Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ ವಿಜೇತ ತಂಡದ ಸದಸ್ಯ ಡೆಲ್ಲಿ ಬೌಲಿಂಗ್ ಕೋಚ್

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ ಪರ್ವ ಮುಂದುವರೆದಿದೆ. ಕೋಚ್‌ ಸ್ಥಾನವನ್ನು ಹೇಮಂಗ್ ಬದಾನಿ ಅಲಂಕರಿಸಿದ ಬಳಿಕ ಸಹಾಯಕ ಸಿಬ್ಬಂದಿಗಳ ನೇಮಕವೂ ಭರದಿಂದ ನಡೆದಿದೆ. ಈ ಮೂಲಕ ಕ್ಯಾಪಿಟಲ್ಸ್‌ ಮೊದಲ ಟ್ರೋಫಿ ಹುಡುಕಾಟದಲ್ಲಿ, ಹರಾಜಿನ ವೇಳೆ ಬಲಿಷ್ಠ ತಂಡವನ್ನು ಕಟ್ಟುವ ಪ್ಲ್ಯಾನ್ ಮಾಡಿಕೊಂಡಿದೆ. ರಿಕಿ ಪಾಂಟಿಂಗ್‌ ಅವರಿಂದ ತೆರವಾದ ಸ್ಥಾನಕ್ಕೆ ಹೇಮಂಗ್ ಬದಾನಿ ಕುತಿದ್ದಾರೆ. ನಿರ್ದೇಶಕ ಸ್ಥಾನವನ್ನು ವೇಣುಗೋಪಾಲ್ ರಾವ್ ಅಲಂಕರಿಸಿದ್ದಾರೆ. ಈಗ ತಂಡದ ಬೌಲಿಂಗ್ ಕೋಚ್‌ ಆಗಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್‌ ಎಂಟ್ರಿ ನೀಡಿದ್ದಾರೆ.

2018 ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದ ಮುನಾಫ್ ಪಟೇಲ್ ಮೊದಲ ಬಾರಿಗೆ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪರ ಮುನಾಫ್ ಪಟೇಲ್ ಐಪಿಎಲ್‌ ಪಂದ್ಯಗಳನ್ನು ಆಡಿದ್ದಾರೆ. ಬೌಲಿಂಗ್ ಕೋಚ್ ಆಗಿ ಮುನಾಫ್ ಪಟೇಲ್ ನೇಮಕವನ್ನು ಡೆಲ್ಲಿ ಕ್ಯಾಪಿಟಲ್ಸ್ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದೆ.

Munaf Patel Appointed as Bowling Coach of Delhi Capitals Ahead of IPL 2025

ಮಾಜಿ ವೇಗಿ ನೇಮಕ

ಈ ಮೊದಲು ಡೆಲ್ಲಿ ತಂಡದ ಬೌಲಿಂಗ್ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಹೋಪ್ಸ್ ಅವರ ಸ್ಥಾನವನ್ನು ಮುನಾಫ್‌ ತುಂಬಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ಕುಲದೀಪ್ ಯಾದವ್ ಮತ್ತು ಅಭಿಷೇಕ್ ಪೊರೆಲ್ ಅವರನ್ನು ಉಳಿಸಿಕೊಂಡಿದೆ. ಡೆಲ್ಲಿ ಉಳಿಸಿಕೊಂಡ ತಂಡದಲ್ಲಿ ಒಬ್ಬನೇ ಒಬ್ಬ ವೇಗದ ಬೌಲರ್‌ ಇಲ್ಲದೇ ಇರುವ ಕಾರಣ ಹರಾಜಿನಲ್ಲಿ ಸ್ಟಾರ್ ಬೌಲರ್‌ಗಳಿಗೆ ಮಣೆ ಹಾಕುವ ಅನಿವಾರ್ಯತೆ ಇದೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್‌ ಆಗಿದ್ದ ರಿಕಿ ಪಾಂಟಿಂಗ್‌, ಈ ವರ್ಷದ ಆರಂಭದಲ್ಲಿ ಕೋಚ್‌ ಸ್ಥಾನವನ್ನು ಬಿಟ್ಟಿದ್ದರು. ಕೆಲವು ದಿನಗಳ ಬಳಿಕ ಅವರು ಪಂಜಾಬ್‌ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಗೊಂಡರು. ಡೆಲ್ಲಿ ತನ್ನ ನಾಯಕ ರಿಷಬ್‌ ಪಂತ್‌ ಅವರನ್ನು ಸಹ ರಿಲೀಸ್ ಮಾಡಿದ್ದು, ಅಕ್ಷರ್‌ ಪಟೇಲ್‌ ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಮುನಾಫ್ ಪಟೇಲ್ ಭಾರತದ ಪರ 13 ಟೆಸ್ಟ್, 70 ಏಕದಿನ, 3 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ಭಾರತ ತವರಿನಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ತಂಡದ ಭಾಗವಾಗಿದ್ದರು.

Story first published: Tuesday, November 12, 2024, 23:48 [IST]
Other articles published on Nov 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+