Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

25 ಎಸೆತಗಳಲ್ಲಿ ಶತಕ ಸಿಡಿಸಿದ ಸ್ಕಾಟ್ಲೆಂಡ್‌ ಬ್ಯಾಟ್ಸ್‌ಮನ್‌

Munsey blasts 25-ball hundred, 6 sixes in an over

ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಚಚ್ಚಿದ ಜಾರ್ಜ್‌ ಮುನ್ಸೇ

ಹೊಸದಿಲ್ಲ, ಏಪ್ರಿಲ್‌ 23: ಸ್ಕಾಟ್ಲೆಂಡ್‌ನ ಬ್ಯಾಟ್ಸ್‌ಮನ್‌ ಜಾರ್ಜ್‌ ಮುನ್ಸೇ ಕೇವಲ 25 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

ಗ್ಲೌಸ್ಟರ್‌ಶೈರ್‌ ಮತ್ತು ಬಾತ್‌ ಕ್ರಿಕೆಟ್‌ ಕ್ಲಬ್‌ ನಡುವಣ ಅನಧಿಕೃತ ಟಿ20 ಪಂದ್ಯದಲ್ಲಿ ಗ್ಲೌಸ್ಟರ್‌ಶೈರ್‌ ಪರ ಅಬ್ಬರಿಸಿ ಬೊಬ್ಬಿರಿದ ಎಡಗೈ ಬ್ಯಾಟ್ಸ್‌ಮನ್‌ ಮುನ್ಸೇ, 25 ಎಸತಗಳಲ್ಲಿ ಶತಕ ಸಿಡಿಸಿ ಒಟ್ಟಾರೆ 39 ಎಸೆತಗಳಲ್ಲಿ 147 ರನ್‌ಗಳನ್ನು ಚಚ್ಚಿದರು.

ಮುನ್ಸೇ ಜತೆಗೂಡಿ ಎದುರಾಳಿ ತಂಡದ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಜಿಪಿ ವಿಲ್ಲೋ ಕೂಡ 53 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಬಳಿಕ ೩ನೇ ಕ್ರಮಾಂಕದಲ್ಲಿಆಡಿದ ಟಾಮ್‌ ಪ್ರೈಸ್‌ 23 ಎಸೆತಗಳಲ್ಲಿ 50 ರನ್‌ಗಳನ್ನು ಸಿಡಿದರು. ಬ್ಯಾಟ್ಸ್‌ಮನ್‌ಗಳ ಅಬ್ಬರದೊಂದಿಗೆ ಗ್ಲೌಸ್ಟರ್‌ಶೈರ್‌ 20 ಓವರ್‌ಗಳಲ್ಲಿ ನಂಬಲು ಅಸಾಧ್ಯವಾದ 323/3 ರನ್‌ಗಳ ಶಿಖರವನ್ನೇ ನಿರ್ಮಿಸಿತು.

ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆ ಸೇರಿಸಿದ ಮುನ್ಸೇ ಗಳಿಸಿದ್ದು ಕೇವಲ ನಾಲ್ಕು ಫೋರ್‌ ಮಾತ್ರ. ಆದರೆ ಸಿಡಿಸಿದ್ದು ಬರೋಬ್ಬರಿ 20 ಸಿಕ್ಸರ್‌ಗಳನ್ನು. ಅದರಲ್ಲೂ ಓವರ್‌ ಒಂದರಲ್ಲೇ 6 ಸಿಕ್ಸರ್‌ ಸಿಡಿಸಿ ಅಕ್ಷರಶಃ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದರು.

ಅಂತಿಮವಾಗಿ ಪಂದ್ಯದಲ್ಲಿ ಗ್ಲೌಸ್ಟರ್‌ ತಂಡ 112 ರನ್‌ಗಳ ಜಯ ದಾಖಲಿಸಿತು.

Story first published: Monday, April 22, 2019, 21:30 [IST]
Other articles published on Apr 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+