ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಐಪಿಎಲ್ ವಿಜೇತರ ಹೆಸರಿಸಿದ ಇಂಗ್ಲೆಂಡ್‌ನ ಮೈಕಲ್ ವಾನ್

Mumbai Indians will win in IPL 2021, feels Michael Vaughan

ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಚಾಂಪಿಯನ್ಸ್ ಆಗಿ ಮಿನುಗಲಿರುವ ತಂಡವನ್ನು ಹೆಸರಿಸಿದ್ದಾರೆ. ಈ ಬಾರಿಯೂ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಗೆಲ್ಲಲಿದೆ ಎಂದು ವಾನ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರ ಪಟ್ಟಿಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರ ಪಟ್ಟಿ

ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿಯ ಐಪಿಎಲ್ ಮೇ 30ರಂದು ಕೊನೆಗೊಳ್ಳಲಿದೆ. ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಟ್ರೋಫಿ ಎತ್ತಲಿದೆ ಎಂದು ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಿಂದಿನ ಎರಡೂ ಸೀಸನ್‌ (2019 ಮತ್ತು 2020)ಗಳಲ್ಲಿ ಮುಂಬೈ ಚಾಂಪಿಯನ್ಸ್ ಪಟ್ಟ ಗೆದ್ದುಕೊಂಡಿದೆ.

ಟ್ವೀಟ್‌ ಮಾಡಿರುವ ವಾನ್, 'ಈ ಬಾರಿಯ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲಿದೆ. ಮುಂಬೈ ಒಂದು ವೇಳೆ ಫಾರ್ಮ್ ಕಳೆದುಕೊಂಡಿದ್ದರೆ ಸನ್ ರೈಸರ್ಸ್ ಹೈದರಾಬಾದ್ ತಂಡ 2021ರ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಲಿದೆ,' ಎಂದು ಬರೆದುಕೊಂಡಿದ್ದಾರೆ.

T20 World Cup : ಟಿ20 ವಿಶ್ವಕಪ್ ಭಾರತದಲ್ಲಿ ನಡೆಯುತ್ತಾ, ಇಲ್ವಾ?: ಐಸಿಸಿ ಮಾಹಿತಿT20 World Cup : ಟಿ20 ವಿಶ್ವಕಪ್ ಭಾರತದಲ್ಲಿ ನಡೆಯುತ್ತಾ, ಇಲ್ವಾ?: ಐಸಿಸಿ ಮಾಹಿತಿ

ಟಿ20 ವಿಚಾರದಲ್ಲಿ ಟೀಮ್ ಇಂಡಿಯಾಕ್ಕಿಂತಲೂ ಅತ್ಯುತ್ತಮ ತಂಡ ಮುಂಬೈ ಇಂಡಿಯನ್ಸ್ ಎಂದು ವಾನ್ ಹೇಳಿದ್ದಾರೆ. ಏಪ್ರಿಲ್ 9ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಚೆನ್ನೈಯಲ್ಲಿ ಈ ಪಂದ್ಯ 7.30 pmಗೆ ಆರಂಭಗೊಳ್ಳಲಿದೆ.

Story first published: Wednesday, April 7, 2021, 22:38 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X