿ ಆಗಿದ್ದ ಮೊಹಮ್ಮದ್ ಶಮಿ ತಮ್ಮ ಲೈನ್ ಹಾಗೂ ಲೆಂಥ್ ಸರಿಯಾಗಿ ಇಟ್ಟುಕೊಳ್ಳಬೇಕಿದೆ. ಪ್ಯಾಟ್ ಕಮಿನ್ಸ್, ಸೇರಿದಂತೆ ಉಳಿದ ಬೌಲರ್‌ಗಳು ಮುಂಬೈ ಬ್ಯಾಟರ್‌ಗಳನ್ನು ತವರಿನಲ್ಲಿ ಕಾಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications