ಹದಿಹರೆಯದ ಮುಂಬೈ ಕ್ರಿಕೆಟರ್ ಮುಷೀರ್ ಖಾನ್‌ಗೆ 3 ವರ್ಷಗಳ ನಿಷೇಧ!

ಮುಂಬೈ, ಜನವರಿ 18: ಮುಂಬೈ ಅಂಡರ್-16 ಕ್ರಿಕೆಟ್ ತಂಡದ ನಾಯಕ ಮುಷೀರ್ ಖಾನ್‌ಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) 3 ವರ್ಷಗಳ ನಿಷೇಧ ಹೇರಿದೆ. ಪಂದ್ಯದ ವೇಳೆ ಬಾಲಕ ಅಶ್ಲೀಲ ವರ್ತನೆ ತೋರಿಸಿದ್ದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಆಂಧ್ರ ಪ್ರದೇಶದ ಕಡಪಾದಲ್ಲಿ ಕೆಲ ವಾರಗಳ ಹಿಂದೆ ನಡೆದಿದ್ದ ವಿಜಯ್ ಮರ್ಚೆಂಟ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಮುಷೀರ್ ಅನುಚಿತ ವರ್ತನೆ ತೋರಿಕೊಂಡಿದ್ದರು ಎಂದು ಮುಷೀರ್ ತಂಡದ ಸಹ ಆಟಗಾರ ವೇದಾಂತ ಗಾದಿಯಾ ದೂರಿತ್ತಿದ್ದರು.
ಮುಷೀರ್ ಖಾನ್ ಅವರು ಭಾರತ ಅಂಡರ್-19 ತಂಡದ ಮುಂಬೈ ಆಟಗಾರ ಸರ್ಫರಾಜ್ ಖಾನ್ ಅವರ ತಮ್ಮ. ಬಾಲಕನ ಅಶ್ಲೀಲ ವರ್ತನೆ ವಿಚಾರಕ್ಕೆ ಸಂಬಂಧಿಸಿ ವರದಿ ನೀಡುವಂತೆ ತಂಡದ ಮ್ಯಾನೇಜರ್ ವಿಘ್ನೇಶ್ ಕದಮ್ ಅವರಿಗೆ ಎಂಸಿಎ ತಿಳಿಸಿತ್ತು.
ಮುಷೀರ್ ವಿಚಾರವಾಗಿ ಎಂಸಿಎ ಗುರುವಾರ (ಜನವರಿ 17) ವಿಚಾರಣಾ ಸಭೆ ಕರೆದಿತ್ತು. ವಿಚಾರಣೆಯಲ್ಲಿ ಖಾನ್-ಗಾದಿಯಾ, ತಂಡದ ಸದಸ್ಯರಾದ ವರುಣ್ ರಾವ್, ಸೌರಬ್ ಸಿಂಗ್, ಮ್ಯಾನೇಜರ್ ಕದಮ್, ಕೋಚ್ ಸಂದೇಶ್ ಕಾವ್ಲೆ ಮತ್ತು ಆಯ್ಕೆ ಸಮಿತಿಯ ಅತುಲ್ ರಣಾದೆ ಪಾಲ್ಗೊಂಡಿದ್ದರು. ವಿಚಾರಣೆ ವೇಳೆ ಖಾನ್ ತಪ್ಪಿತಸ್ಥನಾಗಿ ಕಂಡು ಬಂದಿದ್ದರು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications