IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಅಂತೂ ಇಂತು ಮುಂಬೈ ಇಂಡಿಯನ್ಸ್ ತಂಡದ ಕ್ಯಾಂಪ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಅಲ್ಲದೆ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸಹ ಕ್ಯಾಂಪ್ ಸೇರಿಕೊಂಡಿದ್ದಾರೆ. ಇನ್ನೇನಿದ್ದರೂ ಯುದ್ಧಕ್ಕೆ ಸನ್ನದ್ಧರಾಗಲು ಸೈನ್ಯ ರೆಡಿ ಆಗುತ್ತಿದೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಪತ್ರಕರ್ತರು ಎಸೆದ ಬೌನ್ಸರ್‌ಗೆ ಉತ್ತರಿಸಲು ವಿಫಲರಾಗಿ ಮೌನಕ್ಕೆ ಶರಣಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಮಾರ್ಕ್ ಬೌಚರ್ ಸೋಮವಾರ ಪ್ರತಕರ್ತರ ಸಮ್ಮುಖದಲ್ಲಿ ಕಾಣಿಸಿಕೊಂಡರು. ಇವರಿಬ್ಬರಿಗೂ ಪತ್ರಕರ್ತರ ಛಾವಣಿಯಿಂದ ಬರುವ ಬೌನ್ಸರ್ ಬಗ್ಗೆ ಮೊದಲೇ ಅರಿವಿತ್ತು. ಅದಕ್ಕೆ ಇಬ್ಬರೂ ಸಿದ್ಧ ಉತ್ತರವನ್ನು ಸಹ ತಯಾರಿಸಿಕೊಂಡು ಬಂದಿದ್ದರು.

ರೋಹಿತ್‌ರಿಂದ ಪಟ್ಟ ಕಸಿದುಕೊಂಡ ಮುಂಬೈ
ಮುಂಬೈ ಇಂಡಿಯನ್ಸ್ 16 ಆವೃತ್ತಿಗಳಲ್ಲಿ ಆಡಿದ ಅನುಭವ ಹೊಂದಿದೆ. ಆದರೆ ಈ ಒಂದು ಡಿಸಿಜನ್ ಮಾತ್ರ ನಿಜಕ್ಕೂ ಮುಂಬೈ ಮ್ಯಾನೇಜ್ಮೆಂಟ್‌ಗೆ ನುಂಗಲಾರದ ಬಿಸಿ ತುಪ್ಪದಂತೆ ಭಾಸವಾಯಿತು. ಅದು ಯಾವ ಮೂಹರ್ತದಲ್ಲಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿ, ಮುಂಬೈ ಜೆರ್ಸಿ ನೀಡಿದರೋ ಏನೋ ಆಗಿನಿಂದಲೂ ಮುಂಬೈ ತಂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕೆ ಕಾರಣ ಐದು ಬಾರಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಸಿದು ಕೊಂಡು, ಹಾರ್ದಿಕ್ ಪಾಂಡ್ಯವರಿಗೆ ನೀಡಲಾಯಿತು.
ಈ ಒಂದು ನಿರ್ಧಾರ ಮುಂಬೈ ತಂಡದ ಅಭಿಮಾನಿಗಳನ್ನು ಕೆರಳಿಸಿತು. ಅದ್ರಲ್ಲೂ ಹಿಟ್ ಮ್ಯಾನ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಸಾಮಾಜಿಕ ತಾಣದಲ್ಲಿ ಹೊರ ಹಾಕಿದರು. ಅಲ್ಲದೆ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಮತ್ತೊಮ್ಮೆ ನಾಯಕತ್ವವನ್ನು ನೀಡಬೇಕೆಂದು ಒತ್ತಾಯಿಸಿದರು. ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವೂ ನಡೆಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ, ಮುಂಬೈ ಇಂಡಿಯನ್ಸ್‌ನಿಂದ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಕಸಿದುಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ಮಾರ್ಕ್ ಬೌಚರ್‌ಗೆ ಕೇಳಲಾಯಿತು. ಆ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಮೌನ ಶರಣಾದರು. ಆದರೆ, ಈ ಪ್ರಶ್ನೆಯ ಹೊರತಾಗಿ, ಹಾರ್ದಿಕ್ ಪಾಂಡ್ಯ ಅವರಿಗೆ ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಯನ್ನು ಕೇಳಲಾಯಿತು, ಅವರು ಬಹಿರಂಗವಾಗಿ ಮಾತನಾಡಿದರು.
ರೋಹಿತ್ ಬಗ್ಗೆ ಹಾರ್ದಿಕ್ ಹೇಳಿದ್ದೇನು?
ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಹಾರ್ದಿಕ್‌ಗೆ ನಾಯಕತ್ವ ನೀಡಿದಕ್ಕೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಕೇಳಿದಾಗ, ಮುಂಬೈನ ನೂತನ ನಾಯಕ ಹಾರ್ದಿಕ್ ಪಾಂಡ್ಯ ಇನ್ನೊಂದು ದಿಕ್ಕಿನತ್ತ ನೋಡತೊಡಗಿದರು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ನನ್ನ ಸಂಪೂರ್ಣ ವೃತ್ತಿಜೀವನವನ್ನು ನಡೆದಿದೆ. ಮತ್ತು ರೋಹಿತ್ ಶರ್ಮಾ ನನ್ನ ಮೇಲೆ ಕೈ ಹಾಕಿ ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹಾರ್ದಿಕ್ ಹೇಳಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಏನು ಸಾಧಿಸಿದೆಯೋ ಅದನ್ನು ನಾನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.
ಕೋಚ್ ಮೌನವೇಕೆ?
ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಮೌನವಾಗಿರುವುದಕ್ಕೆ ಅವರ ಹಿಂದಿನ ವಿವಾದಗಳೇ ದೊಡ್ಡ ಕಾರಣ. ಕೆಲವು ತಿಂಗಳ ಹಿಂದೆ, ಪಾಡ್‌ಕ್ಯಾಸ್ಟ್‌ನಲ್ಲಿ, ಮಾರ್ಕ್ ಬೌಚರ್‌ಗೆ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಅವರೊಂದಿಗೆ ಚರ್ಚಿಸಿಯೇ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು. ಈ ಒಂದು ಹೇಳಿಕೆ ವಿವಾದವನ್ನು ಸೃಷ್ಟಿಸಿತ್ತು. ಅಲ್ಲದೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಹ್ದೇಹ್ ಕೆಂಡ ಕಾರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications